Advertisement

ಲಾರಿ ಮಾಲೀಕರ ಮೇಲಿನ ದೌರ್ಜನ್ಯ ತಡೆಗೆ ಹೋರಾಡಿ

01:23 PM Jul 17, 2017 | Team Udayavani |

ದಾವಣಗೆರೆ: ಮಾಮೂಲಿ ನೀಡಿಕೆ ಸೇರಿದಂತೆ ಲಾರಿ ಮಾಲಿಕರ ಮೇಲಾಗುತ್ತಿರುವ ದೌರ್ಜನ್ಯಗಳ ವಿರುದ್ಧ ಸಂಘಟಿತರಾಗಿ ಹೋರಾಟ ಮಾಡಲು ಸಿದ್ಧರಾಗಿ ಎಂದು ಲಾರಿ ಮಾಲಿಕರ ಸಂಘದ ರಾಜ್ಯ ಅಧ್ಯಕ್ಷ ಬಿ. ಚನ್ನಾರೆಡ್ಡಿ ಕರೆಕೊಟ್ಟಿದ್ದಾರೆ.

Advertisement

ತ್ರಿಶೂಲ್‌ ಕಲಾಭವನದಲ್ಲಿ ಲಾರಿ ಮಾಲಿಕರ ಸಂಘ, ಫೆಡರೇಷನ್‌ ಆಫ್‌ ಕರ್ನಾಟಕ ಸಂಘದಿಂದ ಆಯೋಜಿಸಿದ್ದ ರಾಜ್ಯ ಲಾರಿ ಮಾಲಿಕರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಇವತ್ತು ಅನೇಕ ಸಮಸ್ಯೆಗಳು ಲಾರಿ ಮಾಲಿಕರನ್ನು ಕಾಡುತ್ತಿವೆ. ಸೀ³ಡ್‌ ಬ್ರೇಕರ್‌, ಮಾಮೂಲಿ ನೀಡಿಕೆ, ಟೋಲ್‌ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳಿವೆ. ಇವುಗಳ ವಿರುದ್ಧ ಹೋರಾಟ ಮಾಡಲು ಸಂಘಟಿತರಾಗಬೇಕಿದೆ ಎಂದರು.

ಸಮಾಜಕ್ಕೆ ಅಗತ್ಯ ಸರಕು ಸೇವೆ ಒದಗಿಸುವ ಲಾರಿ ಮಾಲಿಕರು ಪ್ರತಿ ಹಂತ ದಲ್ಲೂ ಸರ್ಕಾರಿ ಮತ್ತು ಅಧಿಕಾರಿಗಳಿಂದ ಕಿರುಕುಳ ಅನುಭವಿಸುತ್ತಿದ್ದಾರೆ. ಸರ್ಕಾರದ ಹೊಸ ನೀತಿ, ಸಮಸ್ಯೆ ಕುರಿತು ಹೋರಾಟ ನಡೆಸಿದರೆ ಸ್ಪಂದಿಸುತ್ತಿಲ್ಲ. ಲೋಡಿಂಗ್‌, ಅನ್‌ಲೋಡಿಂಗ್‌ ನಮಗೊಂದು ದೊಡ್ಡ ಸಮಸ್ಯೆ ಆಗಿದೆ. ಎಲ್ಲದಕ್ಕೂ ಮಾಮೂಲಿ ಕೊಡಬೇಕಿದೆ. ಮೊದಲೆಲ್ಲಾ 5-10 ರೂ.ನಲ್ಲಿ
ಮುಗಿಯುತ್ತಿದ್ದ ಸಮಸ್ಯೆ ಇದೀಗ 200 ರೂ.ನಿಂದ 2000 ರೂ.ವರೆಗೆ ಮಾಮೂಲಿ ಕೊಡುವ ಸಮಸ್ಯೆ ಇದೆ ಎಂದು ಹೇಳಿದರು.

