Advertisement

ಎಸ್ಟಿ ಮೀಸಲಾತಿಗೆ ಶೀಘ್ರ ವಿಶ್ವ ಕರ್ಮರ ಹೋರಾಟ

03:00 PM May 29, 2022 | Shwetha M |

ನಾಲತವಾಡ: ವಿಶ್ವಕರ್ಮ ಸಮಾಜದ ಮಕ್ಕಳು ಕೂಡ ಶಿಕ್ಷಣವಂತರಾದಾಗ ಮಾತ್ರ ಸಮಾಜ ಏಳ್ಗೆಯಾಗುತ್ತದೆ ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಪಿ. ನಂಜುಂಡಿ ಹೇಳಿದರು.

Advertisement

ಸ್ಥಳೀಯ ಕಾಳಮ್ಮ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು, ಇವತ್ತು ಸಮ್ಮ ಸಮಾಜವನ್ನು ಎಲ್ಲ ಕ್ಷೇತ್ರದಲ್ಲಿ ತುಳಿಯುವ ಕೆಲಸ ನಡೆಯುತ್ತಿದೆ. ನಮ್ಮ ಸಮಾಜದ ಏಳ್ಗೆಯಾಗಬೇಕಾದರೆ ನಾವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಖೀಯವಾಗಿ ಮುಂದೆ ಬರಬೇಕು ಎಂದರು.

ನಮ್ಮ ಮಕ್ಕಳನ್ನು ಉನ್ನತ ವಿದ್ಯಾಭ್ಯಾಸ ನೀಡಿ ದೊಡ್ಡ ದೊಡ್ಡ ಅಧಿಕಾಯನ್ನಾಗಿ ಮಾಡುವ ಗುರಿ ನಾವೆಲ್ಲರೂ ಹೊಂದಬೇಕಾಗಿದೆ. ಜಗತ್ತು ಅತಿ ವೇಗವಾಗಿ ಸಾಗುತ್ತಿದೆ. ನಮ್ಮ ಸಮಾಜದ ಬಾಂಧವರು ಕೂಡ ಜಗತ್ತಿನ ಜೊತೆ ಜೊತೆಯಲ್ಲಿ ಸಾಗಬೇಕು. ನಮ್ಮ ಮಕ್ಕಳನ್ನು ನಮ್ಮಂತಯೇ ಕಾರ್ಮಿಕರನ್ನಾಗಿ ಮಾಡದೇ ಅವರನ್ನು ಸಮಾಜದಲ್ಲಿ ದೊಡ್ಡ ವ್ಯಕ್ತಿಯನ್ನಾಗಿ ಮಾಡಬೇಕು ಎಂದರು.

ವಿಶ್ವಕರ್ಮ ಸಮಾಜದ ಈಗಾಗಲೆ 2ಎ ಮೀಸಲಾತಿ ಹೊಂದಿದೆ. ಆದರೆ ಬಹುಸಂಖ್ಯಾತರ ಜೊತೆಯಲ್ಲಿ ನಮಗೆ ಈ ಮೀಸಲಾತಿಯ ಲಾಭ ದೊರಕುತ್ತಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ನಮ್ಮ ಸಮಾಜಕ್ಕೆ ಎಸ್ಟಿ ಮೀಸಲಾತಿ ನೀಡಬೇಕೆಂದು ನಾವೆಲ್ಲರೂ ಸಂಘಟಿತರಾಗಿ ಹೋರಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸಮಾಜದ ಎಲ್ಲ ಬಾಂಧವರು ಕೂಡ ಒಗ್ಗಟ್ಟಾಗಿ ನಮ್ಮ ಶಕ್ತಿ ಪ್ರದರ್ಶನ ಮಾಡಬೇಕಾಗಿದೆ. ನಾವು ರಾಜಕೀಯವಾಗಿ ಹಿಂದೆ ಉಳಿದಿರುವ ಕಾರಣ ನಮಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಒಂದು ವೇಳೆ ನಾವು ರಾಜಕೀಯವಾಗಿ ಬೆಳೆದರು ನಮ್ಮ ಹಕ್ಕನ್ನು ನಾವು ಪಡೆದುಕೊಳ್ಳಬಹುದು ಎಂದರು.

