Advertisement
ಭಾರತೀಯ ಕಾಲಮಾನ ಪ್ರಕಾರ ಈ ಪಂದ್ಯ ರಾತ್ರಿ 11.30ರಿಂದ ಸೋಚಿಯ “ಫಿಶ್r ಒಲಿಂಪಿಕ್ ಸ್ಟೇಡಿಯಂ’ನಲ್ಲಿ ನಡೆಯಲಿದೆ. ಜಗತ್ತಿನ ಫುಟ್‌ಬಾಲ್ ಅಭಿಮಾನಿಗಳು ಈ ಪಂದ್ಯವನ್ನು ವೀಕ್ಷಿಸಲು ತುದಿಗಾಲಲ್ಲಿ ನಿಂತಿರುವಾಗಲೇ ಎರಡೂ ತಂಡಗಳ “ಒಳಗಿನ ವಿದ್ಯಮಾನ’ಗಳೇ ಹೆಚ್ಚಿನ ಸುದ್ದಿಯಾಗುತ್ತಿರುವುದು ವಿಪರ್ಯಾಸ. ಮೊದಲ ಪಂದ್ಯಕ್ಕಾಗಿ ಕಣಕ್ಕಿಳಿಯಲು ಎರಡೇ ದಿನಗಳಿರುವಾಗ ಸ್ಪೇನ್ ತನ್ನ ಕೋಚ್ ಜೂಲನ್ ಲೊಪೆಟೆಗಿ ಅವರನ್ನು ಕೆಳಗಿಳಿಸಿದೆ. ಫೆರ್ನಾಂಡೊ ಹೀರೊ ನೂತನ ಕೋಚ್ ಆಗಿ ನೇಮಕಗೊಂಡಿದ್ದಾರೆ. ಅವರು ಸ್ಪ್ಯಾನಿಶ್ ಫೆಡರೇಶನ್‌ನಲ್ಲಿ ಅವರು ನ್ಪೋರ್ಟಿಂಗ್ ಡೈರೆಕ್ಟರ್ ಕೂಡ ಹೌದು.
ಪೋರ್ಚುಗಲ್-ಸ್ಪೇನ್ ನಡುವಿನ ಪಂದ್ಯವೆಂದರೆ ಅಲ್ಲಿ ಗೋಲುಗಳಿಗೆ ಬರಗಾಲ ಎಂದೇ ಅರ್ಥ. ಇತ್ತಂಡಗಳೂ ಆಕ್ರಮಣಕಾರಿಯಾಗಿ ಮನ್ನುಗ್ಗುತ್ತವಾದರೂ ರಕ್ಷಣೆಗೆ ಅಷ್ಟೇ ಪ್ರಮಾಣದಲ್ಲಿ ಒತ್ತು ನೀಡುವುದರಿಂದ ಸಹಜವಾಗಿಯೇ ಗೋಲುಗಳು ದಾಖಲಾಗುವುದು ಅಪರೂಪ. ಇತ್ತಂಡಗಳು 2010ರ ವಿಶ್ವಕಪ್‌ನಲ್ಲಿ ಮುಖಾಮುಖೀಯಾದಾಗ ಕೇವಲ ಒಂದು ಗೋಲು ದಾಖಲಾಗಿತ್ತು. ಡೇವಿಡ್ ವಿಲ್ಲ ಗೋಲಿನಿಂದ ಸ್ಪೇನ್ ಜಯ ಸಾಧಿಸಿತ್ತು. ಬಹುಶಃ ಶುಕ್ರವಾರದ ಪಂದ್ಯ ಕೂಡ ಇದಕ್ಕೆ ಅಪವಾದವಾಗಲಿಕ್ಕಿಲ್ಲ.