ಉಡುಪಿ: ಜಿಲ್ಲಾಡಳಿತದ ನೇತೃತ್ವ, ನಗರಾಭಿವೃದ್ಧಿ ಪ್ರಾಧಿಕಾರದ ಸಹಕಾರದಲ್ಲಿ ನಡೆಯುವ ಜಿಲ್ಲಾ ಮಟ್ಟದ ರಾಜ್ಯೋತ್ಸವವನ್ನು ಸೋಮವಾರ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ.
ಅಜ್ಜರಕಾಡಿನ ಕ್ರೀಡಾಂಗಣದಲ್ಲಿ ಹಬ್ಬದ ವಾತಾವರಣ, ಸಾಂಸ್ಕೃತಿಕ ಸ್ಪರ್ಶವನ್ನು ನೀಡಲಾಗಿದೆ.
ವೇದಿಕೆ, ಬರುವ ದಾರಿ, ಶಾಮಿಯಾನ ಪ್ರದೇಶವನ್ನು ಕನ್ನಡದ ಧ್ವಜದ ಬಣ್ಣದಲ್ಲಿಯೇ ಬಟ್ಟೆಗಳಿಂದ ಅಲಂಕರಿಸಲಾಗಿದೆ. ಕನ್ನಡಾಂಬೆಯ ಚಿತ್ರ ಇರಿಸುವ ಆಚೀಚೆ ಅಷ್ಟದಿಗ್ಗಜ ಜ್ಞಾನಪೀಠ ಪುರಸ್ಕೃತರಾದ ಡಾ| ಶಿವರಾಮ ಕಾರಂತ, ದ.ರಾ. ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ.ಗೋಕಾಕ್, ಕುವೆಂಪು, ಡಾ| ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಡಾ| ಚಂದ್ರಶೇಖರ ಕಂಬಾರರ ಭಾವಚಿತ್ರ ಇರಿಸಲಾಗಿದೆ. ಹಿಂದಿ ಭಾಷೆಯ ಬಳಿಕ ಅತಿ ಹೆಚ್ಚು ಜ್ಞಾನಪೀಠ ಪುರಸ್ಕೃತರು ಕನ್ನಡ ಭಾಷೆಯ ಸಾಹಿತಿಗಳು ಎನ್ನುವ ಸಂದೇಶ ಸಾರಲು ಈ ಕ್ರಮ ವಹಿಸಲಾಗಿದೆ.
ಇದನ್ನೂ ಓದಿ:ಭಾರತದಲ್ಲಿ ಪ್ರತಿದಿನ ಸರಾಸರಿ 31 ಮಕ್ಕಳು ಆತ್ಮಹತ್ಯೆ! 2020ರ ಮಾಹಿತಿ ಹೊರ ಹಾಕಿದ ಕೇಂದ್ರ
ಕೋವಿಡ್ ಸೋಂಕಿನ ಕಾರಣ
ಎರಡು ವರ್ಷಗಳಿಂದ ಸಂಭ್ರಮವಿರಲಿಲ್ಲ. ಸೋಮವಾರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಹಾಲ್‌ನ್ನು ಮದುವಣಗಿತ್ತಿಯಂತೆ ಅಲಂಕರಿಸಲಾಗಿದೆ.
ಶಾಸಕ ಕೆ. ರಘುಪತಿ ಭಟ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಜಿ.ಪಂ. ಸಿಇಒ ಡಾ| ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮೊದಲಾದವರು ಸಿದ್ಧತೆಯನ್ನು ಪರಿಶೀಲಿ ಸಿದ್ದು ಸೋಮವಾರ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ಕುಮಾರ್ ರಾಜ್ಯೋತ್ಸವ ಸಂದೇಶವನ್ನು ನೀಡಲಿದಾರೆ.