ಚಿಂಚೋಳಿ: ತಾಲೂಕಿನ ಗಡಿ ಪ್ರದೇಶದ ಕುಂಚಾವರಂ ಗ್ರಾಮದಲ್ಲಿರುವ ಡಾ|ಬಿ. ಆರ್. ಅಂಬೇಡ್ಕರ್ ಆಂಗ್ಲ ಮಾಧ್ಯಮ ವಸತಿ ನಿಲಯದಲ್ಲಿ ಊಟ ಸೇವಿಸಿದ ವಿದ್ಯಾರ್ಥಿಯೋರ್ವನು ವಾಂತಿಭೇ ದಿಯಿಂದ ಅಸ್ವಸ್ಥಗೊಂಡಿದ್ದಾನೆ. ಅಲ್ಲದೇ 15 ವಿದ್ಯಾರ್ಥಿಗಳು ಜ್ವರದಿಂದ ಬಳಲುತ್ತಿರುವುದರಿಂದ ಎಲ್ಲರಿಗೂ ಸೂಕ್ತಚಿಕಿತ್ಸೆ ನೀಡಲಾಗಿದೆ ಎಂದು ಕುಂಚಾವರಂ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ| ಬಾಲಾಜಿ ಪಾಟೀಲ ತಿಳಿಸಿದ್ದಾರೆ.
ಕುಂಚಾವರಂ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಜೇವರ್ಗಿ ತಾಲೂಕಿನ ವಿದ್ಯಾರ್ಥಿಯೋರ್ವನು ಕಳೆದ ಶುಕ್ರವಾರ ರಾತ್ರಿ ವಾಂತಿಭೇದಿ ಕಾಣಿಸಿಕೊಂಡ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ವಿದ್ಯಾರ್ಥಿಯೂ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ. ಆದರೆ ವಸತಿ ನಿಲಯದಲ್ಲಿರುವ ಇನ್ನು 15 ವಿದ್ಯಾರ್ಥಿಗಳು ತೀವ್ರ ಜ್ವರದಿಂದ ಬಳಲುತ್ತಿರುವುದರಿಂದ ಹಾಸ್ಟೆಲ್ ದಲ್ಲಿಯೇ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ತಹಶೀಲ್ದಾರ್, ಸಮಾಜ ಕಲ್ಯಾಣಧಿಕಾರಿ ಭೇಟಿ
ಲೆಗೆ ತಹಶೀಲ್ದಾರ್ ಅಂಜುಮ್ ತಬಸುಮ್ ಮತ್ತು ಸಮಾಜ ಕಲ್ಯಾಣಾಧಿಕಾರಿ ಪ್ರಭುಲಿಂಗ ಬುಳ್ಳ ದಿಢೀರ್ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು. ವಸತಿ ನಿಲಯದ ಮಕ್ಕಳಿಗೆ ಶುದ್ಧ ನೀರು, ಬಿಸಿಯಾದ ಊಟ ಹಾಗೂ ಪಾತ್ರೆ ಮತ್ತು ಅಡುಗೆ ಕೋಣೆಗಳು ಸ್ವತ್ಛತೆ ಕಾಪಾಡಿಕೊಳ್ಳಬೇಕೆಂದು ಅಲ್ಲಿನ ಪ್ರಾಚಾರ್ಯರಿಗೆ ತಿಳಿಸಿದರು.
ಜ್ವರದಿಂದ ಬಳಲುತ್ತಿದ್ದ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ವೈದ್ಯ ಡಾ|ಬಾಲಾಜಿ ಅವರಿಗೆ ಸೂಚಿಸಿದರು. ಗ್ರಾಪಂ ಅಧ್ಯಕ್ಷೆ ಸುಜಾತಾ ಸಂಕಟಿ ಇದ್ದರು. ಕಾಂಗ್ರೆಸ ಮುಖಂಡ ಸುಭಾಷ ರಾಠೊಡ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು. ಬಸವರಾಜ ಮಲಿ, ಶರಣು ಪಾಟೀಲ, ಡಾ|ತುಕಾರಾಮ ಪವಾರ, ಜರ್ನಾಧನ,ವೆಂಕಟರೆಡ್ಡಿ ಕಸ್ತೂರಿ ಇನ್ನಿತರಿದ್ದರು.
ವಸತಿ ನಿಲಯದಲ್ಲಿ ಒಟ್ಟು 230 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಮೂಲಸೌಕರ್ಯ ಗಳಿಲ್ಲದೇ ಇರುವುದರಿಂದ ಕಳೆದ 6ವರ್ಷಗಳಿಂದ ವಿದ್ಯಾರ್ಥಿಗಳ ಇಲ್ಲಿ ನರಕಯಾತನೆ ಅನುಭವಿಸಬೇಕಾಗಿದೆ ಎಂದು ಪೋಷಕರು ದೂರಿದ್ದಾರೆ.