Advertisement

ಅಭಿವ್ಯಕ್ತಿ ಸ್ವಾತಂತ್ರ್ಯದ ಉಳಿವಿಗೆ ಹೋರಾಟ

02:46 PM Nov 28, 2021 | Team Udayavani |

ಗಜೇಂದ್ರಗಡ: ಕನ್ನಡ ಚಲನಚಿತ್ರದ ಸಂಗೀತ ನಿರ್ದೇಶಕ, ಸಾಹಿತಿ ಹಂಸಲೇಖ ಪರವಾಗಿ ಅವರ ಮೇಲೆ ನಡೆಯುತ್ತಿರುವ ಮಾನಸಿಕ ದಾಳಿಗಳನ್ನು ಖಂಡಿಸಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಉಳಿವಿಗಾಗಿ ಪಟ್ಟಣದ ಶ್ರೀಕಾಲಕಾಲೇಶ್ವರ ವೃತ್ತದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪಂಜಿನ ಮೆರವಣಿಗೆ ನಡೆಯಿತು.

Advertisement

ಹಂಸಲೇಖ ಅವರು ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಇಷ್ಟಕ್ಕೆ ಸುಮ್ಮನಿರದ ಕೋಮುವಾದಿಗಳು ಅವರ ಮೇಲೆ ಪ್ರಕರಣ ಕೂಡಾ ದಾಖಲಿಸಿದ್ದು ಖಂಡನೀಯ. ಇತ್ತೀಚೆಗೆ ಆಡಳಿತಾರೂಢ ಸರ್ಕಾರ ಸಂವಿಧಾನ ನೀಡಿರುವ ಹಕ್ಕುಗಳನ್ನು ಕಿತ್ತುಕೊಳ್ಳುವ ಯತ್ನ ಮುಂದುವರೆಸಿದೆ. ಇದು ಉತ್ತಮ ಬೆಳವಣಿಗೆಯಲ್ಲ. ಪ್ರತಿಯೊಬ್ಬ ಭಾರತೀಯ ಪ್ರಜೆಗೆ ಸಂವಿಧಾನ ಹಕ್ಕುಗಳನ್ನು ನೀಡಿದೆ. ಅದರಡಿಯಲ್ಲಿಯೇ ನಾವೆಲ್ಲರೂ ಜೀವಿಸುತ್ತಿದ್ದೇವೆ. ಆದರೆ ಸರ್ಕಾರ ಸಂವಿಧಾನದ ಹಕ್ಕನ್ನು ಈ ರೀತಿ ಕಿತ್ತುಕೊಳ್ಳುವ ಯತ್ನ ನಡೆಸಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ನಾವೆಲ್ಲರೂ ಸಂವಿಧಾನದ ಉಳಿವು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಧ್ವನಿ ಎತ್ತುವುದು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಮೆರವಣಿಗೆಯಲ್ಲಿ ಹಲವಾರು ದಲಿತ ಪರ ಮುಖಂಡರು, ಕನ್ನಡ ಪರಸಂಘಟನೆ, ವಿವಿಧ ಜನಾಂಗದ ಮುಖಂಡರು ಭಾಗವಹಿಸಿದ್ದರು. ಪಟ್ಟಣದ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಪೂಜೆ ಸಲ್ಲಿಸಿ ಆರಂಭವಾದ ಪಂಜಿನ ಮೆರವಣಿಗೆ ಜೋಡು ರಸ್ತೆಯ ಮೂಲಕ ಶ್ರೀ ಕಾಲಕಾಲೇಶ್ವರ ವೃತ್ತ ತಲುಪಿತು. ಮೆರವಣಿಗೆ ಯುದ್ದಕ್ಕೂ ಘೋಷಣೆ ಕೂಗಿ ಆಕ್ರೋಶ ವ್ಯಕ್ತಡಿಸಿದರು.

ದಲಿತ ಸಂಘಟನೆಯ ಶರಣು ಪೂಜಾರ, ಅಂಜುಮನ್‌ ಇಸ್ಲಾಂ ಕಮಿಟಿ ಚೇರ್‌ಮನ್‌ ಎ.ಡಿ. ಕೋಲಕಾರ, ಕರವೇಯ ರಜಾಕ್‌ ಡಾಲಾಯತ್‌, ರಮೇಶ ಕಡಬಿನ, ಬಾಲು ರಾಠೊಡ, ಬಸವರಾಜ ಕಡಬಿನ, ಬಸವರಾಜ ಹೊಸಮನಿ, ಬಾಬುಸಾಬ ಗೊಡೇಕಾರ, ಉಮೇಶ ರಾಠೊಡ, ಅಲ್ಲಾಭಕ್ಷಿ ಮುಚ್ಚಾಲಿ, ರಫೀಕ್‌ ಯಲಬುಣಚಿ ಸೇರಿದಂತೆ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next