Advertisement

ಆರ‌ಡಿ ಹೈಟ್‌ ನಿಂತ್ರೆ ಫೈಟ್‌

11:21 PM Jul 04, 2019 | Team Udayavani |

ಗಾಂಧಿನಗರದಲ್ಲಿ ಈ ವಾರ ಮತ್ತೂಂದು ಔಟ್‌ ಆ್ಯಂಡ್‌ ಔಟ್‌ ಮಾಸ್‌ ಆ್ಯಕ್ಷನ್‌ ಚಿತ್ರ ತೆರೆಗೆ ಬರೋದಕ್ಕೆ ರೆಡಿಯಾಗಿದೆ. ಅದರ ಹೆಸರು ‘ಒಂಟಿ’. ಈ ಹಿಂದೆ ಕೆಲ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ, “ಈ ಸಂಜೆ’ ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪರಿಚಯವಾಗಿದ್ದ ಆರ್ಯ ಎರಡನೇ ಬಾರಿ ಈ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

Advertisement

ಈಗಾಗಲೇ “ಒಂಟಿ’ ಚಿತ್ರ¨ ಪೋಸ್ಟರ್‌, ಟ್ರೇಲರ್‌ ಮತ್ತು ಹಾಡುಗಳು  ಡುಗಡೆಯಾಗಿದ್ದು, ಎಲ್ಲವೂ ಇದೊಂದು ಪಕ್ಕಾ ಆ್ಯಕ್ಷನ್‌ ಚಿತ್ರ ಅನ್ನೋದನ್ನ ಹೇಳುತ್ತಿವೆ. ಇನ್ನು ಚಿತ್ರದ
ಬಿಡುಗಡೆಗೂ ಮುನ್ನ ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, “ಒಂಟಿ’ ಚಿತ್ರದ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿತು. ಚಿತ್ರದ ಬಗ್ಗೆ ಮೊದಲು ಮಾತನಾಡಿದ ನಿರ್ದೇಶಕ ಶ್ರೀ, “ಮನುಷ್ಯನ ಜೀವನದಲ್ಲಿ ಪರಿಸ್ಥಿತಿ ಅನ್ನೋದು ಹೇಗೆ ಆಟವಾಡುತ್ತದೆ ಅನ್ನೋ ಎಳೆಯನ್ನ ಇಟ್ಟುಕೊಂಡು ಈ ಚಿತ್ರ ಮಾಡಿದ್ದೇವೆ. ಪರಿಸಿಸ್ಥಿಯಿಂದ ಏನು ಬೇಕಾದ್ರೂ ಆಗಬಹುದು. ರಾಮನಾಗಿದ್ದವನು ರಾವಣನಾಗುತ್ತಾನೆ. ರಾವಣನಾದವನು
ರಾಮನಾಗುತ್ತಾನೆ. ಕಥಾ ನಾಯಕನಿಗೆ ಯಾವುದೋ ಒಂದು ಸಮಯದಲ್ಲಿ
“ಒಂಟಿ’ತನ ಕಾಡುತ್ತೆ. ಅದು ಹೇಗೆ, ಎಲ್ಲಿ, ಅದಕ್ಕೆ ಕಾರಣ ಯಾರು, ಅದರ
ಪರಿಣಾಮವೇನು ಅನ್ನೋದೆ ಈ ಚಿತ್ರ’ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು.

