Advertisement

ಶ್ರೇಣಿಕೃತ ಸಮಾಜ ವ್ಯವಸ್ಥೆ ವಿರುದ್ಧ ಹೋರಾಡುವೆ: ಗದ್ದರೆ

02:32 PM Feb 02, 2018 | Team Udayavani |

ಬೀದರ: ಬಂದೂಕಿನ ತುದಿಗೆ ಗುರಿಯಾದರೂ ಶ್ರೇಣಿಕೃತ ಸಮಾಜ ವ್ಯವಸ್ಥೆಯನ್ನು ವಿರೋಧಿಸುತ್ತೇನೆ. ಬಸವಣ್ಣನವರ ಕನಸಾದ ಸರ್ವಸಮಾನತೆಯ ಸಮಾಜ ಸ್ಥಾಪನೆಗೆ ಹೋರಾಡುತ್ತೇನೆ ಎಂದು ಕ್ರಾಂತಿ ಕವಿ, ಹೋರಾಟಗಾರ ಜಿ. ಗದ್ದರ (ಗುಲ್ವಾಡಿ ವಿಠಲರಾವ್‌) ಹೇಳಿದರು.

Advertisement

ನಗರದ ಬಸವಗಿರಿಯಲ್ಲಿ ನಡೆದ ವಚನ ವಿಜಯೋತ್ಸವ ಸಮಾರಂಭದಲ್ಲಿ “ಗುರುವಚನ’ ಗ್ರಂಥದ ತೆಲುಗು ಆವೃತ್ತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಮಾಜ ಸುಧಾರಕ ಬಸವಣ್ಣನವರ ಅಸ್ಪೃಶ್ಯತೆ ನಿವಾರಣೆ, ದೇವರು ಮತ್ತು ಭಕ್ತರ ಮಧ್ಯದಲ್ಲಿರುವ ಮಧ್ಯವರ್ತಿಗಳ ನಿರಾಕರಣೆ ಹಾಗೂ ಎಲ್ಲರೂ ಸಮಾನವಾಗಿ ಜೀವಿಸಬೇಕೆನ್ನುವ ತತ್ವಗಳನ್ನು ನನ್ನ ಹೃದಯದಲ್ಲಿಟ್ಟು ಪೋಷಿಸುತ್ತೇನೆ ಎಂದರು.

ದೇವರ ಮುಂದೆ ಎಲ್ಲರೂ ಸಮಾನರಲ್ಲವೆ ಎಂದು ಪ್ರಶ್ನಿಸಿದ ಗದ್ದರ, ಎಲ್ಲೆಡೆ ಪುರುಷರು ಸಭೆ ಸಮಾರಂಭ ಆಯೋಜಿಸುವುದನ್ನು ನೋಡಿದ್ದೇನೆ. ಆದರೆ, ಇಲ್ಲಿ ಅಕ್ಕ ಅನ್ನಪೂರ್ಣತಾಯಿ ಓರ್ವ ಮಹಿಳೆ ಸಮಾರಂಭ ಯಶಸ್ವಿಯಾಗಿ ಆಯೋಜಿಸಿದ್ದಾರೆ. ಇದುವೇ ಬಸವಕ್ರಾಂತಿ ಎಂದು ಬಣ್ಣಿಸಿದರು.
 
