Advertisement
ಈಗಾಗಲೇ 12 ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್8 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದೆ. ಆದರೆ, ಪ್ರಸ್ತುತ ಬದಲಾದ ರಾಜಕೀಯದಿಂದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯಲು ರಣತಂತ್ರ ಹೆಣೆಯುತ್ತಿವೆ.
Related Articles
Advertisement
ಪಿಎಂಎನ್ ನಿರ್ದೇಶಕ ಸ್ಥಾನ ತಪ್ಪಿಸಲು ಒಂದಾದ ದಳಪತಿಗಳು: ಮಳವಳ್ಳಿ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಮೊದಲ ಬಾರಿಗೆ ಸಹಕಾರ ಕ್ಷೇತ್ರಕ್ಕೆ ಕಾಲಿಟ್ಟಿರುವ ಮಾಜಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಅವರನ್ನು ಅಪೆಕ್ಸ್ ಬ್ಯಾಂಕ್‌ನಿರ್ದೇಶಕರಾಗಿ ಆಯ್ಕೆಯಾಗುವುದನ್ನು ತಪ್ಪಿಸಲು ದಳಪತಿಗಳು ಒಂದಾಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಶಾಸಕರಾದ ಸಿ.ಎಸ್.ಪುಟ್ಟರಾಜು ಹಾಗೂ ಕೆ. ಅನ್ನದಾನಿ ಅಖಾಡಕ್ಕೆ ಇಳಿದಿದ್ದು, ಜೆಡಿಎಸ್ ನಿರ್ದೇಶಕರು ಸೇರಿದಂತೆಕಾಂಗ್ರೆಸ್‌ನ ಅಶ್ವಥ್ ಅವರು ಗೌಪ್ಯ ಸ್ಥಳಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಜೆಡಿಎಸ್‌ನಿಂದ ಎಚ್.ಸಿ.ಕಾಳೇಗೌಡ ರೇಸ್‌ನಲ್ಲಿದ್ದಾರೆ.
ಜಿಲ್ಲಾ ಉಪ ನಿಬಂಧಕರ ವರ್ಗಾವಣೆ : ಅಧಿಕಾರ ಹಿಡಿಯಲೇಬೇಕು ಎಂದು ಪಣತೊಟ್ಟಿರುವ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಸಿಎಂ ಸೂಚನೆಯಂತೆ ಜಿಲ್ಲಾ ಉಪನಿಬಂಧಕ ವಿಕ್ರಮರಾಜ್‌ಅರಸ್ ಅವರನ್ನು ದಿಢೀರ್ ವರ್ಗಾವಣೆ ಮಾಡಿದೆ. ನಾಮನಿರ್ದೇಶಕರಾಗಿರುವ ಜಿಲ್ಲಾ ಉಪನಿಬಂಧಕರನ್ನು ವರ್ಗಾವಣೆ ಮಾಡಿರುವುದುಕಾಂಗ್ರೆಸ್ ವಲಯದಲ್ಲಿ ತಳಮಳ ಶುರುವಾಗಿದೆ. ಆ ಜಾಗಕ್ಕೆ ಸಹಾಯಕ ಉಪನಿಬಂಧಕ ಶಂಕರ್ ಅವರಿಗೆ ಪ್ರಭಾರ ವಹಿಸಲಾಗಿದೆ. ಜಿಲ್ಲಾ ರಿಜಿಸ್ಟ್ರಾರ್, ಅಪೆಕ್ಸ್‌ಬ್ಯಾಂಕ್ ಅಧಿಕಾರಿ, ಬಿಜೆಪಿ ಸರ್ಕಾರದ ನಾಮನಿ ರ್ದೇಶಕರೊಬ್ಬರು ಮತ ಹಕ್ಕು ಹೊಂದಿದ್ದಾರೆ.
ಅಶೋಕ್-ಅಶ್ವಥ್ ಪ್ರಬಲ ಆಕಾಂಕ್ಷಿಗಳು : ಕಾಂಗ್ರೆಸ್‌ನಿಂದ ಮಂಡ್ಯ ತಾಲೂಕುಪ್ರಾ ಥಮಿಕ ಕೃಷಿಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಗೆದ್ದಿರುವ ಅಶ್ವಥ್ ಹಾಗೂ ಜಿಲ್ಲೆಯಲ್ಲಿನ ಬಳಕೆದಾರರ ಮತ್ತು ಸಂಸ್ಕರಣ ಸಹಕಾರ ಸಂಘಗಳುಮತ್ತು ನಗರ ಸಹಕಾರಬ್ಯಾಂಕ್‌ಹಾಗೂವ್ಯವಸಾಯೇತರಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಹಾಲಹಳ್ಳಿ ಎಚ್.ಅಶೋಕ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.ಆದರೆ,ಅಶ್ವಥ್ ಅವರು ಚುನಾವಣೆಯಲ್ಲಿ ಕಾಂಗ್ರೆಸ್‌ಪಕ್ಷದ ನಾಯಕರು ನನಗೆಬೆಂಬಲನೀಡಿಲ್ಲಎಂದು ಅಸಮಾಧಾನ ಹೊರ ಹಾಕಿದ್ದರು.ಇದು ಕಾಂಗ್ರೆಸ್‌ಗೆ ಮುಳುವಾಗುವ ಸಾಧ್ಯತೆಇದೆ.
–ಎಚ್.ಶಿವರಾಜು