Advertisement

FIFA ವಿಶ್ವಕಪ್‌ ಕ್ವಾಲಿಫೈಯರ್‌; ಭಾರತ ಫುಟ್‌ಬಾಲ್‌ ತಂಡ ಪ್ರಕಟ: ಛೇತ್ರಿಗೆ ವಿದಾಯ ಪಂದ್ಯ

12:35 AM May 25, 2024 | Team Udayavani |

ಭುವನೇಶ್ವರ: ಕುವೈಟ್‌ ವಿರುದ್ಧ ಜೂ. 6ರಂದು ಕೋಲ್ಕತಾದಲ್ಲಿ ಆಡಲಾಗುವ ವಿಶ್ವಕಪ್‌ ಅರ್ಹತಾ ಫ‌ುಟ್‌ಬಾಲ್‌ ಪಂದ್ಯಾವಳಿಗಾಗಿ ಭಾರತದ 27 ಸದಸ್ಯರ ತಂಡವನ್ನು ಪ್ರಕಟಿಸಲಾಗಿದೆ. ಇದು ಭಾರತೀಯ ಫುಟ್‌ಬಾಲ್‌ ಲೆಜೆಂಡ್‌ ಸುನೀಲ್‌ ಛೇತ್ರಿ ಆಡಲಿರುವ ಕಟ್ಟಕಡೆಯ ಅಂತಾರಾಷ್ಟ್ರೀಯ ಪಂದ್ಯವೆಂಬುದು ವಿಶೇಷ.

Advertisement

ಭುವನೇಶ್ವದರಲ್ಲಿ ನಡೆದ ಅಭ್ಯಾಸ ಶಿಬಿರಕ್ಕೆ 32 ಆಟಗಾರರನ್ನು ಆರಿಸಲಾಗಿತ್ತು. ಇವರಲ್ಲಿ ಐವರನ್ನು ಕೈಬಿಟ್ಟು ತಂಡವನ್ನು ಅಂತಿಮಗೊಳಿಸಲಾಯಿತು. ಈ ಐವರೆಂದರೆ ಫುರ್ಬ ಲಚೆನ್ಪ, ಪರ್ತಿಬ್‌ ಗೊಗೋಯ್‌, ಇಮ್ರಾನ್‌ ಖಾನ್‌, ಮುಹಮ್ಮದ್‌ ಹಮ್ಮದ್‌ ಮತ್ತು ಜಿತಿನ್‌ ಎಂ.ಎಸ್‌. ಇವರನ್ನು ಶಿಬಿರದಿಂದ ಬಿಡುಗಡೆ ಮಾಡಲಾಗಿದೆ. ಉಳಿದವರು ಮೇ 29ರ ತನಕ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಧಾನ ಕೋಚ್‌ ಐಗರ್‌ ಸ್ಟಿಮ್ಯಾಕ್‌ ತಂಡವನ್ನು ಪ್ರಕಟಿ ಸಿದರು. ಗಾಯಾಳು ಆಟಗಾರ ರಾಗಿರುವ ಫಾರ್ವರ್ಡ್‌ ಪರ್ತೀಬ್‌ ಗೊಗೋಯ್‌ ಮತ್ತು ಡಿಫೆಂಡರ್‌ ಮುಹಮ್ಮದ್‌ ಹಮ್ಮದ್‌ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ.

ಈ ಪಂದ್ಯದ ಬಳಿಕ “ಎ’ ವಿಭಾಗದ ಉಳಿದೆರಡು ಪಂದ್ಯಗಳನ್ನಾಡಲು ಭಾರತ ತಂಡ ಜೂ. 11ರಂದು ಕತಾರ್‌ಗೆ ತೆರಳಲಿದೆ. ಭಾರತ ಸದ್ಯ “ಎ’ ವಿಭಾಗದಲ್ಲಿ ದ್ವಿತೀಯ ಸ್ಥಾನಿಯಾಗಿದೆ (4 ಪಂದ್ಯ, 4 ಅಂಕ). ಅಗ್ರ 2 ತಂಡಗಳು 3ನೇ ಸುತ್ತು ಪ್ರವೇಶಿಸಲಿವೆ. ಜತೆಗೆ ಎಎಫ್ಸಿ ಏಷ್ಯನ್‌ ಕಪ್‌ಗೆ ಅರ್ಹತೆ ಸಂಪಾದಿಸಲಿವೆ. ಇದು 2027ರಂದು ಸೌದಿ ಅರೇಬಿಯಾದಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next