Advertisement

60 ವರ್ಷ ಮೇಲ್ಪಟ್ಟವರಿಗೆ ಅನಾರೋಗ್ಯ ಕಂಡುಬಂದರೆ ಫೀವರ್ ಕ್ಲೀನಿಕ್ ಗೆ ಭೇಟಿ ನೀಡಿ

11:28 AM Jun 12, 2020 | sudhir |

ಬಳ್ಳಾರಿ: 60 ವರ್ಷ ಮೇಲ್ಪಟ್ಟ ವೃದ್ದರು ಜ್ವರ, ನೆಗಡಿ, ಕೆಮ್ಮು ಸೇರಿ ಯಾವುದೇ ಕಾಯಿಲೆ ಕಾಣಿಸಿಕೊಂಡರೂ ನಿರ್ಲಕ್ಷ್ಯ ವಹಿಸದೇ ಕೂಡಲೇ ಫೀವರ್ ಕ್ಲೀನಿಕ್ ಗಳಿಗೆ ಭೇಟಿ ನೀಡಿ ತಪಾಸಣೆಗೆ ಒಳಗಾಗಬೇಕು ಎಂದು ವೈದ್ಯಕೀಯ ಸಚಿವ ಡಾ.ಸುಧಾಕರ್ ಹೇಳಿದರು.

Advertisement

ನಗರದ ವಿಮ್ಸ್ ಗೆ ಶುಕ್ರವಾರ ಭೇಟಿ ನೊಇಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಬೆಂಗಳೂರಿನಲ್ಲಿ ಗುರುವಾರ ಮೂವರು ಮೃತಪಟ್ಟಿದ್ದಾರೆ. ಐಎಲ್ ಐ (ಇನ್ಪ್ಲೂಯಾಂಜಾ ಲೈ ಇನ್ಫೆಕ್ಷನ್) ಲಕ್ಷಣಗಳುಳ್ಳ ಇವರನ್ನು ಎರಡು ದಿನಗಳ ಮುಂಚೆಯೇ ಆಸ್ಪತ್ರೆಗೆ ಕರೆ ತಂದಿದ್ದರೆ ಅವರನ್ನು ಬದುಕಿಸಬಹುದಾಗಿತ್ತು. ಆದರೆ, ಸಾಯುವುದಕ್ಕೆ ಒಂದು ಗಂಟೆ ಮುನ್ನ ಆಸ್ಪತ್ರೆಗೆ ಕರೆತಂದಿದ್ದ ಹಿನ್ನೆಲೆಯಲ್ಲಿ ಅವರನ್ನು ಉಳಿಸಲು ಸಾಧ್ಯವಾಗಿಲ್ಲ. ಹಾಗಾಗಿ 60 ವರ್ಷದ ಮೇಲ್ಪಟ್ಟ ವೃದ್ಧರು, ಗರ್ಭಿಣಿ ಮಹಿಳೆಯರು ಕೆಮ್ಮು, ಜ್ವರ, ನೆಗಡಿ ಕಾಣಿಸಿಕೊಂಡಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸದೆ ಕೂಡಲೇ ಸ್ಥಳೀಯ ಫೀವರ್ ಕ್ಲೀನಿಕ್ ತೆರಳಿ ತಪಾಸಣೆಗೆ ಒಳಪಡಬೇಕು ಎಂದು ಕೋರಿದ್ದಾರೆ.

ಇದೀಗ ಬೇಸಿಗೆ ದಿನಗಳಿಂದ ಮಳೆಗಾಲಕ್ಕೆ ಕಾಲಿಡುತ್ತಿದ್ದೇವೆ. ಮಳೆಗಾಲದಲ್ಲಿ ನೆಗಡಿ, ಜ್ವರ, ಕೆಮ್ಮು ಸಾಮಾನ್ಯವಾಗಿ ಬರುತ್ತವೆ. ಈಗ ಮಳೆಗಾಲ ಆರಂಭವಾಗಿದೆ ಇದರಿಂದ ಸಾಂಕ್ರಾಮಿಕ ರೋಗಗಳು ಹೆಚ್ವಲಿವೆ. ಹಾಗಾಗಿ ಜನತೆ ಸಣ್ಣದಾದ ಜ್ವರವನ್ನು ನಿರ್ಲಕ್ಷಿಸದೆ ತಪಾಸಣೆಗೆ ಒಳಗಾಗಬೇಕು.

ಈಗ ಕೋವಿಡ್ ಸೋಂಕಿತರಲ್ಲಿ ಶೇ 97 ರಷ್ಟು ಜನರಲ್ಲಿ ಸೋಂಕು ಲಕ್ಷಣ ಇಲ್ಲ ಎಂದ ಅವರು. ನಾವು ಐಎಲ್ ಎ (ಇತರೇ ಕಾಯಿಲೆಗಳಿಂದ ಸೋಂಕಿಗೆ ಒಳಗಾದವರು) ಇರುವ ರೋಗಿಗಳನ್ನು ರಕ್ಷಿಸಿಕೊಳ್ಳಬೇಕಿದೆ ಎಂದರು.

ತಜ್ಞರ ಒಂದು ಅಂದಾಜಿನ‌ ಪ್ರಕಾರ ಬರುವ ಆಗಷ್ಟ್ ವೇಳೆಗೆ ನಮ್ಮ ರಾಜ್ಯದಲ್ಲಿಯೂ 2 ಲಕ್ಷಕ್ಕೂ ಹೆಚ್ವು ಜನರಲ್ಲಿ ಕೋವಿಡ್ ಸೋಂಕು‌ ಕಾಣಿಸುವ ಸಾಧ್ಯತೆ ಇದೆ ಎಂದಿದ್ದಾರೆ. ಅದಕ್ಕಾಗಿ‌ನಾವು ಈಗಿನಿಂದಲೇ ಅದಕ್ಕೆ ತಕ್ಕಂತೆ ಸಿದ್ದತೆ, ವ್ಯವಸ್ಥೆ ‌ಮಾಡಿಕೊಳ್ಳುತ್ತಿದೆಂದು ತಿಳಿಸಿದರು.

Advertisement

ಈ ಸಂದರ್ಭದಲ್ಲಿ ಸಚಿವ ಆನಂದ್ ಸಿಂಗ್ ಶಾಸಕ‌ ಜಿ.ಸೋಮಶೇಖರ ರೆಡ್ಡಿ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ವಿಮ್ಸ್ ನಿರ್ದೇಶಕ ಡಾ. ದೇವಾನಂದ್, ಪ್ರಾಂಶುಪಾಲ ಡಾ. ಕೃಷ್ಣಸ್ವಾಮಿ, ಡಾ ಅರುಣಾ ಕಾಮಿನೇನಿ, ಡಾ. ಮರಿರಾಜ್, ಡಾ.ಕೃಷ್ಣ, ಡಾ. ರವಿ ಭೀಮಪ್ಪ‌ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next