ಬೆಂಗಳೂರು: 2024ರ ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿರುವ ವಿಪಕ್ಷಗಳು ಬೆಂಗಳೂರಿನಲ್ಲಿ ಸಭೆ ಸೇರಿದ್ದು, ಹೊಸ ಹುರುಪಿನೊಂದಿಗೆ ಬಿಜೆಪಿ ನೇತೃತ್ವದ ಎನ್ ಡಿಎ ಕೂಟವನ್ನು ಎದುರಿಸಲು ಸಜ್ಜಾಗಿದೆ. ತಮ್ಮ ಮೈತ್ರಿ ಕೂಟಕ್ಕೆ INDIA (Indian National Developmental Inclusive Alliance) ಎಂದು ಹೆಸರಿಟ್ಟಿದೆ.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ ಸಭೆಗೆ ಬಂದಿರುವುದು ನನಗೆ ಗೌರವ ತಂದಿದೆ. ಭಾರತದ ಕಲ್ಪನೆಯ ಮೇಲೆ ದಾಳಿ ನಡೆಯುತ್ತಿದೆ. ಕೋಟ್ಯಂತರ ಭಾರತೀಯರಿಂದ ಭಾರತದ ಧ್ವನಿಯನ್ನು ಕಿತ್ತುಕೊಂಡು ನರೇಂದ್ರ ಮೋದಿಯವರ ಆಪ್ತರಾಗಿರುವ ಕೆಲವೇ ಉದ್ಯಮಿಗಳಿಗೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಇದು ಭಾರತದ ಧ್ವನಿಗಾಗಿ ಹೋರಾಟವಾಗಿದೆ. ಅದಕ್ಕಾಗಿಯೇ ನಾವು ಈ ಹೆಸರನ್ನು ಆರಿಸಿದ್ದೇವೆ. ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟ (INDIA). ಹೋರಾಟವು ಎನ್‌ಡಿಎ ಮತ್ತು INDIAದ ನಡುವೆ, ನರೇಂದ್ರ ಮೋದಿ ಮತ್ತು INDIA, ಅವರ ಸಿದ್ಧಾಂತ ಮತ್ತು INDIA ನಡುವೆ. ನಾವು ಭಾರತೀಯ ಸಂವಿಧಾನ, ನಮ್ಮ ಜನರ ಧ್ವನಿ ಮತ್ತು ಈ ಮಹಾನ್ ದೇಶದ ಕಲ್ಪನೆ, ಭಾರತದ ಕಲ್ಪನೆಯನ್ನು ರಕ್ಷಿಸುತ್ತಿದ್ದೇವೆ ಎಂದರು.
ಇದನ್ನೂ ಓದಿ:ಟಿ.ನರಸೀಪುರದಲ್ಲಿ ವೇಣುಗೋಪಾಲ್ ಶ್ರದ್ಧಾಂಜಲಿ ಸಭೆಗೆ ಹೈಕೋರ್ಟ್ ಷರತ್ತುಬದ್ಧ ಅನುಮತಿ
ಬೆಂಗಳೂರಿನಲ್ಲಿ ನಡೆದ ಸಭೆಯ ಬಗ್ಗೆ ಮಾತನಾಡಿದ ರಾಹುಲ್, ಇಂದು ನಾವು ನಡೆಸಿದ ಚರ್ಚೆಗಳು ಬಹಳ ಉತ್ಪಾದಕವಾಗಿವೆ ಮತ್ತು ಸುಗಮವಾಗಿ ನಡೆದವು ಎಂದರು.