ಪ್ರಾಸ್ತಾವಿಕವಾಗಿ ನಾರಾಯಣ ಮಾಯಾಚಾರಿ ಮಾತನಾಡಿ, ರಾಜ್ಯದಲ್ಲಿ ವಿಶ್ವಕರ್ಮ ಸಮಾಜವನ್ನು ಪರಿಚಯಿಸಿದ್ದು ಯಾರಾದರು ಇದ್ದರೆ ಅವರು ಕೆ.ಪಿ. ನಂಜುಂಡಿ. ಅನೇಕ ವರ್ಷಗಳಿಂದ ಸಮಾಜದ ಏಳ್ಗೆಗಾಗಿ ಕೆ.ಪಿ. ನಂಜುಂಡಿಯವರು ಹೋರಾಟ ಮಾಡಿದ್ದಾರೆ. ಸಮಾಜದ ಕಟ್ಟ ಕಡೆ ವ್ಯಕ್ತಿಗೂ ಕೂಡ ಸರಕಾರದ ಸೌಲಭ್ಯ ಮುಟ್ಟಿಸುವ ಪ್ರಯತ್ನವನ್ನು ನಂಜುಂಡಿಯವರು ಮಾಡುತಿದ್ದಾರೆ ಎಂದರು.

Advertisement

ಸಮಾಜದಲ್ಲಿ ಸ್ವಲ್ಪ ಅಸಮಾಧಾನ ವಾತಾವರಣದಿಂದ ಸಂಘಟನೆಯಿಂದ ದೂರು ಸರಿದಿದ್ದರು. ಎಲ್ಲರೂ ಅವರಿಗೆ ಸಮಾಜದ ಏಳ್ಗೆಗಾಗಿ ತಾವು ಸಂಘಟನೆಯನ್ನು ಬಲಪಡಿಸಬೇಕು ಎಂದು ಮನವಿ ಮಾಡಿದಾಗ ಮತ್ತೇ ಅವರು ವಿಶ್ವಕರ್ಮ ಸಮಾಜ ಒಗ್ಗೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಎಸ್ಟಿ ಮೀಸಲಾತಿಗಾಗಿ ಸರಕಾರಕ್ಕೆ ಒತ್ತಾಯಿಸಬೇಕು ಎಂದು ಕೆ.ಪಿ.ನಂಜುಂಡಿ ಅವರಿಗೆ ಮನವಿ ಮಾಡಿದರು.

ಈ ವೇಳೆ ಅಖೀಲ ಕರ್ನಾಟಕ ವಿಶ್ವಕರ್ಮ ಯುವ ಘಟಕ ಮಹಾಸಭಾ ರಾಜ್ಯಾಧ್ಯಕ್ಷ ಶ್ರೀನಿವಾಸ ಮಳವಳ್ಳಿ, ವಿಶ್ವಕರ್ಮ ಮಹಾಸಭಾ ವಿಜಯಪುರ ಜಿಲ್ಲಾಧ್ಯಕ್ಷ ಬಾಳು ಗಿರಗಾಂವಕರ, ವಿಶ್ವಕರ್ಮ ಮಹಾಸಭಾ ಯಾದಗಿರಿ ಜಿಲ್ಲಾಧ್ಯಕ್ಷ ಆನಂದ ಲಕ್ಷ್ಮೀಪುರ, ವಿಶ್ವಕರ್ಮ ಮಹಾಸಭಾ ತಾಲೂಕಾಧ್ಯಕ್ಷ ಮಲ್ಲಣ್ಣ ಪತ್ತಾರ (ತಾರನಾಳ), ಮುದ್ದೇಬಿಹಾಳ ಪುರಸಭೆ ಅಧ್ಯಕ್ಷೆ ಸಹನಾ ಬಡಿಗೇರ ಹಾಗೂ ನಾಲತವಾಡದ ವಿಶ್ವಕರ್ಮ ಸಮಾಜದ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next