ನಾಗಮಂಗಲ: ತಾಲೂಕಿನ ಮುಳುಕಟ್ಟೆ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಮುಳುಕಟ್ಟಮ್ಮ ದೇವಾಲಯದ ಪೂಜೆ ವಿಚಾರವಾಗಿ ಎರಡು ಬಣಗಳ ನಡುವೆ ಬುಧವಾರ ಮಾರಾಮಾರಿ ನಡೆದಿದ್ದು ಘಟನೆ ಸಂಬಂಧ 13 ಮಂದಿ ಬಂಧಿಸಲಾಗಿದೆ.
ಎಂ.ಕಾರ್ತಿಕ್(24), ಎಂ.ಕೌಶಿಕ್‌ಧ(22), ಸಾಗರ್ ಶಂಕರ್ ಪವಾರ್(22), ಎಂ.ಎಂ.ಹೇಮಂತ್ (20), ಹೆಚ್.ಕೆ.ರಂಜಿತ್ (19), ಎಂ.ಕೆ.ನಿಖೀಲ್(21), ಜವರಾಯಿ(45), ಮಂಜುನಾಥ್(43), ಜಯಪ್ರಕಾಶ್(27), ಎಂ.ಜೈಪ್ರಮೋದ್(27), ಕೃಷ್ಣಮೂರ್ತಿ (45), ಎಂ.ಡಿ.ರಮೇಶ್ (42), ಎಂ.ಅಶ್ವಥ್(28) ಬಂಧಿತರೆಲ್ಲರೂ ಕೂಡ ಮುಳುಕಟ್ಟೆ ಗ್ರಾಮದ ನಿವಾಸಿಗಳು. ದೇವಾಲಯದ ಪೂಜೆ ಸಂಬಂಧ ಟ್ರಸ್ಟ್ 2 ಬಣಗಳನ್ನು ನೇಮಿಸಿತ್ತು. ಕಾರಣಾಂತರ ಗಳಿಂದ ಒಂದು ಬಣದವರು ಅನೇಕ ವರ್ಷಗಳಿಂದ ಪೂಜೆಯಿಂದ ಹೊರ ಗುಳುದಿ ದ್ದರು. ಬುಧವಾರ ಬೆಳಗ್ಗೆ ಪೂಜೆಯಿಂದ ಹೊರ ಗುಳಿದಿದ್ದ ಬಣದವರು ಏಕಾಏಕಿ ದೇವಾಲಯಕ್ಕೆ ಬಂದು ಪೂಜೆ ವಿಚಾರವಾಗಿ ಮಾತನಾಡಿದ್ದಾರೆ. ವಾದ ವಿವಾದ ನಡೆದು 2 ಬಣಗಳ ನಡುವೆ ಮಾತಿ ಚಕಮಕಿ ತಾರಕಕ್ಕೇರಿದೆ.
ಎರಡು ಬಣಗಳಲ್ಲಿ ಕೈ ಕೈ ಮಿಲಾಯಿಸಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಪೂಜೆಯಿಂದ ಅನೇಕ ವರ್ಷ ಹೊರಗುಳಿದಿದ್ದವರು ದೇವಾಲಯದ ಒಳಗಿನಿಂದ ಬೀಗ ಹಾಕಿಕೊಂಡು ಮಾರಕಾಸ್ತ್ರ ಗಳಿಂದ ನಮ್ಮ ಮೇಲೆ ಹಲ್ಲೆ ಮಾಡಲು ಯತ್ನಿಸಿದ ರೆಂದು ದೇಗುಲದ ಹಾಲಿ ಅರ್ಚಕರು ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ದೇವಾಲಯದ ಮುಖ್ಯದ್ವಾರ ಮುರಿದು ಒಳ ಹೋಗಿದ್ದಾರೆ. ಪ್ತೊಲೀಸರ ಮೇಲೂ ಹಲ್ಲೆ ಯತ್ನಿಸಿದ್ದಾರೆ. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ಶಾಂತಗೊಳಿಸಿ 13 ಮಂದಿಯನ್ನು ಬಂಧಿಸಿದ್ದಾರೆ.
ಕೋರ್ಟ್ ಆದೇಶ ಉಲ್ಲಂಘನೆ: ಘಟನೆಗೆ ಸಂಬಂಧಿಸಿದಂತೆ ಪೂಜೆಯಿಂದ ಅನೇಕ ವರ್ಷ ಹೊರಗುಳಿದಿದ್ದ ಬಣದವರು ನೀಡಿರುವ ಹೇಳಿಕೆ ಯಂತೆ 2010ನೇ ಇಸವಿಯಿಂದ ನಾಗಮಂಗಲ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ನ್ಯಾಯಾಲಯ ನಮಗೆ ಪೂಜೆ ಮುಂದುವರಿಸಿಕೊಂಡು ಹೋಗುವಂತೆ ಆದೇಶಿಸಿದೆ. ನ್ಯಾಯಾಲಯದ ಆದೇಶವಿದ್ದರೂ ನಮಗೆ ನ್ಯಾಯ ಸಿಗುತ್ತಿಲ್ಲ. ಮಾರ್ಚ್ 2019ರಲ್ಲಿ ನಾವು ಪೂಜೆ ನಮಗೆ ಬಿಡಿಸಿಕೊಡಬೇಕೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದೆವು. ಅಲ್ಲಿಯೂ ನ್ಯಾಯ ಸಿಗಲಿಲ್ಲ. ಇಂದು ಪೂಜೆ ಬಿಟ್ಟುಕೊಡಿ ಎಂದು ಕೇಳುವ ಸಲುವಾಗಿ ದೇವಾಲಯದ ಬಳಿ ಹೋಗಿದ್ದೆವು. ನಮ್ಮ ಹುಡುಗರನ್ನು ಬಂಧಿಸಿ ಆರೋಪಿಗಳೆಂದು ಪ್ರಕರಣ ದಾಖಲಿಸಿ ನಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಪೂಜೆ ಬಿಡಿಸಿಕೊಳ್ಳಲು ಹೋಗಿದ್ದ ಬಣದ ರಮೇಶ್ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ರೂಪಾ, ಅಡಿಷನಲ್ ಎಸ್ಪಿಬಲರಾಮೇಗೌಡ, ಡಿವೈಎಸ್ಪಿಮೋಹನ್‌ಕುಮಾರ್, ಪಿಎಸ್‌ಐ ರವಿಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.