Advertisement

FIFA ಸೌಹಾರ್ದ ಫುಟ್‌ಬಾಲ್‌ ಪಂದ್ಯ: ಮಾಲ್ದೀವ್ಸ್‌  ವಿರುದ್ಧ ಭಾರತಕ್ಕೆ 11-1 ಗೆಲುವು

11:15 PM Jan 02, 2025 | Team Udayavani |

ಬೆಂಗಳೂರು: ಪದಾರ್ಪಣೆಗೈದ ಪಂದ್ಯ ದಲ್ಲಿಯೇ ಫಾರ್ವರ್ಡ್‌ ಆಟಗಾರ್ತಿ ಲಿಂಗ್ಡೆಕಿಮ್‌ ಅವರ ನಾಲ್ಕು ಗೋಲುಗಳ ನೆರವಿನಿಂದ ಭಾರತೀಯ ವನಿತಾ ತಂಡವು ಎರಡನೇ ಫಿಫಾ ಸೌಹಾರ್ದ ಫ‌ುಟ್‌ಬಾಲ್‌ ಪಂದ್ಯದಲ್ಲಿ ಮಾಲ್ದೀವ್ಸ್‌ ತಂಡವನ್ನು 11-1 ಗೋಲುಗಳಿಂದ ಭರ್ಜರಿಯಾಗಿ ಸೋಲಿಸಿದೆ. ಈ ಮೂಲಕ 2025ರ ವರ್ಷದಲ್ಲಿ ತನ್ನ ಗೆಲುವಿನ ಅಭಿಯಾನವನ್ನು ಅಮೋಘವಾಗಿ ಆರಂಭಿಸಿದೆ.

Advertisement

ಪಂದ್ಯದ ಪ್ರತಿಯೊಂದು ಹಂತದಲ್ಲಿ ಲಿಂಗ್ಡೆಕಿಮ್‌ ಗೋಲನ್ನು ದಾಖಲಿಸಿ ತಂಡಕ್ಕೆ ಉತ್ತಮ ನೆರವು ನೀಡಿದರು. ಅವರ ಜತೆ ಈ ಪಂದ್ಯದ ಮೂಲಕ ಪದಾರ್ಪಣೆಗೈದ ನಂಗ್ಮೆಕಪಮ್‌ ಸಿಬಾನಿ ದೇವಿ ಒಂದು ಗೋಲು ಹೊಡೆದರೆ ಸಿಮ್ರಾನ್‌ ಗುರಂಗ್‌ ಅವಳಿ ಗೋಲು ಹೊಡೆದು ಮಿಂಚಿದರು.

ಡಿ. 30ರಂದು ನಡೆದ ಮೊದಲ ಸೌಹಾರ್ದ ಪಂದ್ಯವನ್ನು ಭಾರತ 14-0 ಅಂತರದಿಂದ ಗೆದ್ದುಕೊಂಡಿತ್ತು. ಈ ಕಾರಣಕ್ಕಾಗಿ ತಂಡದ ಮುಖ್ಯ ಕೋಚ್‌ ಜೋಕಿಮ್‌ ಅಲೆಕ್ಸಾಂಡರ್ಸನ್‌ ಅವರು ಈ ಪಂದ್ಯಕ್ಕಾಗಿ ತಂಡದಲ್ಲಿ ಬಹಳಷ್ಟು ಬದಲಾವಣೆ ಮಾಡಿದರು. ತಂಡದ ಎಲ್ಲರಿಗೂ ಆಡುವ ಅವಕಾಶ ಲಭಿಸಲಿ ಎಂಬ ಕಾರಣಕ್ಕಾಗಿ ಕೋಚ್‌ ಈ ನಿರ್ಧಾರ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next