ಜಿಎಸ್‌ಟಿ ಜಾರಿಯಾದ ಮೇಲೆ ಚೆಕ್‌ ಪೋಸ್ಟ್‌ ತೆಗೆಯಲಾಗಿದೆ ಎಂದು ಹೇಳುತ್ತಾರೆ. ಆದರೆ, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳುತ  ನಿಖೆ ಹೆಸರಲ್ಲಿ ಹಣ ವಸೂಲು ಮಾಡುತ್ತಿರುವ ಪಕರಣಗಳು ಕಂಡು ಬರುತ್ತಿವೆ. ಕಾನೂನು ಪ್ರಕಾರ ನೋಂದಣಿಮಾಡಿಕೊಂಡಿರುತ್ತೇವೆ. ವಿಮೆ ಕಟ್ಟಿರುತ್ತೇವೆ. ಹಾಗಿದ್ದರೂ ರಸ್ತೆಯಲ್ಲಿ ನಿಲ್ಲಿಸಿ, ವಾಹನ ತಪಾಸಣೆ ಮಾಡುತ್ತಾರೆ. ಹೀಗೆ
ಮಾಡುವುದು ಯಾಕೆ. ಕಚೇರಿಯಲ್ಲಿರುವ ದಾಖಲಾತಿ ಪರಿಶೀಲಿಸಿ, ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ಉದ್ದೇಶ ಪೂರಕವಾಗಿ ಯಾವ ಮಾಲಿಕನೂ ವಾಯುಮಾಲಿನ್ಯ ಮಾಡುತ್ತಿಲ್ಲ. ವಾಯು ಮಾಲಿನ್ಯಕ್ಕೆ ಮೊದಲೆಲ್ಲಾ ವಾಹನಗಳು ಕಾರಣ ಎಂದು ಹೇಳುತ್ತಿದ್ದರು. ಕೆಲ ದಿನಗಳ ನಂತರ ವಾಯು ಮಾಲಿನ್ಯಕ್ಕೆ ಕಾರಣ ಡೀಸೆಲ್‌ ಎಂಬುದು ತಿಳಿದುಬಂತು. ಇದನ್ನು ತಪ್ಪಿಸಲು ಒಂದೇ ಕಡೆ ಡೀಸೆಲ್‌ ಹಾಕಿಸುವ ವ್ಯವಸ್ಥೆ ಮಾಡಲಿ. ಬೆಂಗಳೂರು ಸೇರಿದಂತೆ ವಿವಿಧ ನಗರ ಪ್ರದೇಶದಲ್ಲಿ ಡೀಸೆಲ್‌ ಹಾಕಿಸಿಕೊಂಡಾಗ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ, ತಾಲ್ಲೂಕು ಮಟ್ಟದ ಬಂಕ್‌ಗಳಲ್ಲಿ ತುಂಬಿಸಿಕೊಂಡಾಗ ಸಮಸ್ಯೆ ಆಗುತ್ತಿವೆ
ಎಂದು ಹೇಳಿದರು.

ಡಿಸಿ ಡಿ.ಎಸ್‌. ರಮೇಶ್‌ ಮಾತನಾಡಿ, ಲಾರಿ ಮಾಲಿಕರು, ಸಾರ್ವಜನಿಕರು, ಅಧಿಕಾರಿಗಳು ಪರಸ್ಪರ ಜವಾಬ್ದಾರಿ ಅರಿತುಕೊಂಡು
ಕೆಲಸಮಾಡಬೇಕಿದೆ. ಉತ್ತಮ ಸಂಬಂಧ ಇಟ್ಟುಕೊಂಡು ಹೋದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಯಾವುದೇ ಕಾರಣಕ್ಕೂ ಪರಸ್ಪರ ಸಂಬಂಧ ಇಲ್ಲದವರಂತೆ ವರ್ತಿಸಬಾರದು. ಲಾರಿ ಮಾಲಿಕರು ಸಾರ್ವಜನಿಕರ ಸಮಸ್ಯೆಗಳನ್ನು ಅರಿತು, ಸಾರ್ವಜನಿಕರು ಲಾರಿ ಮಾಲಿಕರ ಸಮಸ್ಯೆ ಅರಿತು, ಪರಸ್ಪರ ಸಹಕಾರ ತೋರಿದರೆ ಸಮಸ್ಯೆಗಳೇ ಉದ್ಭವಿಸುವುದಿಲ್ಲ ಎಂದರು.

Advertisement

ನಗರಪಾಲಿಕೆ ಸದಸ್ಯ ರಾಜಶೇಖರ್‌ ಗೌಡ್ರು, ದೂಡಾ ಮಾಜಿ ಅಧ್ಯಕ್ಷ ಆಯುಬ್‌ ಪೈಲ್ವಾನ್‌, ಸಂಘದ ಜಿ ಲ್ಲಾ ಧ್ಯಕ್ಷ ಪ್ರಧಾನ ಕಾರ್ಯದರ್ಶಿ ಗೋಪಾಲ ಸ್ವಾಮಿ, ಜಿಲ್ಲಾಧ್ಯಕ್ಷ ನನ್ನೂ ಸಾಬ್‌ ಇತರರು ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next