Advertisement
ಪ್ರಸಕ್ತ ಸಾಲಿನಲ್ಲಿ ಮುಂಗಾರು ಪೂರ್ವ, ಮುಂಗಾರು ಮತ್ತು ಹಿಂಗಾರು ಕೈಕೊಟ್ಟಿದ್ದು, ರೈತರು ಬಿತ್ತಿದ್ದ ಬೆಳೆ ಒಣಗಿದೆ. ವಾಡಿಕೆಯಷ್ಟು ಮಳೆಯಾಗದೆ ಶೇ.33ರಷ್ಟು ಬೆಳೆ ನಷ್ಟ ಅನುಭವಿಸಿದ್ದಾರೆ. ಎರಡು ವರ್ಷ ಅತಿವೃಷ್ಟಿಯಿಂದಾಗಿ ಬೆಳೆ ನಷ್ಟ ಅನುಭವಿಸಿದ್ದ ರೈತರು, ಈ ಬಾರಿ ಬರದಿಂದ ಕಂಗಾಲಾಗಿದ್ದಾರೆ. ಕೃಷಿ ಮತ್ತು ಕಂದಾಯ ಇಲಾಖೆ ನಡೆಸಿದ ಜಂಟಿ ಸಮೀಕ್ಷೆಯಲ್ಲಿ ಜಿಲ್ಲೆಯ 9 ತಾಲೂಕುಗಳಲ್ಲಿ ಬರದ ತೀವ್ರತೆ ದೃಢಪಟ್ಟಿದೆ. ಬೆಳೆನಷ್ಟ, ರೈತರ ಸ್ಥಿತಿ, ಮೇವು ಹಾಗೂ ನೀರಿನ ಲಭ್ಯತೆಗೆ ಸಂಬಂಧಿಸಿದಂತೆ ಜಿಲ್ಲಾಡ ಳಿತ ಸಲ್ಲಿಸಿದ ವರದಿ ಆಧರಿಸಿ ಸರ್ಕಾರ ನಿರ್ಧಾರ ಕೈಗೊಂಡಿದೆ.
Related Articles
Advertisement
ಕಳೆದ ವರ್ಷ ವಾಡಿಕೆಗಿಂತ ಅಧಿಕ ಮಳೆಯಿಂದಾಗಿ ಕೈಗೆ ಸಿಗಬೇಕಾದ ಬೆಳೆ ಮಣ್ಣು ಪಾಲಾಗಿದೆ. ಅತಿವೃಷ್ಟಿ ಯಿಂದಾಗಿ 1267.21 ಹೆಕ್ಟೇರ್‌ನಲ್ಲಿ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ ಬೆಳೆ ನಷ್ಟ ವಿವÃ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮತ್ತು ಮುಂಗಾರು ಕೊರತೆಯಿಂದ 82,659 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಇದರಲ್ಲಿ ಭತ್ತ, ಎಸರು, ಉದ್ದು, ಎಳ್ಳು, ತಂಬಾಕು, ಸೂರ್ಯಕಾಂತಿ, ಕಬ್ಬು, ತಂಬಾಕು ಬೆಳೆ ನಷ್ಟವಾಗಿಲ್ಲ ಎಂದು ಕೃಷಿ ಇಲಾಖೆ ತಿಳಿಸಿದೆ.
ಏನಿದು ಎಫ್ಐಡಿ?: ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ, ಅಂತರ್ಜಾಲ ಆಧಾರಿತ ತಂತ್ರಾಂಶ ವ್ಯವಸ್ಥೆ ಇದಾಗಿದ್ದು, ನೋಂದಾಯಿಸಿಕೊಂಡ ರೈತ ಸರ್ಕಾರಿ ಸೌಲಭ್ಯಗಳನ್ನು ಪಡೆ ಯಲು ಅನುಕೂಲವಾಗಲಿದೆ. ಫಲಾನುಭವಿ ಗಳು ಪಡೆಯುವ ಪ್ರಯೋಜನಗಳ ವಿವರ ಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸ ಲಾಗುತ್ತದೆ. ಇದು ರೈತರು, ಭೂಮಿ ಮತ್ತು ಅವರಿಗೆ ವಿಸ್ತರಿಸಿದ ಪ್ರಯೋಜನಗಳ ಸಮಗ್ರ ವಿವರಗಳನ್ನೊಳಗೊಂಡ ಏಕೀಕೃತ ದತ್ತಾಂಶವಾಗಿರುತ್ತದೆ.
