ಜೂರಿಚ್: 2023ರಲ್ಲಿ ನಡೆಯುವ ವನಿತಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯ ಆತಿಥ್ಯ ಯಾರ ಪಾಲಾಗಲಿದೆ ಎಂಬುದನ್ನು ಮುಂದಿನ ತಿಂಗಳು ನಿರ್ಧರಿಸಲಾಗುವುದು ಎಂದು ಫಿಫಾ ತಿಳಿಸಿದೆ.
ಈ ಪ್ರತಿಷ್ಠಿತ ಪಂದ್ಯಾವಳಿಯ ಆತಿಥ್ಯಕ್ಕಾಗಿ ಬ್ರಝಿಲ್, ಜಪಾನ್, ಕೊಲಂಬಿಯಾ, ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್ ಜಂಟಿ ಉಮೇದುವಾರಿಕೆಯ ಬಿಡ್ ಸಲ್ಲಿಸಿವೆ. ಫಿಫಾದ 37 ಕೌನ್ಸಿಲ್‌ಗಳ ಸದಸ್ಯರು ಮತದಾನದ ಮೂಲಕ ಆತಿಥೇಯ ರಾಷ್ಟ್ರವನ್ನು ಆರಿಸಲಿವೆ.
ಲಾಕ್‌ಡೌನ್‌ಗಿಂತ ಮೊದಲೇ ಫಿಫಾ ತಂಡಗಳು 4 ರಾಷ್ಟ್ರಗಳಿಗೆ ತೆರಳಿ ಪರಿಶೀಲನೆಯನ್ನು ಮುಗಿಸಿವೆ. ಇದರ ವರದಿಯ ಆಧಾರದಲ್ಲಿ ಜೂನ್ ಮೊದಲ ವಾರ ಆತಿಥೇಯ ರಾಷ್ಟ್ರವನ್ನು ಹೆಸರಿಸಲಾಗುವುದು ಎಂದು ಫಿಫಾ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
2023ರ ವಿಶ್ವಕಪ್‌ನಲ್ಲಿ ಮೊದಲ ಸಲ ಸರ್ವಾಧಿಕ 32 ತಂಡಗಳು ಪಾಲ್ಗೊಳ್ಳುತ್ತಿವೆ. ಫ್ರಾನ್ಸ್‌ನಲ್ಲಿ ನಡೆದ 2019ರ ಕೂಟದಲ್ಲಿ 24 ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಅಮೆರಿಕ ಚಾಂಪಿಯನ್ ಆಗಿತ್ತು.