Advertisement

ಭರಾಟೆಗೆ ಭರ್ಜರಿ ಫೈಟ್‌

11:20 AM Nov 20, 2018 | Team Udayavani |

ನಟ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ “ಭರಾಟೆ’ ಚಿತ್ರದ ಚಿತ್ರೀಕರಣದ “ಭರಾಟೆ’ಯೂ ಜಾರಾಗಿದೆ. ಮೊದಲ ಹಂತದಲ್ಲಿ ಮಾತಿನ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದ ಚಿತ್ರತಂಡ, ಎರಡನೇ ಹಂತದ ಚಿತ್ರೀಕರಣದಲ್ಲಿ, ಚಿತ್ರದ ಸಾಹಸ ದೃಶ್ಯಗಳನ್ನು ಚಿತ್ರೀಕರಿಸುವ ಪ್ಲಾನ್‌ ಹಾಕಿಕೊಂಡಿತ್ತು.

Advertisement

ಅದರಂತೆ ಇತ್ತೀಚೆಗೆ ಭರ್ಜರಿಯಾಗಿ ಸಾಹಸ ದೃಶ್ಯಗಳನ್ನು ಸೆರೆಹಿಡಿಯುವ ಮೂಲಕ ತನ್ನ ಎರಡನೇ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದೆ ಚಿತ್ರತಂಡ. ಮಂಡ್ಯದ ಮೈ ಶುಗರ್‌ ಫ್ಯಾಕ್ಟರಿಯಲ್ಲಿ, ಸುಮಾರು ಆರು ದಿನಗಳ ಕಾಲ ನಡೆದ ಸತತ ಚಿತ್ರೀಕರಣದಲ್ಲಿ ಚಿತ್ರದ ಬರುವ ಮೆಗಾ ಫೈಟ್‌ ದೃಶ್ಯವೊಂದನ್ನು ಚಿತ್ರೀಕರಿಸಲಾಯಿತು.

ರವಿವರ್ಮ ಸಾಹಸ ಸಂಯೋಜನೆಯಲ್ಲಿ ಮೂಡಿಬಂದ ಈ ಆ್ಯಕ್ಷನ್‌ ದೃಶ್ಯದ ಚಿತ್ರೀಕರಣದಲ್ಲಿ 70ಕ್ಕೂ ಹೆಚ್ಚು ಸಾಹಸ ಕಲಾವಿದರು ಭಾಗವಹಿಸಿದ್ದರು. ಇನ್ನು ಈ ಆ್ಯಕ್ಷನ್‌ ದೃಶ್ಯಕ್ಕಾಗಿ ಸುಮಾರು 60 ಲಕ್ಷ ರೂ ವೆಚ್ಚವಾಗಿದ್ದು, ನಿರ್ದೇಶಕ ಬಹದ್ದೂರ್‌ ಚೇತನ್‌ ಅವರ ನಿರ್ದೇಶನದಂತೆ ಸಾಹಸ ದೃಶ್ಯಗಳನ್ನು ಸೆರೆಹಿಡಿಯಲಾಯಿತು.

ಸದ್ಯ ಈ ಮೆಗಾ ಆ್ಯಕ್ಷನ್‌ ದೃಶ್ಯದ ಒಂದಷ್ಟು ಪೋಟೋಗಳು ಹೊರಬಿದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ. ಒಟ್ಟಾರೆ ತನ್ನ ಟೈಟಲ್‌ನಿಂದಲೇ ಗಾಂಧಿನಗರದಲ್ಲಿ ಸದ್ದು ಮಾಡುತ್ತಿರುವ “ಭರಾಟೆ’ ಹೇಗಿರಬಹುದು ಎಂದು ತಿಳಿಯಬೇಕಾದರೆ, ಮುಂದಿನ ಏಪ್ರಿಲ್‌ ತಿಂಗಳವರೆಗೆ ಕಾಯಲೇಬೇಕು. 

Advertisement

Udayavani is now on Telegram. Click here to join our channel and stay updated with the latest news.

Next