ಆಯ್ದ ಬೆಳೆಗಳಿಗೆ ವಿಮೆ ಸೌಲಭ್ಯ:
ಮೈಸೂರು: 2023-24ನೇ ಸಾಲಿನ ಹಿಂಗಾರು ಮತ್ತು ಬೇಸಿಗೆಯ ಅಪೇಕ್ಷಿತ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ-ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನ್ವಯ ವಿಮೆ ಸೌಲಭ್ಯ ಮಾಡಿಸಿಕೊಳ್ಳಲು ಕೃಷಿ ಇಲಾಖೆ ಸೌಲಭ್ಯ ಕಲ್ಪಿಸಿದೆ.
ಪ್ರಸಕ್ತ ಸಾಲಿನಲ್ಲಿ ಮೈಸೂರು ಜಿಲ್ಲೆಯಲ್ಲಿ 9 ಬೆಳೆಗಳಿಗೆ ರೈತರು ವಿಮೆ ಮಾಡಿಸಬಹುದಾಗಿದ್ದು, ಡಿ.1ರಿಂದ ಈ ಸೌಲಭ್ಯಕ್ಕೆ ನೋಂದಾಯಿಸಿಕೊಳ್ಳಬಹುದು. ಪ್ರತಿ ಎಕರೆಯಂತೆ ಟೋಮೊಟೊ ಬೆಳೆಗೆ 2,863 ರೂ., ಮಳೆಯಾಶ್ರಿತ ಮುಸುಕೊನ ಜೋಳಕ್ಕೆ 342 ರೂ., ನೀರಾವರಿ ಆಶ್ರಿತ ಮುಸುಕಿನ ಜೋಳಕ್ಕೆ 391 ರೂ., ರಾಗಿ ಮಳೆಯಾಶ್ರಿತಕ್ಕೆ 258 ರೂ., ನೀರಾವರಿ ಆಶ್ರಿತ ರಾಗಿಗೆ 308, ಮಳೆಯಾಶ್ರಿತ ಕಡಲೆ ಬೆಳೆಗೆ 210 ರೂ. ಹಾಗೂ ಮಳೆಯಾಶ್ರಿತ ಹುರುಳಿ ಬೆಳೆಗೆ 124 ರೂ. ವಿಮಾ ಕಂತನ್ನು ಕಟ್ಟಬಹುದಾಗಿದೆ.
ಈ ಎಲ್ಲಾ ಬೆಳೆಗಳಿಗೆ ಡಿ.1ರಿಂದ 15ರವರೆಗೆ ವಿಮೆ ಮಾಡಿಸಲು ಅವಕಾಶವಿದೆ. ಹಾಗೆಯೇ ಬೇಸಿಗೆ ಹಂಗಾಮಿನಲ್ಲಿ ನೀರಾವರಿಯಲ್ಲಿ ಬೆಳೆ ಯಲಾದ ರಾಗಿಗೆ 308 ರೂ., ಭತ್ತಕ್ಕೆ 566 ರೂ. ವಿಮಾ ಕಂತನ್ನು ಡಿ.1ರಿಂದ 2024ರ ಫೆ.28ರವರೆಗೆ ಕಟ್ಟಲು ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಎಲ್ಲಾ ರೈತರಿಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಹಿತಿ ಲಭ್ಯವಿದೆ. ವಿಮಾ ಕಂತು ಕಟ್ಟಲು ಗ್ರಾಮ್ 1, ನಾಗರಿಕ ಸೇವಾ ಕೇಂದ್ರ ಹಾಗೂ ಬ್ಯಾಂಕುಗಳಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
– ಸತೀಶ್ ದೇಪುರ