ಚಿತ್ರದ ಬಗ್ಗೆ ನಾಯಕ ಆರ್ಯ ಕೂಡ ಸಾಕಷ್ಟು ಭರವಸೆಯ ಮಾತುಗಳನ್ನಾಡುತ್ತಾರೆ.
ಈಗಾಗಲೇ ಬಿಡುಗಡೆಯಾಗಿರುವ ‘ಒಂಟಿ’ ಚಿತ್ರದ ಹಾಡುಗಳು, ಟ್ರೇಲರ್‌ಗಳಿಗೆ ಆಡಿಯನ್ಸ್‌ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಬಿಡುಗಡೆ ಮುನ್ನವೇ “ಒಂಟಿ’ ಚಿತ್ರದ ಹಿಂದಿ ಡಬ್ಬಿಂಗ್‌ ಹಕ್ಕುಗಳು ಬರೋಬ್ಬರಿ ಒಂದು ಕೋಟಿಗೆ ಸೇಲ್‌ ಆಗಿರುವುದರಿಂದ, ಚಿತ್ರವನ್ನು ಕೂಡ ಪ್ರೇಕ್ಷಕರು ಭರ್ಜರಿಯಾಗಿ ಸ್ವೀಕರಿಸುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ ನಾಯಕ ಆರ್ಯ. ಇನ್ನು “ಒಂಟಿ’ ಚಿತ್ರದಲ್ಲಿ ನಾಯಕ ಆರ್ಯಗೆ ನಾಯಕಿಯಾಗಿ ಮೇಘನಾ ರಾಜ್‌ ಜೋಡಿಯಾಗಿದ್ದಾರೆ. ಉಳಿದಂತೆ ನಾಯಕನ
ಗೆಳಯನಾಗಿ ಮಜಾ ಟಾಕೀಸ್‌ ಪವನ್‌, ತಾಯಿಯಾಗಿ ಗಿರಿಜಾ ಲೋಕೇಶ್‌, ಪೋಲಿಸ್‌
ಅಧಿಕಾರಿಯಾಗಿ ದೇವರಾಜ್‌, ಖಳನಾಗಿ ಶರತ್‌ ಲೋಹಿತಾಶ್ವ, ನೀನಾಸಂ ಅಶ್ವಥ್‌, ನಿಶಾಂತ್‌ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಚಿತ್ರದ ಹಾಡುಗಳಿಗೆ ಶ್ರೀಲಂಕಾ ಮೂಲದ ಮನೋಜ್‌.ಎಸ್‌ ಸಂಗೀತ ಸಂಯೋಜಿಸಿದ್ದು, ಕೆ.ಕಲ್ಯಾಣ್‌,ಡಾ. ವಿ ನಾಗೇಂದ್ರ ಪ್ರಸಾದ್‌ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಚಿತ್ರದಲ್ಲಿ ಬರೋಬ್ಬರಿ ಎಂಟು ಫೈಟ್‌ಗಳಿದ್ದು, ಮಾಸ್‌ ಮಾದ ಚಿತ್ರದ ಆ್ಯಕ್ಷನ್‌
ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಚಿತ್ರಕ್ಕೆ ಕೆ. ಶಶಿಧರ್‌ ಛಾಯಾಗ್ರಹಣ, ಕುಮಾರ್‌ ಕೋಟೆಕೊಪ್ಪ ಸಂಕಲನವಿದೆ.

ಕಿಕ್‌ ಏರ್‌ಬೇಕು ಅಂದ್ರೆ ಕ್ವಾಟ್ರಾ ಬೇಕು… ಒಂಟಿನ ಮುಟ್ಬೆಕು ಅಂದ್ರೆ ಮೀಟ್ರಾ ಬೇಕು
…ಆರಡಿ ಹೈಟ್‌ಗೆ ನಿಂತ್ರೆ ಫೈಟ್‌…. ಇಂತಹ ಮಾಸ್‌ ಡೈಲಾಗ್‌ಗಳು ಚಿತ್ರದ ಟ್ರೇಲರ್‌ ಮತ್ತು ಪೋಸ್ಟರ್‌ಗಳಲ್ಲಿ ರಾರಾಜಿಸುತ್ತಿದ್ದು, “ಒಂಟಿ’ ಎಷ್ಟರ ಮಟ್ಟಿಗೆ ಪ್ರೇಕ್ಷಕನಿಗೆ ಇಷ್ಟವಾಗುತ್ತಾನೆ ಅನ್ನೋದನ್ನು ಕಾದು ನೋಡಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next