ಅಕ್ಕ ಅನ್ನಪೂರ್ಣತಾಯಿ ಮಾತನಾಡಿ, ಬಸವ ಭೂಮಿ ಮತ್ತೆ ಬಸವಾದಿ ಪ್ರಥಮರಿಂದ ವೈಭವದಿ ಮರೆಯಬೇಕು. ವಚನಗಳು ನಾಡ್ತುಂಬ ಹರಡಬೇಕು. ಬೆರಣಿ ಆಯುವಲ್ಲಿ ಕಾಲ ಕಳೆಯದೆ, ಶರಣರು ಪ್ರಾಣ ಕೊಟ್ಟು ಉಳಿಸಿದ ವಚನಗಳನ್ನು ಆಚರಣೆಯಲ್ಲಿ ತರಬೇಕು. ಈ ಭೂಮಿ ಮತ್ತೆ ಬಸವಾದಿ ಶರಣರು ನಡೆದಾಡಿದ ಶರಣರ ನಾಡಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಕೇರಳ ಬಸವ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ ಮಾತನಾಡಿ, ಕೇರಳದಲ್ಲಿ 10 ಲಕ್ಷ ಜನ ಲಿಂಗಾಯರಿದ್ದಾರೆ. ಕಲ್ಯಾಣ ಕ್ರಾಂತಿಯ ಅಂತಿಮ ಘಟ್ಟದಲ್ಲಿ ಕೇರಳಕ್ಕೆ ಮೈಗ್ರೇಟ್‌ ಆಗಿದ್ದಾರೆ. ರಾಜ್ಯಶಾಹಿಯಿಂದ ಬಹಳ ತೊಂದರೆ ಅನುಭವಿಸಿದರು ಕೇರಳ ಲಿಂಗಾಯತರು ಎಂದರು. 40 ಪುಸ್ತಕ ಮಲೆಯಾಳಿಯಲ್ಲಿ ಹೊರತಂದಿದ್ದೇವೆ. ಕೇರಳದ ಎಲ್ಲಾ ಊರಲ್ಲಿ ಬಸವ ಜಯಂತಿ ಆಚರಿಸುತ್ತಿದ್ದೇವೆ. ಕಾಯಕ
ದಿನ ಆಚರಿಸುತ್ತಿರುವ ಮೊದಲಿಗರು ನಾವು. ಕಾಯಕದಿಂದ ಗಳಿಸಿದ್ದಲ್ಲಿ ದಾಸೋಹ ಮಾಡಿ ಎಂದು ಹೇಳಿದರು.

ಸಮಾರಂಭದಲ್ಲಿ ಡಾ| ಗಂಗಾಂಬಿಕೆ ಅಕ್ಕ, ಶ್ರೀ ಶಾಂತಬಿಷ್ಠ ಚೌಡಯ್ಯ ಮಹಾಸ್ವಾಮಿಗಳು, ಶ್ರೀ ಸಿದ್ಧಬಸವ ಕಬೀರ ಮಹಾಸ್ವಾಮಿಗಳು, ಶ್ರೀ ಪಂಚಾಕ್ಷರಿ ಸ್ವಾಮಿಗಳು, ಶ್ರೀ ಪ್ರಭುದೇವರು, ಡಾ| ಬಸವಲಿಂಗ ಪಟ್ಟದ್ದೇವರು, ಶ್ರೀ ಬಸವ ಜಯಮೃತ್ಯುಂಜಯ ಸ್ವಾಮಿಗಳು, ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು, ಡಾ| ಶಿವಾನಂದ ಸ್ವಾಮೀಜಿ, ಸಂಜಯ ವಾಡೇಕರ್‌, ಐ.ಆರ್‌. ಮಠಪತಿ,
ಪ್ರಶಾಂತ ಕಲ್ಲೂರ, ಡಾ| ರವಿಕುಮಾರ ಗಂದಗೆ, ಸೋಮಶೇಖರ ಪಾಟೀಲ, ರಾಜೇಂದ್ರಕುಮಾರ ಗಂದಗೆ, ರಾಜಕುಮಾರ ಪಾಟೀಲ, ಕೆ. ರವಿಶಂಕರ, ರಾಜಶೇಖರ ಯಂಕಂಚಿ, ವೈಜಿನಾಥ ಕೊಳಾರ, ಸುರೇಶ ಪಾಟೀಲ, ಸೋಮಶೇಖರ ಪಾಟೀಲ, ನಿರಂಜನ ನವದಗೇರಿ, ಶರಣಪ್ಪ ಕಾರಬಾರಿ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next