Advertisement
ಸ್ಟಾನಿಸ್ಲಾವ್ ಶೆರ್ಚೆಸೋವ್ ನೇತೃತ್ವದ ರಶ್ಯ ಕಳೆದ ಅಕ್ಟೋಬರ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ತನ್ನ ಕೊನೆಯ ಗೆಲುವು ದಾಖಲಿಸಿತ್ತು. ಈ ವರ್ಷ ಟರ್ಕಿ ವಿರುದ್ಧ ಡ್ರಾ ಗಳಿಸಿದ್ದೇ ದೊಡ್ಡ ಸಾಧನೆ. ಇದಕ್ಕೂ ಹಿಂದಿನ ಪಂದ್ಯಗಳಲ್ಲಿ ಅದು ಬ್ರಝಿಲ್, ಫ್ರಾನ್ಸ್ ಮತ್ತು ಆಸ್ಟ್ರಿಯಾ ವಿರುದ್ಧ ಪರಾಭವಗೊಂಡಿತ್ತು. ಜೂ. 14ರಂದು ಸೌದಿ ಅರೇಬಿಯಾ ವಿರುದ್ಧ ರಶ್ಯ ತನ್ನ ಮೊದಲ ಪಂದ್ಯ ಆಡಲಿದೆ.
Related Articles
ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿರುವ 31 ವಿದೇಶಿ ತಂಡಗಳಲ್ಲಿ ಮೊದಲು ಮಾಸ್ಕೋಗೆ ಬಂದಿಳಿದ ಹೆಗ್ಗಳಿಕೆ ಇರಾನ್‌ನದ್ದಾಗಿದೆ. “ರಶ್ಯಕ್ಕೆ ಆಗಮಿಸುವ ಮೂಲಕ ಇರಾನಿಯನ್ ಫುಟ್‌ಬಾಲ್‌ನ ಕನಸೊಂದು ನನಸಾಗಿದೆ’ ಎಂದು ತಂಡದ ಪೋರ್ಚುಗಲ್ ಕೋಚ್ ಕಾರ್ಲೋಸ್ ಕ್ವೀರೋಜ್ ಹೇಳಿದರು.
Advertisement
ವಿಶ್ವಕಪ್ ಗೋಲುವೀರರು* ವಿಶ್ವಕಪ್ ಗೋಲುವೀರರೆಂದೊಡನೆ ನೆನಪಾಗುವವರು ಜರ್ಮನಿಯ ಮಿರೋಸ್ಲಾವ್ ಕೋಲ್ಸ್. ವಿಶ್ವಕಪ್‌ನಲ್ಲಿ ಸರ್ವಾಧಿಕ 16 ಗೋಲು ಹೊಡೆದ ದಾಖಲೆ ಇವರದ್ದು. ರೊನಾಲ್ಡೊ (15), ಗೆರ್ಡ್ ಮುಲ್ಲರ್ (14) ಅನಂತರದ ಸ್ಥಾನದಲ್ಲಿದ್ದಾರೆ.
* ಫ್ರಾನ್ಸ್‌ನ ಜಸ್ಟ್ ಫಾಂಟೇನ್ ಒಂದೇ ಕೂಟದಲ್ಲಿ ಅತೀ ಹೆಚ್ಚು 13 ಗೋಲು ಸಿಡಿಸಿದ ದಾಖಲೆ ಹೊಂದಿದ್ದಾರೆ. ಇವು 1958ರ ಕೂಟದ 6 ಪಂದ್ಯಗಳಲ್ಲಿ ದಾಖಲಾಗಿದ್ದವು.
* ವಿಶ್ವಕಪ್‌ನ ಅತೀ ಹೆಚ್ಚಿನ ಹ್ಯಾಟ್ರಿಕ್ ಸಾಧಕರೆಂದರೆ ಸ್ಯಾಂಡರ್ ಕೋಕ್ಸಿಸ್ (ಹಂಗೇರಿ, 1954), ಜಸ್ಟ್ ಫಾಂಟೇನ್ (ಫ್ರಾನ್ಸ್, 1958), ಗೆರ್ಡ್ ಮುಲ್ಲರ್ (ಪಶ್ಚಿಮ ಜರ್ಮನಿ, 1970), ಗ್ಯಾಬ್ರಿಯಲ್ ಬಟಿಸ್ಟುಟ (ಆರ್ಜೆಂಟೀನಾ, 1994 ಹಾಗೂ 1998). ಇವರು ತಲಾ 2 ಸಲ ಹ್ಯಾಟ್ರಿಕ್ ಗೋಲು ಸಿಡಿಸಿದ್ದಾರೆ.
* ವಿಶ್ವಕಪ್ ಕೂಟದ ಅತೀ ವೇಗದ ಹ್ಯಾಟ್ರಿಕ್ ಹೀರೋ ಹಂಗೇರಿಯ ಲಾಜೊÉ ಕಿಸ್. 1982ರ ಎಲ್ ಸಾಲ್ವೋಡರ್ ವಿರುದ್ಧದ ಪಂದ್ಯದಲ್ಲಿ ಕಿಸ್ ಕೇವಲ 8 ನಿಮಿಷಗಳ ಅವಧಿಯಲ್ಲಿ ಈ ಸಾಧನೆ ಮಾಡಿದ್ದರು (69ನೇ, 72ನೇ ಹಾಗೂ 76ನೇ ನಿಮಿಷ).
* ವಿಶ್ವಕಪ್‌ನಲ್ಲಿ ಗೋಲು ಸಿಡಿಸಿದ ಅತೀ ಕಿರಿಯ ಆಟಗಾರನೆಂಬ ಹೆಗ್ಗಳಿಕೆ ಪೀಲೆ ಹೆಸರಲ್ಲಿದೆ. 1958ರ ಕೂಟದ ವೇಲ್ಸ್ ಎದುರಿನ ಪಂದ್ಯದಲ್ಲಿ ಗೋಲು ಬಾರಿಸುವಾಗ ಪೀಲೆ ವಯಸು ಕೇವಲ 17 ವರ್ಷ, 7 ತಿಂಗಳು, 27 ದಿನ!
* ಕೂಟದ ಅತೀ ವೇಗದ ಗೋಲು (ಫಾಸ್ಟೆಸ್ಟ್ ಗೋಲು) ಟರ್ಕಿಯ ಹಕಾನ್ ಸುಕುರ್ ಅವರಿಂದ ದಾಖಲಾಗಿದೆ. 2002ರ ದಕ್ಷಿಣ ಕೊರಿಯ ವಿರುದ್ಧ ಅವರು ಪಂದ್ಯ ಆರಂಭಗೊಂಡ ಕೇವಲ 11 ನಿಮಿಷಗಳಲ್ಲಿ ಗೋಲು ಹೊಡೆದಿದ್ದರು.