Advertisement

ಕೋವಿಡ್ ವಿರುದ್ಧ ಮಹಾಸಮರ : ಮುಂಬಯಿ ಸರಕಾರಿ ಆಸ್ಪತ್ರೆಗಳಿಗೆ ತಾಜ್ ನಿಂದ ಉಚಿತ ಆಹಾರ ಪೂರೈಕೆ

09:47 AM Mar 28, 2020 | Hari Prasad |

ಮುಂಬಯಿ: ಕೋವಿಡ್ 19 ಮಹಾಮಾರಿಯ ವಿರುದ್ಧ ಮುಂಬಯಿ ಸಮರ ಸಾರಿದೆ. ಈ ಮಹಾಮಾರಿಗೆ ವಾಣಿಜ್ಯ ನಗರಿಯಲ್ಲಿ ಇದುವರೆಗೆ ಐವರು ಬಲಿಯಾಗಿದ್ದಾರೆ. ನಗರದ ವಿವಿಧ ಸರಕಾರಿ ಆಸ್ಪತ್ರೆಗಳಲ್ಲಿ ಸೋಂಕುಪೀಡಿತರು ಐಸೊಲೇಷನ್ ನಲ್ಲಿದ್ದು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.

Advertisement

ಬೃಹನ್ಮುಂಬಯಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸರಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೋವಿಡ್ 19 ಸೋಂಕಿತ ರೋಗಿಗಳಿಗೆ ಮತ್ತು ಅವರನ್ನು ಆರೈಕರ ಮಾಡುತ್ತಿರುವ ವೈದ್ಯರು, ನರ್ಸ್ ಗಳು ಮತ್ತು ಇತರೇ ಸಿಬ್ಬಂದಿಗಳಿಗೆ ಇಂಡಿಯನ್ ಹೊಟೇಲ್ಸ್ ಕಂಪೆನಿ ಲಿಮಿಟೆಡ್ ಆಡಳಿತಕ್ಕೊಳಪಡುವ ತಾಜ್ ಹೊಟೇಲ್ ನಿಂದ ಉಚಿತ ಆಹಾರ ಪೂರೈಕೆಸಲಾಗುತ್ತಿದೆ.


ಈ ವಿಷಯವನ್ನು ಬೃಹನ್ಮುಂಬಯಿ ಆಡಳಿತ ವರ್ಗವೂ ಖಚಿತ ಪಡಿಸಿದ್ದು ತನ್ನ ವ್ಯಾಪ್ತಿಯಲ್ಲಿ ಬರುವ ಸರಕಾರಿ ಆಸ್ಪತ್ರೆಗಳಿಗೆ ಉಚಿತ ಊಟವನ್ನು ಪೂರೈಸುವ ನಿಟ್ಟಿನಲ್ಲಿ ತಾಜ್ ಹೊಟೇಲ್ ಸಮೂಹದೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎಂದು ಅದು ತಿಳಿಸಿದೆ.

ಆಸ್ಪತ್ರೆಗಳಿಗೆ ಕಳುಹಿಸಿಕೊಡಲಾಗುತ್ತಿರುವ ಊಟದಲ್ಲಿ ಅನ್ನ, ದಾಲ್, ಪಲ್ಯ, ಬನ್, ಮಂಚ್ ನಟ್ಸ್ ಮತ್ತು ಸಣ್ಣ ಪ್ಯಾಕೆಟ್ ಅಮುಲ್ ಬೆಣ್ಣೆ ಇರಿಸಲಾಗಿದೆ.

ಸಂಕಷ್ಟದ ಸಮಯದಲ್ಲಿ ಆರೋಗ್ಯ ಪಾಲಕರು ಮತ್ತು ರೋಗಿಗಳ ಅಗತ್ಯತೆಗೆ ಸ್ಪಂದಿಸುತ್ತಿರುವ ತಾಜ್ ಹೊಟೇಲ್ ನ ಈ ಉತ್ತಮ ಕೆಲಸವನ್ನು ವಿರಾಟ್ ಕೊಹ್ಲ ಸಹಿತ ಹಲವರು ಪ್ರಶಂಸಿದ್ದಾರೆ.

Advertisement

ಸಂಕಷ್ಟದ ಸಂದರ್ಭದಲ್ಲಿ ಟಾಟಾ ಸಂಸ್ಥೆಗಳು ಎಲ್ಲರಿಗಿಂತ ಮೇಲ್ಪಂಕ್ತಿಯಲ್ಲಿರುತ್ತದೆ ಎಂದು ಉದ್ಯಮಿ ಹರ್ಷ ಗೊಯಂಕಾ ಅವರು ತಮ್ಮ ಟ್ವೀಟ್ ನಲ್ಲಿ ಪ್ರಶಂಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next