Advertisement

ಏರ್ ಶೋ ರಿಹರ್ಸಲ್ ನಲ್ಲಿ ಎರಡು ಯುದ್ಧವಿಮಾನಗಳ ಢಿಕ್ಕಿ

06:48 AM Feb 19, 2019 | Team Udayavani |

ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ ಏರ್ ಶೋ ತಾಲೀಮಿನಲ್ಲಿ ತೊಡಗಿಕೊಂಡಿದ್ದ ಎರಡು ಯುದ್ಧವಿಮಾನಗಳು ಪರಸ್ಪರ ಢಿಕ್ಕಿ ಹೊಡೆದುಕೊಂಡಿರುವ ಘಟನೆ ನಡೆದಿದೆ. ಸೂರ್ಯ ಕಿರಣ್ ಜೆಟ್ ವಿಮಾನಗಳು ಪರಸ್ಪರ ಢಿಕ್ಕಿ ಹೊಡೆದುಕೊಂಡಿದ್ದು ಅದೃಷ್ಟವಶಾತ್ ಎರಡೂ ಯುದ್ಧವಿಮಾನಗಳ ಪೈಲಟ್ ಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ. ಆದರೆ ಇಬ್ಬರು ಪೈಲಟ್ ಗಳಲ್ಲಿ ಓರ್ವ ಪೈಲಟ್ ಇನ್ನೂ ಪತ್ತೆಯಾಗಿಲ್ಲ. ಅವರಿಗಾಗಿ ಶೋಧಕಾರ್ಯವನ್ನು ಮುಂದುವರಿಸಲಾಗಿದೆ. ಗಾಯಗೊಂಡಿರುವ ಇನ್ನೋರ್ವ ಪೈಲಟ್ ನನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಸೂರ್ಯಕಿರಣ್ ಎಂಬುದು ಭಾರತೀಯ ವಾಯುಸೇನೆಗೆ ಸೇರಿರುವ ಲಘುಯುದ್ಧ ವಿಮಾನವಾಗಿದೆ. ಇಂದು ಬೆಳಿಗ್ಗೆ ಈ ಯುದ್ಧ ವಿಮಾನಗಳು ತಾಲೀಮಿನಲ್ಲಿ ನಿರತವಾಗಿದ್ದ ಸಂದರ್ಭದಲ್ಲಿ ಏಕಾಏಕಿ ಪರಸ್ಪರ ಢಿಕ್ಕಿ ಹೊಡೆದುಕೊಂಡವು ಮತ್ತು ತಕ್ಷಣವೇ ಈ ವಿಮಾನಗಳು ಭೂಮಿಗೆ ಅಪ್ಪಳಿಸಿದವು. ಆದರೆ ಈ ಸಂದರ್ಭದಲ್ಲಿ ಎರಡೂ ವಿಮಾನಗಳ ಪೈಲಟ್ ಗಳು ತುರ್ತುನಿರ್ಗಮನ ದ್ವಾರದ ಮೂಲಕ ಹೊರಜಿಗಿದ ಕಾರಣ ಅವರಿಗೆ ಯಾವುದೆ ಅಪಾಯ ಉಂಟಾಗಲಿಲ್ಲ. ಪರಸ್ಪರ ಢಿಕ್ಕಿ ಹೊಡೆದುಕೊಂಡ ವಿಮಾನಗಳು ಜನವಸತಿ ಪ್ರದೇಶದ ಮೇಲೆಯೇ ಬಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಓರ್ವ ನಾಗರಿಕನಿಗೂ ಗಾಯಗಳಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. HAL ನಿರ್ಮಿತ ವಿಮಾನಗಳು ಇದಾಗಿದ್ದು ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ವಾಯುಪಡೆ ಆದೇಶಿಸಿದೆ.

ಢಿಕ್ಕಿ ಬಳಿಕ ಎರಡೂ ಯುದ್ಧ ವಿಮಾನಗಳು ಹೊತ್ತಿ ಉರಿದ ಕಾರಣ ಆ ಪರಿಸರದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದೆ. ಏರ್ ಶೋಗೆ ಒಂದು ದಿನ ಬಾಕಿಯಿರುವಾಗಲೇ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next