Advertisement

ಬೆಳಗಾವಿ: ಗೆದ್ದ-ಸೋತ ಅಭ್ಯರ್ಥಿಗಳ ನೂರಾರು ಬೆಂಬಲಿಗರ ಮಧ್ಯೆ ಹೊಡೆದಾಟ, ವಿಡಿಯೋ ವೈರಲ್

11:23 AM Jan 04, 2021 | Team Udayavani |

ಬೆಳಗಾವಿ/ಮೂಡಲಗಿ: ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮ‌ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದವರು ಹಾಗೂ ಸೋತ ಅಭ್ಯರ್ಥಿಗಳ ಮಧ್ಯೆ ಗಲಾಟೆಯಾಗಿ ಎರಡೂ ಕಡೆಯ ಅಭ್ಯರ್ಥಿಗಳ ನೂರಾರು ಬೆಂಬಲಿಗರ ಮಧ್ಯೆ ಗುಂಪು ಘರ್ಷಣೆ ಆಗಿರುವ ವಿಡಿಯೋ ವೈರಲ್ ಆಗಿದೆ.‌

Advertisement

ಸೋತ ಅಭ್ಯರ್ಥಿಯ ಹೊಲದಲ್ಲಿದ್ದ ಬೋರ್ ವೆಲ್ ಅನ್ನು ಗೆದ್ದ ಅಭ್ಯರ್ಥಿ ಬಂದ್ ಮಾಡಿಸಿದ್ದರು. ಆಗ ಇಬ್ಬರ ಮಧ್ಯೆ ಜಗಳವಾಗಿತ್ತು. ‌ಜಗಳ ವಿಕೋಪಕ್ಕೆ ತಿರುಗಿ ಮಹಿಳೆಯರು, ಪುರುಷರು, ಯುವಕರು ನೂರಾರು ಸಂಖ್ಯೆಯಲ್ಲಿ ಒಬ್ಬರಿಗೊಬ್ಬರು ಹೊಡೆದಾಡಿದ್ದಾರೆ. ಹತ್ತಾರು ಮಂದಿ ಮಹಿಳೆಯರು ಜಡೆ ಹಿಡಿದುಕೊಂಡು ಹೊಡೆದಾಡಿದ್ದಾರೆ.

ಇದನ್ನೂ ಓದಿ:ಜೈಲಿನಲ್ಲಿದ್ದ ಬಾಲಕಿ ಸಾವಿನ ತನಿಖೆಗೆ 24 ಗಂಟೆ ಗಡುವು: ಅಹೋರಾತ್ರಿ ಧರಣಿ ವಾಪಸ್

ಕೈಯಲ್ಕಿ ಸಿಕ್ಕ ಸಿಕ್ಕ ವಸ್ತುಗಳನ್ನು ಹಿಡಿದುಕೊಂಡು ಜಗಳವಾಡಿದ್ದಾರೆ. ಗಲಾಟೆ ನಡೆದು ಎರಡ್ಮೂರು ದಿನಗಳಾಗಿದ್ದು, ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement

ಘಟಪ್ರಭಾ ಠಾಣೆ ಪಿಎಸ್ ಐ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಠಿಕಾಣಿ ಹೂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next