ಬೆಳ್ತಂಗಡಿ: ಪೊಲೀಸರಿಗೆ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದಿದ್ದಲ್ಲಿ ತಾಲೂಕನ್ನು 6 ತಿಂಗಳು ಸಂಘಟಕರ ಕೈಗೆ ನೀಡಿದಲ್ಲಿ ಒಂದೇ ಒಂದು ಗೋವಿನ ಹತ್ಯೆ ಆಗದಂತೆ ತಡೆಯುತ್ತೇವೆ. ಪುಣ್ಯಕೋಟಿ ರಕ್ಷಣೆಯಲ್ಲಿ ನಮ್ಮದು ರಾಜಿ ಇಲ್ಲದ ಹೋರಾಟ ಎಂದು ಬಜರಂಗದಳ ಪ್ರಾಂತ ಸಹ ಸಂಯೋಜಕ ರಘು ಸಕಲೇಶಪುರ ಹೇಳಿದರು.
ಬೆಳ್ತಂಗಡಿ ಮಿನಿ ವಿಧಾನಸೌಧದ ಬಳಿ ಬುಧವಾರ ವಿ.ಹಿಂ.ಪ., ಹಿಂ.ಜಾ.ವೇ., ಬಜರಂಗದಳ, ದುರ್ಗಾವಾಹಿನಿ, ಮಾತೃ ಮಂಡಳಿ ವತಿಯಿಂದ ಗೋ ಅಕ್ರಮ ಸಾಗಾಟ ಕೊನೆಗಾಣಿಸುವಂತೆ ಆಗ್ರಹಿಸಿ ನಡೆದ ಬೃಹತ್ ಪ್ರತಿಭಟನ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಾದ್ಯಂತ ಗೋ ಅಕ್ರಮ ಸಾಗಾಟ, ಅಕ್ರಮ ಕಸಾಯಿಖಾನೆ ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಹಟ್ಟಿಯಿಂದ ಗೋ ಕಳವು ಮಾಡುವರಿಗೆ ಗುಂಡಿಕ್ಕಿ ಕೊಲ್ಲುವ ಮೂಲಕ ಭಯೋ ತ್ಪಾದಕ ಎಂದು ಪ್ರಕರಣ ದಾಖಲಿಸಬೇಕು. ಹಿಂಸಾತ್ಮಕ ರೀತಿಯಲ್ಲಿ ಗೋವುಗಳ ಸಾಗಾಟ ಬಗ್ಗೆ ಹಿಂದೂ ಸಂಘಟನೆಗೆ ಮಾಹಿತಿ ಸಿಕ್ಕಿದರೂ ಪೊಲೀಸ್ ಇಲಾಖೆಗೆ ಮಾಹಿತಿ ಸಿಗದಿರುವುದರ ಹಿಂದೆ ಕಮಿ ಷನ್, ರಾಜಕೀಯ ಒತ್ತಡ ಗೋಚರಿ ಸುತ್ತಿದೆ. ಈ ಕುರಿತು ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳದಿದ್ದಲ್ಲಿ ಹೋರಾಟ ಕಠಿನ ರೂಪ ಪಡೆಯಲಿದೆ ಎಂದು ಎಚ್ಚರಿಸಿದರು.
ವಿ.ಹಿಂ.ಪ. ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ್ ಧರ್ಮಸ್ಥಳ ಮಾತನಾಡಿ, ತಾ|ನ ವಿವಿಧೆಡೆ ಅಕ್ರಮ ಕಸಾಯಿಖಾನೆಗಳಿದ್ದರೂ ಇದುವರೆಗೆ ಪ್ರಕರಣ ದಾಖಲಿಸಿಲ್ಲ. ಅಕ್ರಮ ವಾಹನಗಳಿಗೆ ಟಿಂಟ್ ಅಳವಡಿಸಿ ಗೋ ಸಾಗಾಟ ಮಾಡಿದರೂ ಪ್ರಕರಣ ದಾಖಲಿಸಿಲ್ಲ ಎಂದು ಆರೋಪಿಸಿದರು.
ವಿಹಿಂಪ ತಾ| ಅಧ್ಯಕ್ಷ ಸುಬ್ರಹ್ಮಣ್ಯ ಕುಮಾರ್ ಅಗರ್ತ ಮಾತನಾಡಿ, ಜಿಲ್ಲೆ ಯಲ್ಲಿ ಮನೆಯ ಹಟ್ಟಿಯಿಂದಲೇ ಗೋವು ಕಳ್ಳತನವಾಗುತ್ತಿರುವುದು ದುರಂತ. ಇಲಾಖೆ ಗೋಕಳ್ಳರ ಪತ್ತೆಹಚ್ಚಲು ವಿಫಲ ರಾದರೆ ಹಿಂದೂ ಸಂಘಟನೆಗಳೇ ಈ ಕೆಲಸ ಮಾಡಲಿದೆ ಎಂದು ಎಚ್ಚರಿಸಿದರು. ಬಳಿಕ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಮೂಲಕ ಜಿಲ್ಲಾಧಿಕಾರಿಗೆ ಗೋ ಸಾಗಾಟ ತಡೆ ಮತ್ತು ಅಕ್ರಮ ಕಸಾಯಿಖಾನೆ ಪತ್ತೆಹಚ್ಚುವಂತೆ ಆಗ್ರಹಿಸಿ ಮನವಿ ನೀಡಲಾಯಿತು. ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಉಪಸ್ಥಿತರಿದ್ದರು.
ಪ್ರತಿಭಟನೆಯಲ್ಲಿ ಶಾಸಕ ಹರೀಶ್ ಪೂಂಜ, ವಿಹಿಂಪ ಜಿಲ್ಲಾ ಉಪಾಧ್ಯಕ್ಷ ತಿಮ್ಮಪ್ಪ ಗೌಡ ಬೆಳಾಲು, ವಿಹಿಂಪ ತಾ| ಅಧ್ಯಕ್ಷ ಪದ್ಮನಾಭ ಶೆಟ್ಟಿಗಾರ್, ಬಜರಂಗದಳ ಸಂಯೋಜಕ ರಾಮ್ ಪ್ರಸಾದ್ ಮರೊಡಿ, ಸಂತೋಷ್ ಅತ್ತಾಜೆ, ಗೋರಕ್ಷಾ ಪ್ರಮುಖ್ ದಿನೇಶ್ ಚಾರ್ಮಾಡಿ, ಜಿ.ಪಂ. ಸದಸ್ಯರಾದ ಕೊರಗಪ್ಪ ನಾಯ್ಕ, ಮಮತಾ ಶೆಟ್ಟಿ, ಸೌಮ್ಯಲತಾ, ಮಾಜಿ ಶಾಸಕ ಪ್ರಭಾಕರ ಬಂಗೇರ, ತಾ| ಬಿಜೆಪಿ ಅಧ್ಯಕ್ಷ ಜಯಂತ್ ಕೋಟ್ಯಾನ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಪ್ರತಾಪ್‌ಸಿಂಹ ನಾಯಕ್ ಮತ್ತಿತರರಿದ್ದರು.