Advertisement

ಜಿಲ್ಲಾದ್ಯಂತ ಸಂಭ್ರಮದ ಕಾರಹುಣ್ಣಿಮೆ

01:07 PM Jun 17, 2019 | Suhan S |

ಮಹಾಲಿಂಗಪುರ: ಉತ್ತರ ಕರ್ನಾಟಕ ಗ್ರಾಮೀಣ ಭಾಗದ ಸಂಭ್ರಮದ ಹಬ್ಬ ಕಾರಹುಣ್ಣಿಮೆ ನಿಮಿತ್ತ ಎತ್ತುಗಳ ಕರಿ ಹರಿಯುವ ಕಾರ್ಯಕ್ರಮ ರವಿವಾರ ಸಂಜೆ ಸಂಭ್ರಮದಿಂದ ನಡೆಯಿತು. ಮಹಾಲಿಂಗೇಶ್ವರ ಗುಡಿಯ ಹತ್ತಿರ ಕರಿ ಹರಿಯುವ ಎತ್ತುಗಳ ಕೊಡುಗಳಿಗೆ ಕೊಡುಬಳೆ ಹಾಕಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಪೂಜೆ ಸಲ್ಲಿಸಿದರು.

Advertisement

• ಎತ್ತುಗಳ ಕರಿ ಹರಿಯುವ ಕಾರ್ಯಕ್ರಮ

• ಮಣ್ಣಿನ ಎತ್ತುಗಳಿಗೆ ಮಹಿಳೆಯರಿಂದ ಪೂಜೆ

• ಗ್ರಾಮಗಳಲ್ಲಿ ಎತ್ತುಗಳ ಸಿಂಗರಿಸಿ ಮೆರವಣಿಗೆ

ನಂತರ ಎತ್ತುಗಳನ್ನು ಜೋಡು ರಸ್ತೆಯಿಂದ ಮಹಾಲಿಂಗೇಶ್ವರ ಗುಡಿಯವರೆಗೆ ಓಡಿಸಲಾಯಿತು. ಓಟದಲ್ಲಿ ಸಂಪ್ರದಾಯದಂತೆ ಗೌಡರ ಎತ್ತು ಪ್ರಥಮ ಸ್ಥಾನ ಗಳಿಸಿತು. ಬಸವರಾಜ ಘಂಟಿ, ಸಂಜು ಪವಾರ, ಮಹಾಲಿಂಗ ಪಾಟೀಲ ಗೌಡರ ಎತ್ತಿನ ಜೊತೆ ಓಡಿ ಪ್ರಥಮ ಸ್ಥಾನ ಗಳಿಸುವಲ್ಲಿ ಸಾಹಸ ಮೆರೆದರು.

Advertisement

ಕರಿ ಹರಿಯುವ ಸಂಭ್ರಮದಲ್ಲಿ ಪಟ್ಟಣದ ಹಿರಿಯರಾದ ಯಲ್ಲನಗೌಡ ಪಾಟೀಲ, ವಿಜುಗೌಡ ಪಾಟೀಲ, ಕೃಷ್ಣಗೌಡ ಪಾಟೀಲ, ಮಹಾಲಿಂಗಪ್ಪ ಜಕ್ಕನ್ನವರ, ಮಹಾಲಿಂಗಪ್ಪ ಕೋಳಿಗುಡ್ಡ, ರವಿಗೌಡ ಪಾಟೀಲ, ಶ್ರೀಶೈಲ ಮೇಟಿ, ಗಂಗಪ್ಪ ಮೇಟಿ, ನಿಂಗಪ್ಪ ಬಾಳಿಕಾಯಿ, ಜಯಪ್ಪ ಘಟ್ನಟ್ಟಿ, ಅನಿಲ ದೇಸಾಯಿ, ಕರೆಪ್ಪ ಮೇಟಿ, ವಿಠuಲ ಕುಳಲಿ, ನಿಂಗನಗೌಡ ಪಾಟೀಲ, ಶಿವಾನಂದ ಮೇಟಿ, ಹೊಳೆಪ್ಪ ಬಾಡಗಿ, ಕೃಷ್ಣಪ್ಪ ನರಗಟ್ಟಿ ಇದ್ದರು. ಗೌಡರ ಎತ್ತು ಪ್ರಥಮ ಬಂದರೆ ಮುಂಗಾರು, ಮೇಟಿಯವರ ಎತ್ತು ಪ್ರಥಮ ಬಂದರೆ ಹಿಂಗಾರು ಫಸಲು ಸಮೃದ್ಧಿಯಾಗಿ ಬರುತ್ತದೆ ಎಂಬ ನಂಬಿಕೆಯಿದೆ. ಕರಿ ಹರಿಯುವ ಸಂದರ್ಭದಲ್ಲಿ ಮಳೆಯಾಗಿ ಎತ್ತುಗಳ ಕೊಂಬು ತೊಯ್ದರೆ, ಮುಂದಿನ ಮಳೆಗಳ ಪ್ರಮಾಣ ಕಡಿಮೆಯಾಗುತ್ತದೆ ಎಂಬ ನಂಬಿಕೆ ರೈತ ಸಮುದಾಯದಲ್ಲಿದೆ.

ಮಣ್ಣೆತ್ತಿನ ಪೂಜೆ: ಕಾರಹುಣ್ಣಿಮೆ ನಿಮಿತ್ತ ಮಣ್ಣಿನ ಎತ್ತುಗಳನ್ನು ಕೊಂಡುಕೊಂಡು ಮಹಿಳೆಯರು ಪೂಜೆ ಸಲ್ಲಿಸಿದರು. ಮಣ್ಣೆತ್ತಿನ ಬಸವಣ್ಣನ ನೈವೇದ್ಯಕ್ಕೆ ಅಡಿಕೆ ಹಾಕಿ ಅನ್ನವನ್ನು ತಯಾರಿಸುವ ಸಂಪ್ರದಾಯ ರೂಢಿಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next