Advertisement
ಜೂ.7ರಂದು ಘಟನೆ ನಡೆದ್ದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅಂದು ಸಂಜೆ 6.30ಕ್ಕೆ ಕೇಂದ್ರ ಕಾರಾಗೃಹದ ವಿಚಾರಣಾಧೀನ ಕೈದಿಗಳ ವಿಭಾಗದ ಬ್ಯಾರಕ್ 3 ಮತ್ತು 4 ಎದುರು ಈ ಗಲಾಟೆ ನಡೆದಿದ್ದು, ಈ ಸಂಬಂಧ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ.ಮಲ್ಲಿಕಾರ್ಜುನ್ ನೀಡಿದ ದೂರಿನ ಮೇರೆಗೆ ಪೊಲೀಸರು, ವಿಚಾರಣಾಧೀನ ಕೈದಿಗಳಾದ ವಿಶ್ವನಾಥ, ಮುನಿರಾಜ್, ಜಾಫರ್ ಸಾದಿಕ್, ವಿಶಾಲ್‌ಗೌಡ, ಟಿಪ್ಪು ಸುಲ್ತಾನ್, ಸೇಂದಿಲ್ ಕುಮಾರ್, ಅಜಯ್ ಸಿಂಗ್, ಕುಮಾರ್, ಇರ್ಷಾದ್ ಪಾಷಾ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಈ ವೇಳೆ ಗಲಾಟೆಯಲ್ಲಿ ಗಾಯಗೊಂಡಿರುವ ವಿಚಾರಣಾಧೀನ ಕೈದಿಗಳಾದ ತೇಜಸ್, ಅಮಿತ್ ಕುಮಾರ್, ಶೇಷಾದ್ರಿ, ಧನುಷ್‌ಗೆ ಕೇಂದ್ರ ಕಾರಾಗೃಹದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
Advertisement
Bangalore Central Prison: ಜೈಲಲ್ಲಿ ರೌಡಿಶೀಟರ್‌ಗಳ ಮಧ್ಯೆ ಮಾರಾಮಾರಿ
02:57 PM Jun 11, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.