Advertisement

ಇಂದು ಮತ್ತೆ ಲಕ್ಷ್ಮೀ ಹೆಬ್ಟಾಳಕರ, ಸತೀಶ ಜಾರಕಿಹೊಳಿ ಕುಸ್ತಿ?

06:59 AM Oct 15, 2018 | |

ಬೆಳಗಾವಿ: ಸಾಕಷ್ಟು ಕುತೂಹಲ ಹುಟ್ಟಿಸಿರುವ ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಸಿದದ್ಧಗಳು ಪೂರ್ಣಗೊಂಡಿವೆ. ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಹಾಗೂ ಸತೀಶ ಜಾರಕಿಹೊಳಿ ನಡುವೆ ಮತ್ತೂಂದು ರಾಜಕೀಯ ಕದನ ನಡೆಯುವ ಲಕ್ಷಣಗಳು ಕಂಡು ಬಂದಿವೆ. ಚುನಾವಣೆ ನಡೆಯದೆ ಎರಡೂ ಸ್ಥಾನಕ್ಕೆ ಅವಿರೋಧ ಆಯ್ಕೆ ಆಗಬೇಕೆಂದು ಸತೀಶ ಜಾರಕಿಹೊಳಿ ಭಾನುವಾರ ರಾತ್ರಿಯವರೆಗೂ ಶತಾಯ ಗತಾಯ ಪ್ರಯತ್ನ
ಮಾಡಿದ್ದಾರೆ. ಕಾಂಗ್ರೆಸ್‌ ಅಲ್ಲದೆ ಎಂಇಎಸ್‌ ಸದಸ್ಯರ ಜೊತೆಗೂ ಸಭೆ ನಡೆಸಿದ್ದಾರೆ. ಆದರೆ, ಹೆಬ್ಟಾಳಕರ ಬಣ ತಮಗೇ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಪಟ್ಟು ಹಿಡಿದಿರುವದರಿಂದ ಎಲ್ಲವೂ ಕಗ್ಗಂಟಾಗಿದೆ.

Advertisement

ಮೂಲಗಳ ಪ್ರಕಾರ ಅವಿರೋಧ ಆಯ್ಕೆಗೆ ಸಂಧಾನ ಆಗಿದೆ. ಹೆಸರುಗಳು ಅಂತಿಮವಾಗಬೇಕಷ್ಟೆ. ಕೊನೆಯ ಕ್ಷಣದವರೆಗೆ ಯಾವುದೇ ರಾಜಕೀಯ ಬೆಳವಣಿಗೆಗಳು ನಡೆಯದೇ ಇದ್ದರೆ ಎರಡೂ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಇದೂ ಸಹ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಅವರ ನಿರ್ಧಾರದ ಮೇಲೆ ಅವಲಂಬಿತವಾಗಿದೆ ಎಂದು ಹೇಳಲಾಗುತ್ತಿದೆ. ಒಟ್ಟು 14 ಚುನಾಯಿತ ಸದಸ್ಯರು ಹಾಗೂ ಮೂವರು ನಾಮನಿರ್ದೇಶಿತ ಸದಸ್ಯರನ್ನೊಳಗೊಂಡ ಎಪಿಎಂಸಿಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರದ ಗದ್ದುಗೆ ಹಿಡಿಯುವುದು ನಿಶ್ಚಿತ. ಯಾರು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಎಂಬುದಷ್ಟೇ ಈಗ ಉಳಿದುಕೊಂಡಿರುವ ಕುತೂಹಲ.
ಅಧ್ಯಕ್ಷ ಸ್ಥಾನಕ್ಕೆ ಯುವರಾಜ ಕದಂ, ಆನಂದ ಪಾಟೀಲ ಹಾಗೂ ಸುಧೀರ ಗಡ್ಡೆ ಅವರ ಹೆಸರು ಕೇಳಿ ಬರುತ್ತಿವೆ. ಯುವರಾಜ ಕದಂ ಇಬ್ಬರೂ ಶಾಸಕರ ಜತೆ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಅವರ ಹೆಸರು ಅಂತಿಮವಾದರೆ ಯಾವುದೇ ಸಮಸ್ಯೆ
ಉಂಟಾಗುವುದಿಲ್ಲ. ಬೇರೆ ಹೆಸರು ಪ್ರಸ್ತಾಪವಾದರೆ ಹೆಬ್ಟಾಳಕರ ಬಣ ಇದಕ್ಕೆ ವಿರೋಧ ವ್ಯಕ್ತ ಮಾಡಲಿದೆ ಎಂದು ಮೂಲಗಳು ಹೇಳಿವೆ.

ಒಟ್ಟು 14 ಚುನಾಯಿತ ಸದಸ್ಯರಲ್ಲಿ ಕಾಂಗ್ರೆಸ್‌ ಆರು ಸದಸ್ಯರನ್ನು ಹೊಂದಿದೆ. ಮಹಾರಾಷ್ಟ್ರ ಏಕೀಕರಣ ಬೆಂಬಲಿತ ಐವರು ಸದಸ್ಯರಿದ್ದರೆ, ಬಿಜೆಪಿ ಇಬ್ಬರು ಸದಸ್ಯರನ್ನು ಹೊಂದಿದೆ. ಒಬ್ಬರು ಸದಸ್ಯರು ಯಾವುದೇ ಪಕ್ಷಕ್ಕೆ ಸೇರಿಲ್ಲ. ಇದಲ್ಲದೇ ಮೂವರು ನಾಮನಿರ್ದೇಶಿತ ಸದಸ್ಯರಿದ್ದಾರೆ. ಬೆಳಗಾವಿ ಗ್ರಾಮೀಣ ಹಾಗೂ ಯಮಕನಮರಡಿ ಕ್ಷೇತ್ರಗಳ ವ್ಯಾಪ್ತಿಯನ್ನು ಇದು ಹೊಂದಿದೆ.

