Advertisement

ಮೈದಾನ ಪರಿಶೀಲನೆ ಭಾರತಕ್ಕೆ ಫಿಫಾ ಅಧಿಕಾರಿಗಳು

09:33 AM Mar 11, 2017 | |

ಹೊಸದಿಲ್ಲಿ: ಮುಂಬರುವ ಅಕ್ಟೋಬರ್‌ನಲ್ಲಿ ಕಿರಿಯರ ಫ‌ುಟ್ಬಾಲ್‌ ವಿಶ್ವಕಪ್‌ ಕೂಟಕ್ಕೆ ಭಾರತ ಆತಿಥ್ಯ ವಹಿಸುತ್ತಿದೆ. ಈ ಬೆನ್ನಲ್ಲೇ ಫಿಫಾ ಅಧಿಕಾರಿಗಳು ಅಂತಿಮ ಸುತ್ತಿನ ಪರಿಶೀಲನೆ ನಡೆಸಲು ಭಾರತಕ್ಕೆ ಆಗಮಿಸಲಿದ್ದಾರೆ. ಅಖೀಲ ಭಾರತೀಯ ಫ‌ುಟ್ಬಾಲ್‌ ಸಂಸ್ಥೆ ಮೂಲಗಳು ಈ ವಿಷಯವನ್ನು ಖಚಿತಪಡಿಸಿವೆ. 

Advertisement

ಮೂಲಗಳ ಪ್ರಕಾರ ಮಾ. 21ರಂದು ಫಿಫಾ ಅಧಿಕಾರಿಗಳ ತಂಡ ಭಾರತಕ್ಕೆ ಆಗಮಿಸಲಿದೆ. ಈ ಹಿಂದೆ ಫಿಫಾ ತಂಡ 2 ಬಾರಿ ಭಾರತಕ್ಕೆ ಆಗಮಿಸಿ ಪರಿಶೀಲನೆ ನಡೆಸಿತ್ತು. ಇದು ಅಂತಿಮ ಸುತ್ತಿನ ಪರಿಶೀಲನೆಯಾಗಿದೆ. ಭಾರತಕ್ಕೆ ಆಗ ಮಿಸಲಿರುವ ಅಧಿಕಾರಿಗಳು  ಮಾ. 22ರಂದು ಗೋವಾಕ್ಕೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ಮಾ. 24ರಂದು ಕೊಚ್ಚಿ, ಮಾ. 25ರಂದು ಮುಂಬಯಿ, ಮಾ. 26ರಂದು ಗುವಾಹಟಿ ಮತ್ತು ಮಾ. 27ರಂದು ಕೋಲ್ಕತಾಕ್ಕೆ ತೆರಳಲಿದ್ದಾರೆ.

ಈಗಾಗಲೇ ವಿಶ್ವಕಪ್‌ ಫ‌ುಟ್ಬಾಲ್‌ ಆತಿಥ್ಯದ ಕ್ರೀಡಾಂಗಣ ದಲ್ಲಿ ಮೂಲಸೌಕರ್ಯ ಕಾಮಗಾರಿ ಪ್ರಗತಿಯಲ್ಲಿದೆ. ಕೆಲವು ಕ್ರೀಡಾಂಗಣಗಳು ಸಣ್ಣಪುಟ್ಟ ಕೆಲಸ ಹೊರತುಪಡಿಸಿದಂತೆ ಮಹಾಕೂಟಕ್ಕೆ ಸಜ್ಜಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next