ಮಂಡ್ಯ: ಚಿರತೆ ಹಾಗೂ ನಾಯಿಗಳ ನಡುವೆ ಕಾದಾಟ ನಡೆದು ಎರಡೂ ಪ್ರಾಣಿಗಳು ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ:ರೈತನಿಂದ ಲಂಚ ಪಡೆಯುತ್ತಿದ್ದ ಭೂ ದಾಖಲೆ ವಿಭಾಗ ಅಧಿಕಾರಿ: ಎಸಿಬಿ ದಾಳಿ
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಣ್ಣೆಚಾಕನಹಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿ ನಾಯಿ ಹಾಗೂ ಎಂಟು ತಿಂಗಳ ಚಿರತೆ ಮರಿ ಸೆಣೆಸಾಡಿದ್ದವು. ಆದರೆ ಈ ಕಾದಟದಲ್ಲಿ ಚಿರತೆ ಹಾಗೂ ನಾಯಿ ಎರಡು ಕೂಡಾ ಸಾವನ್ನಪ್ಪಿದೆ.
ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಹಾವಳಿಗೆ ಅಣ್ಣೇಚಾಕನಹಳ್ಳಿ ಗ್ರಾಮದಲ್ಲಿ ಭಯದ ವಾತಾವರಣ ಮೂಡಿದ್ದು, ಬೋನು ಇರಿಸಿ ಚಿರತೆ ಸೆರೆ ಹಿಡಿಯುವ ಭರವಸೆಯನ್ನು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳ ತಂಡ ನೀಡಿದೆ.
ಇದನ್ನೂ ಓದಿ:ರೈತರ ಪ್ರತಿಭಟನೆ: ಗ್ರೆಟಾಗೆ ಟೂಟ್ ಕಿಟ್ ರಚಿಸಿ ಸಂಚು ರೂಪಿಸಿದ್ದು ಯಾರು?ಹೆಸರು ಬಹಿರಂಗ