ಬಹುತೇಕ ಬೆಳಗಾವಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿ ಹೊಂದಿರುವ ಎಪಿಎಂಸಿಯಲ್ಲಿ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಪ್ರವೇಶ ಮಾಡಿರುವುದು ಹಾಗೂ ಇದರ ಮೇಲೆ ಹಿಡಿತ ಸಾಧಿಸಲು ಮುಂದಾಗಿರುವದು ಇಷ್ಟೆಲ್ಲಾ ರಾದಾಟಛಿಂತಕ್ಕೆ ಕಾರಣವಾಗಿದೆ. ಇದೇ ಕಾರಣದಿಂದ ಈ ಚುನಾವಣೆ ಮತ್ತೂಮ್ಮೆ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಹಾಗೂ ಜಾರಕಿಹೊಳಿ ಸಹೋದರರ ನಡುವೆ ರಾಜಕೀಯ ಕದನಕ್ಕೆ ವೇದಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ನಾಯಕರ ಸಭೆ
ಈ ಮಧ್ಯೆ, ಜಾರಕಿಹೊಳಿ ಹಾಗೂ ಹೆಬ್ಟಾಳಕರ ಪ್ರತ್ಯೇಕವಾಗಿ ಸದಸ್ಯರು ಹಾಗೂ ತಮ್ಮ ಬೆಂಬಲಿಗರ ಸಭೆ ನಡೆಸಿದರು. ಭಾನುವಾರ
ಸಂಜೆಯ ವರೆಗೂ ಯಾವುದೇ ಒಮ್ಮತಕ್ಕೆ ಬಂದಿರಲಿಲ್ಲ. ಇಬ್ಬರೂ ಶಾಸಕರು ಇಂಥವರೇ ಆಗಬೇಕು ಎಂದು ಪಟ್ಟು ಹಿಡಿದಿರುವುದರಿಂದ ಅಂತಿಮ ಆಯ್ಕೆ ತಲೆನೋವಾಗಿದೆ ಎನ್ನಲಾಗಿದೆ.

Advertisement

ಲಾಭ ಪಡೆಯಲು ಯತ್ನ
ಈ ಮಧ್ಯೆ ಹೆಬ್ಟಾಳಕರ ಹಾಗೂ ಜಾರಕಿಹೊಳಿ ನಡುವಿನ ಭಿನ್ನಮತದ ಲಾಭವನ್ನು ಪಡೆಯಲು ಮಹಾರಾಷ್ಟ್ರ ಏಕೀಕರಣ ಸಮಿತಿ ಯತ್ನಿಸುತ್ತಿದೆ. ಮೊದಲ ಅವಧಿಗೆ ಬಿಜೆಪಿ ಬೆಂಬಲ ಪಡೆದಿದ್ದ ಎಂಇಎಸ್‌, ಅಧ್ಯಕ್ಷ ಹುದ್ದೆ ಅಲಂಕರಿಸಿತ್ತು. ಬಿಜೆಪಿಯ ಸದಸ್ಯರು ಉಪಾಧ್ಯಕ್ಷ ಸ್ಥಾನ ಪಡೆದುಕೊಂಡಿದ್ದರು. ಈ ಬಾರಿಯೂ ಅದೇ ಲೆಕ್ಕಾಚಾರದಲ್ಲಿ ಎಂಇಎಸ್‌ ಬಣ ತೊಡಗಿರುವುದು ಕುತೂಹಲ ಮೂಡಿಸಿದೆ. ತಮ್ಮ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವಾಗ ಬೇರೆಯವರಿಗೆ ಅವಕಾಶ ಮಾಡಿಕೊಡಬಾರದು ಎಂಬ
ಲೆಕ್ಕಾಚಾರದಿಂದ ಸತೀಶ ಜಾರಕಿಹೊಳಿ ಎಂಇಎಸ್‌ ಸದಸ್ಯರನ್ನೇ ತಮ್ಮ ಕಡೆ ಸೆಳೆಯಲು ತಂತ್ರ ಹೂಡಿದ್ದಾರೆ. ಎಂಇಎಸ್‌ ಯಾವುದೇ ಕಾರಣಕ್ಕೂ ಅಧಿಕಾರದ ಗದ್ದುಗೆ ಹಿಡಿಯಬಾರದು ಎಂಬ ಲೆಕ್ಕಾಚಾರದಲ್ಲಿ ಹೆಬ್ಟಾಳಕರ ಗುಂಪು ಜಾರಕಿಹೊಳಿ ಬಣಕ್ಕೆ ಬೆಂಬಲ ನೀಡಿದರೆ ಮಾತ್ರ ಎಪಿಎಂಸಿ ಮೇಲೆ ಕಾಂಗ್ರೆಸ್‌ ಧ್ವಜ ಹಾರಬಹುದು.

ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಯಾವುದೇ ಗೊಂದಲವಿಲ್ಲದೆ ಮುಗಿಯಲಿದ್ದು, ಎರಡೂ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯುವಂತೆ ಪ್ರಯತ್ನ ಮಾಡಲಾಗುವುದು. ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ವಿಷಯವೇ ಬೇರೆ, ಎಪಿಎಂಸಿ ಚುನಾವಣೆಯೇ ಬೇರೆ. ಇಲ್ಲಿ ಯಾವ ರಾಜಕೀಯ ಅಥವಾ ಗುಂಪುಗಾರಿಕೆ ಇಲ್ಲ. ಹೀಗಾಗಿ, ಭಿನ್ನಮತದ ಪ್ರಶ್ನೆಯೇ ಬರುವುದಿಲ್ಲ.

ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next