1. ಯೋಗ್ಯ ಮಾಯಿಶ್ಚರೈಸರ್: ಮುಖ ಡಲ್ ಕಾಣಿಸುತ್ತಿದೆ ಅಂದ ಕೂಡಲೆ ಹೆಚ್ಚಿನವರು ಗಾಢ ಮೇಕಪ್ ಮೊರೆ ಹೋಗುತ್ತಾರೆ. ಆಗ ಮಾಯಿಶ್ಚರೈಸರ್ ಬಳಸುವುದನ್ನು ನಿರ್ಲಕ್ಷಿಸುತ್ತಾರೆ. ಅದು ತಪ್ಪು. ಸರಿಯಾದ ಮಾಯಿಶ್ವರೈಸರ್ ಬಳಸಿದ್ರೆ ಚರ್ಮದ ತೇವ, ಕಾಂತಿ ಹೆಚ್ಚುತ್ತದೆ.
2. ಮುಖದ ತೇವ ಕಾಪಾಡಿ: ಆರೋಗ್ಯ ಹದಗೆಟ್ಟಾಗ ಸಾಮಾನ್ಯವಾಗಿ ಚರ್ಮದ ಕಾಳಜಿಯನ್ನು ಕಡೆಗಣಿಸುತ್ತೇವೆ. ಮುಖ ತೊಳೆಯದೆ, ಕ್ರೀಂ ಹಚ್ಚದೇ ಇರೋದ್ರಿಂದ ಚರ್ಮ ಒಣಗುತ್ತದೆ. ಹಾಗಾಗಿ ಏನೇ ಆದರೂ ದಿನಕ್ಕೆರಡು ಬಾರಿ ಮುಖ ತೊಳೆಯುವ ಅಭ್ಯಾಸ ಬಿಡದಿರಿ.
3.ಬಿಸಿ ನೀರ ಶಾಖ: ಮುಖಕ್ಕೆ ಬಿಸಿನೀರಿನ ಶಾಖ ಕೊಡುವುದರಿಂದ ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ. ಜ್ವರ, ನೆಗಡಿಯ ಅಥವಾ ನೀವು ತೆಗೆದುಕೊಂಡ ಮಾತ್ರೆಯ ಕಾರಣದಿಂದ ಮುಖ ಕೆಂಪಾಗಿದ್ದರೆ, ಬಿಸಿನೀರಿನ ಶಾಖ ನೀಡಿ ಆಹ್ಲಾದ ಪಡೆಯಬಹುದು.
4. ಕಪ್ಪುಗಟ್ಟಿದ ಕಣ್ಣ ಮೇಲೆ ಟೀ ಬ್ಯಾಗ್: ಜ್ವರ ಬಂದಾಗ ಕೆಲವರಿಗೆ ನಿದ್ದೆ ಸರಿಯಾಗಿ ಬಾರದೇ, ಕಣ್ಣಿನ ಸುತ್ತ ಕಪ್ಪುವರ್ತುಲ ಮೂಡುತ್ತದೆ. ಅದರಿಂದ ಪಾರಾಗಲು, ಟೀ ಬ್ಯಾಗ್ ಅನ್ನು ತೇವ ಮಾಡಿ 15-20 ನಿಮಿಷ ಕಣ್ಣಿನ ಮೇಲಿಟ್ಟುಕೊಳ್ಳಿ. ಅದೇ ರೀತಿ ಸೌತೆಕಾಯಿಯನ್ನು ತೆಳ್ಳಗೆ ಸ್ಲೆ„ಸ್ ಮಾಡಿ ಕಣ್ಣಿನ ಮೇಲಿಟ್ಟರೂ ಒಳ್ಳೆಯದು.
5. ಕಣ್ಣಿಗೆ ಪ್ರಾಮುಖ್ಯ ನೀಡಿ: ಮುಖದ ಸೌಂದರ್ಯಕ್ಕೆ ಕಣ್ಣು ಕಲಶವಿಟ್ಟಂತೆ. ಆರೋಗ್ಯ ಹದಗೆಟ್ಟಾಗ ಕಣ್ಣು ಕೆಂಪಾಗಿ, ಕಿರಿದಾಗಿ ಕಾಣುವುದು ಸಹಜ. ಆಗ ಸೂಕ್ತ ಕಾಡಿಗೆಯನ್ನು ಬಳಸಿ, ಕಣ್ಣು ಆಕರ್ಷಕವಾಗಿ ಕಾಣುವಂತೆ ಮಾಡಿ. ವಾಟರ್‌ಪ್ರೂಫ್ ಮಸ್ಕರಾ ಬಳಸುವುದು ಉತ್ತಮ.
6. ಜಾಸ್ತಿ ನೀರು ಕುಡಿಯಿರಿ: ಜ್ವರ ಬಂದಾಗ, ಅದರಲ್ಲೂ ವೈರಲ್ ಅಟ್ಯಾಕ್‌ನಿಂದ ಜ್ವರ ಬಂದಾಗ ದೇಹ ಹೆಚ್ಚು ನೀರನ್ನು ಅಪೇಕ್ಷಿಸುತ್ತದೆ. ಜಾಸ್ತಿ ನೀರು ಕುಡಿಯುವುದರಿಂದ ಚರ್ಮವೂ ಕಾಂತಿ ಪಡೆಯುತ್ತದೆ.
7. ತುಟಿಯ ಬಗ್ಗೆ ಗಮನ ಕೊಡಿ: ಜ್ವರ, ನೆಗಡಿ ಆದಾಗ ಮೂಗು ಕಟ್ಟಿಕೊಂಡು ಬಾಯಿಯ ಮೂಲಕ ಉಸಿರಾಡುವುದು ಅನಿವಾರ್ಯ. ಆಗ ತುಟಿಯ ಚರ್ಮ ಒಣಗಿ ಬಿರುಕು ಬಿಡುತ್ತದೆ. ಚರ್ಮಕ್ಕೆ ಮೃದುತ್ವ ನೀಡುವಂಥ ಲಿಪ್‌ಬಾಮ್‌ಗಳನ್ನು ಬಳಸಿ.