Advertisement

ಸಮಬಲದ ಹೋರಾಟಕ್ಕೆ ಕ್ಷೇತ್ರ ವೇದಿಕೆ

12:15 PM Mar 25, 2019 | Team Udayavani |

ಕ್ಷೇತ್ರದ ವಸ್ತುಸ್ಥಿತಿ: ಕ್ಷೇತ್ರದಲ್ಲಿರುವ ಎಂಟು ವಾರ್ಡ್‌ಗಳ ಪೈಕಿ 5 ಕಾಂಗ್ರೆಸ್‌ ಬಳಿ ಇವೆ. ವಿಧಾನಸಭಾ ಕ್ಷೇತ್ರವೂ ಕಾಂಗ್ರೆಸ್‌ಗೆà ಸೇರಿದೆ. ಬಿಟಿಎಂ ಲೇಔಟ್‌ನಲ್ಲಿ ಕಾಂಗ್ರೆಸ್‌ ಹಿಡಿತಕ್ಕೆ ಇವು ಸಾಕ್ಷಿ. ಆದರೂ, ಲೋಕಸಭಾ ಚುನಾವಣೆಯಲ್ಲಿ ಮಾತ್ರ ಜನ ಬಿಜೆಪಿಯತ್ತ ಮುಖಮಾಡುತ್ತಾರೆ.

Advertisement

ಇದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸಿನ ಜತೆಗೆ ಈ ಕ್ಷೇತ್ರವನ್ನು ಪ್ರತಿನಿಧಿಸುವ ರಾಮಲಿಂಗಾರೆಡ್ಡಿ ಮತ್ತು ಹಿಂದಿದ್ದ ಸಂಸದ ಅನಂತಕುಮಾರ್‌ ಅವರ ನಡುವಿನ ಆಪ್ತತೆ ಎನ್ನಲಾಗಿದೆ. ಈಗ ಅಭ್ಯರ್ಥಿ ಬದಲಾಗಲಿದ್ದಾರೆ. ಹಾಗಾಗಿ, ಈಗಲೂ ಆ ಆಪ್ತತೆ ಕೆಲಸ ಮಾಡಲಿದೆಯೇ ಕಾದುನೋಡಬೇಕು.

ರಾಮಲಿಂಗಾರೆಡ್ಡಿ ಅವರು ಪಾಲಿಕೆ ಸದಸ್ಯರು, ಪಕ್ಷದ ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಎಲ್ಲ ವಾರ್ಡ್‌ಗಳಿಗೆ ಸಮಾನ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಕಾಂಗ್ರೆಸ್‌ಗೆ ಶ್ರೀರಕ್ಷೆ ಆಗಬಹುದು. ಆದರೆ, ರಾಮಲಿಂಗಾರೆಡ್ಡಿ ಅವರಿಗೆ ಸಣ್ಣ ಮುನಿಸು ಇರುವುದು ಆ ಪಕ್ಷಕ್ಕೆ ತುಸು ಕಿರಿಕಿರಿ ಆಗಿದೆ.

ಇದೆಲ್ಲವೂ ಅಭ್ಯರ್ಥಿ ಆಯ್ಕೆಯನ್ನು ಅವಲಂಬಿಸಿದೆ. ಈ ಮಧ್ಯೆ ಬಿಜೆಪಿಯಲ್ಲಿ ಅನಂತಕುಮಾರ್‌ ಪತ್ನಿ ತೇಜಸ್ವಿನಿ ಅವರು ಸ್ಪರ್ಧಿಸುವ ಸಾಧ್ಯತೆ ಇರುವುದರಿಂದ ಅನುಕಂಪವೂ ಕೆಲಸ ಮಾಡಲಿದೆ ಎಂಬ ಮಾತುಗಳಿವೆ. ಇಲ್ಲಿ ಒಕ್ಕಲಿಗರು ಮತ್ತು ಮುಸ್ಲಿಂರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಹಾಗಾಗಿ ಒಕ್ಕಲಿಗ ಅಭ್ಯರ್ಥಿಯನ್ನೇ ನಿಲ್ಲಿಸುವುದು ಸೂಕ್ತ ಎಂಬ ಅಭಿಪ್ರಾಯವೂ ಕಾಂಗ್ರೆಸ್‌ನಲ್ಲಿ ವ್ಯಕ್ತವಾಗುತ್ತಿದೆ. 2009ರಲ್ಲಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಕೃಷ್ಣ ಬೈರೇಗೌಡ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದಾಗ, ಕೇವಲ ಸುಮಾರು 35 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು.

