Advertisement
ನಾರಿನಂಶ ಪೂರೈಕೆ ಹೆಚ್ಚಿಸಿಕೊಳ್ಳಲು ಇಡೀ ಧಾನ್ಯ, ಹಣ್ಣು ಮತ್ತು ತರಕಾರಿಗಳನ್ನು ಬಳಸಿ ಇಡೀ ಧಾನ್ಯಗಳು, ಹಣ್ಣು ಮತ್ತು ತರಕಾರಿಗಳು, ಮೊಳಕೆ ಕಾಳುಗಳು, ಬೀನ್ಸ್ ಮತ್ತು ಅಗಸೆ ಬೀಜದಂತಹ ಕೆಲವು ಬೀಜಗಳು ನಾರಿನಂಶದ ಸಮೃದ್ಧ ಮೂಲಗಳಾಗಿವೆ. ಸಜ್ಜೆ ಖೀಚಿx, ಮಿಶ್ರ ತರಕಾರಿ ಸಲಾಡ್, ಚಟ್‌ಪಟಿ ಸೌøಟ್ಸ್ ಫ್ರಾಂಕಿ, ಹೆಸರು ಕಾಳು ಅಥವಾ ಕಡಲೆ ಉಸ್ಲಿ ಮತ್ತು ಮಿಶ್ರ ತರಕಾರಿ ಕ್ಲಿಯರ್ ಸೂಪ್‌ನಂತಹ ತರಹೇವಾರಿ ಅಡುಗೆಗಳಲ್ಲಿ ಇವುಗಳನ್ನು ಉಪಯೋಗಿಸಿ ಸೇವಿಸುವ ಮೂಲಕ ನಾರಿನಂಶವನ್ನು ವೃದ್ಧಿಸಿಕೊಳ್ಳಬಹುದು. ಮಿಶ್ರ ತರಕಾರಿ ಸಬ್ಜಿ ಅಥವಾ ಪಲ್ಯಗಳು ಹೆಚ್ಚು ನಾರಿನಂಶ ಹೊಂದಿದ್ದು, ನಮ್ಮ ಹೊಟ್ಟೆ ಮತ್ತು ಕರುಳಿಗೆ ಉತ್ತಮವಾಗಿರುವುದರಿಂದ ಹೆಚ್ಚು ಉಪಯೋಗಿಸುವುದು ವಿಹಿತ.
ನಾರಿನಂಶ ಸಹಿತ ಆಹಾರ ಕೊಡಿ
ನಿಮ್ಮ ಮಕ್ಕಳಿಗೆ ನಾರಿನಂಶ ಹೆಚ್ಚಿರುವ ತಿಂಡಿ ತಿನಿಸುಗಳನ್ನು ನೀಡುವುದರ ಮೂಲಕ ಅವರು ದೀರ್ಘಕಾಲ ಆರೋಗ್ಯವಂತರಾಗಿ ಇರುವಂತೆ ನೋಡಿಕೊಳ್ಳಿ. ಮಿಶ್ರ ಹಿಟ್ಟಿನ ದೋಸೆ, ದೋಸೆ ಮಾಡಿ ಅದರ ಮೇಲೆ ಮಿಶ್ರ ತರಕಾರಿಯಿಂದ ಅಲಂಕರಿಸುವುದು ಇತ್ಯಾದಿಗಳು ಸಿದ್ಧ – ಸಂಸ್ಕರಿತ ತಿಂಡಿ ತಿನಿಸುಗಳಿಗಿಂತ ಸಾವಿರ ಪಾಲು ಆರೋಗ್ಯಕರ. ನವಣೆಯು ಅತಿ ಹೆಚ್ಚು ನಾರಿನಂಶವನ್ನು ಮತ್ತು ಸಂಕೀರ್ಣ ಪಿಷ್ಠವನ್ನು ಹೊಂದಿರುತ್ತದೆ. ಸಿರಿಧಾನ್ಯ ಉಪ್ಪಿಟ್ಟು ಬೆಳಗಿನ ಉಪಾಹಾರವಾಗಿ ಸೇವಿಸುವುದಕ್ಕೆ ಒಂದು ಉತ್ತಮ ಸಮೃದ್ಧ ನಾರಿನಂಶವುಳ್ಳ ಆಹಾರ. ರವಾದಿಂದ ತಯಾರಿಸಿದ ಉಪ್ಪಿಟ್ಟಿಗಿಂತ ಇದು ಹೆಚ್ಚು ಆರೋಗ್ಯಕರ.
Related Articles
ಹೆಚ್ಚು ಸಲಾಡ್‌ಗಳನ್ನು ಬಳಸಿ – ಅತಿ ಹೆಚ್ಚು ನಾರಿನಂಶ ಗಳಿಸಿ
ನಾರಿನಂಶ, ಪ್ರೊಟೀನ್, ಸಂಕೀರ್ಣ ಪಿಷ್ಠಗಳಿದ್ದು ಆ್ಯಂಟಿ ಓಕ್ಸಿಡೆಂಟ್‌ಗಳು, ಸೂಕ್ಷ್ಮ ಪೋಷಕಾಂಶಗಳು ಮತ್ತು ಕಿಣ್ವಗಳನ್ನು ಒದಗಿಸುವ ಸಲಾಡ್‌ಗಳನ್ನು ಆಯ್ದುಕೊಳ್ಳಿ.
ಒಂದು ಬೌಲ್‌ನಲ್ಲಿ ಮೊಳಕೆ ಬರಿಸಿದ ಇಡೀ ಹೆಸರು ಕಾಳು ಅಥವಾ ಕಡಲೆಯ ಜತೆಗೆ ಸೌತೆಕಾಯಿ, ಟೊಮ್ಯಾಟೊ, ಕ್ಯಾರೆಟ್, ಬೀಟ್‌ರೂಟ್, ನೀರುಳ್ಳಿ, ಕ್ಯಾಬೇಜ್ ತುರಿ, ಜೋಳ ಮತ್ತು ದಾಳಿಂಬೆಯಂತಹ ತರಕಾರಿಗಳನ್ನು ತೆಗೆದುಕೊಳ್ಳಿ. ನಿಂಬೆರಸ, ಕಾಳುಮೆಣಸಿನ ಪುಡಿ ಅಥವಾ ಚಾಟ್‌ಮಸಾಲಾ ಬೆರೆಸಿ ರುಚಿ ಹೆಚ್ಚಿಸಿಕೊಳ್ಳಿ. ಬೇಕಿದ್ದರೆ ಉಪ್ಪು ಹಾಕಿಕೊಳ್ಳಬಹುದು. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಸೇವಿಸಿ.
Advertisement
-ಮುಂದುವರಿಯುವುದು