Advertisement

ಪ್ರಮುಖ ಕೊಡುಗೆಗಳು
-ಜನಔಷಧಿ ಮಳಿಗೆಗಳ ನಿರ್ಮಾಣ
-ನೂರಕ್ಕೂ ಅಧಿಕ ಕೊಳವೆಬಾವಿಗಳು
-ಸಮುದಾಯ ಭವನಗಳ ನಿರ್ಮಾಣಕ್ಕೆ ಅನುದಾನ

ನಿರೀಕ್ಷೆಗಳು
-ಸೆಂಟ್ರಲ್‌ ಸಿಲ್ಕ್ ಬೋರ್ಡ್‌ ಜಂಕ್ಷನ್‌ನಲ್ಲಿಯ ಸಂಚಾರದಟ್ಟಣೆ ಸಮಸ್ಯೆ ಮುಕ್ತಿ ಸಿಗಬೇಕು
-ಮಳೆಗಾಲದಲ್ಲಿ ಕೋರಮಂಗಲ, ಮಡಿವಾಳದಲ್ಲಿ ಮನೆಗಳಿಗೆ ನೀರು ನುಗ್ಗುವುದು ಸಾಮಾನ್ಯವಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಸಿಗಬೇಕು
-70-80 ವರ್ಷಗಳ ಹಿಂದೆ ನಿರ್ಮಿಸಿದ ಸರ್ಕಾರಿ ಶಾಲಾ ಕಟ್ಟಡಗಳು ಶಿಥಿಲಗೊಂಡಿವೆ, ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿವೆ. ಇವು ಬಗೆಹರಿಯಬೇಕು

-ವಾರ್ಡ್‌ಗಳು- 8
-ಬಿಜೆಪಿ- 2
-ಕಾಂಗ್ರೆಸ್‌- 5
-ಜೆಡಿಎಸ್‌- 1

-ಜನಸಂಖ್ಯೆ- 4,59,751
-ಮತದಾರರ ಸಂಖ್ಯೆ- 2,62,829
-ಪುರುಷರು- 1,38,054
-ಮಹಿಳೆಯರು- 1,24,775

2014ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಚಲಾವಣೆಯಾದ ಮತಗಳು- 1,33,735 (ಶೇ. 55.62)
-ಬಿಜೆಪಿ ಪಡೆದ ಮತಗಳು- 70,537 (ಶೇ. 52.7)
-ಕಾಂಗ್ರೆಸ್‌ ಪಡೆದ ಮತಗಳು- 53,917 (ಶೇ. 40.3)
-ಜೆಡಿಎಸ್‌ ಪಡೆದ ಮತಗಳು- 4,442 (ಶೇ. 3.3)

2014ರ ಲೋಕಸಭೆ ಚುನಾವಣೆ ವೇಳೆ ಕ್ಷೇತ್ರದ ಚಿತ್ರಣ
-ಶಾಸಕ- ರಾಮಲಿಂಗಾರೆಡ್ಡಿ (ಕಾಂಗ್ರೆಸ್‌)
-ಪಾಲಿಕೆಯಲ್ಲಿ ಬಿಜೆಪಿ ಸದಸ್ಯರು- 3
-ಕಾಂಗ್ರೆಸ್‌ ಸದಸ್ಯರು- 5
-ಜೆಡಿಎಸ್‌ ಸದಸ್ಯರು- 0

ಮಾಹಿತಿ: ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next