Advertisement

ಹಬ್ಬಗಳು ದೇಹ-ಮನಸ್ಸನ್ನು ಪವಿತ್ರಗೊಳಿಸುವ ಸಾಧಕಗಳು

12:00 PM Jun 27, 2017 | |

ಧಾರವಾಡ: ಪವಿತ್ರ ರಂಜಾನ್‌ ಹಬ್ಬದ ಅಂಗವಾಗಿ ನಗರದ ಗುಲಗಂಜಿಕೊಪ್ಪದ ಈದ್ಗಾ ಮೈದಾನದಲ್ಲಿ ಸೋಮವಾರ ಸಾವಿರಾರು ಮುಸ್ಲಿಂ ಬಾಂಧವರು ಶ್ರದ್ಧಾ-ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬೆಳಗ್ಗೆ 10:30ಗಂಟೆಗೆ ಈದ್ಗಾ ಮೈದಾನದಲ್ಲಿ ಮೌಲಾನಾ ರಫೀಕ ಅಹ್ಮದ ಖತೀಬ ಹಾಗೂ ವಾಸೀಮ್‌ ಖತೀಬ್‌ ಪ್ರಾರ್ಥನೆ ಬೋಧಿಸಿದರು.

Advertisement

ಈ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಜನರು ಅಲ್ಲಾಹನನ್ನು ಸ್ಮರಿಸಿದರು. ಬಳಿಕ ಪರಸ್ಪರ ರಂಜಾನ್‌ ಶುಭಾಶಯ ವಿನಿಮಯ ಮಾಡಿಕೊಂಡರು. ಅಪಾರ ಸಂಖ್ಯೆ ಹಿರಿಯರು ಮತ್ತು ನೂರಾರು ಮಕ್ಕಳು ರಂಜಾನ್‌ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಗಮನ ಸೆಳೆದರು.

ಪ್ರಾರ್ಥನೆ ಮುಗಿದ ಬಳಿಕ ಇದೇ ವೇಳೆ ಬಡವರು, ನಿರ್ಗತಿಕರಿಗೆ ನಗದು, ಧವಸ, ವಸ್ತ್ರ ಮತ್ತಿತರ ಸಾಮಗ್ರಿಗಳನ್ನು ನೀಡಿ ರಂಜಾನ್‌ ಮಹತ್ವ ಸಾರಿದರು. ಈ ಪ್ರಾರ್ಥನಾ ಸಭೆಯಲ್ಲಿ ಮಾತನಾಡಿದ ಅಂಜುಮನ್‌ ಇಸ್ಲಾ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್‌ ತಮಟಗಾರ, ಹಬ್ಬಗಳು ಶರೀರ ಹಾಗೂ ಮನಸು ಪವಿತ್ರಗೊಳಿಸುವ ಸಾಧಕಗಳು.

ಉಪವಾಸ ವೃತದಿಂದ ಮನುಷ್ಯ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯವಿದೆ ಎಂದರು. ಯು.ಕೆ.ಜಿ ಯಿಂದ ಪಿಜಿವರೆಗೆ ನಮ್ಮ ಸಂಸ್ಥೆಯಲ್ಲಿ ಶಿಕ್ಷಣದ ವ್ಯವಸ್ಥೆ ಇದ್ದು, ಹತ್ತನೇ ಮತ್ತು ಹನ್ನೇರಡನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠ ಮಾಡಲಾಗುತ್ತದೆ.

ಶೇ.80ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಜ್ಯೂನಿಯರ್‌ ಕಾಲೇಜಿನಲ್ಲಿ ಉಚಿತ ಪ್ರವೇಶ ಕೈಗೊಳ್ಳಲಾಗಿದೆ. ಬಿಬಿಎ ಡಿಗ್ರಿ, ಎಂಎ, ಎಂಕಾಂ, 5 ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಅವಕಾಶ ಮಾಡಿ ಕೊಡಲಾಗಿದೆ ಎಂದರು. ಎ.ಎಂ. ಪಠಾಣ ಅವರು ಉಚಿತವಾಗಿ ಸಂಸ್ಥೆಗೆ ದಾನವಾಗಿ ನೀಡಿದ ಜಾಗದಲ್ಲಿ ಹೆಣ್ಣು ಮಕ್ಕಳ ವಸತಿ ನಿಲಯ ಕಾರ್ಯ ಭರದಿಂದ ಸಾಗಿದೆ. 

Advertisement

ಕರ್ನಾಟಕ ವಕ್ಫ್ ಬೋರ್ಡ್‌ನಿಂದ ಸಂಸ್ಥೆಗೆ 20 ಲಕ್ಷ ರೂ. ಮಂಜೂರಾಗಿದೆ. 15 ಜನ ಅನಾಥರಿಗೆ ಶಾದಿ ಮಹಲ್‌ನ್ನು ಉಚಿತವಾಗಿ ಈ ವರ್ಷ ನೀಡಲಾಗಿದೆ. ಕರ್ನಾಟಕ ಸರ್ಕಾರದಿಂದ ಕಟ್ಟಡಕ್ಕೆ 1 ಕೋಟಿ ರೂ. ಮಂಜೂರಾಗಿದ್ದು. ಅದರಲ್ಲಿ ಮೊದಲನೇ ಹಂತವಾಗಿ 25 ಲಕ್ಷ ಬಂದಿದೆ. ಶವ ವಾಹನ ಉಚಿತವಾಗಿ ಸಮಾಜ ಬಾಂಧವರಿಗೆ ಕೊಡಲಾಗುತ್ತಿದೆ ಎಂದರು. 

ಪ್ರಿಯಾದತ್ತ ಫೌಂಡೇಶನ್‌ನಿಂದ ರಸ್ತೆ ಬದಿಯ ಬಡ ವ್ಯಾಪಾರಸ್ಥರಿಗೆ ಉಚಿತವಾಗಿ 300 ಸೋಲಾರ್‌ ಲೈಟ್‌ಗಳನ್ನು ನೀಡಲಾಗಿದೆ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಸ್ಥೆಗೆ 25 ಎಕರೆ ಭೂಮಿ ನೀಡುವ ಭರವಸೆ ನೀಡಿದ್ದಾರೆ. ಕೌಶಲ ಅಭಿವೃದ್ಧಿ ಅಡಿಯಲ್ಲಿ 360 ವೃತ್ತಿ ನಿರತ ಕೋರ್ಸ್‌ ಗಳಿಗೆ ಅಂಜುಮನ್‌ ಸಂಸ್ಥೆಯಿಂದ ನೂರಾರು ವಿದ್ಯಾವಂತರಿಗೆ ನೋಂದಣಿ ಮೂಲಕ ಕಳುಹಿಸಿ ಕೊಡಲಾಗಿದೆ ಎಂದರು.

ಅಂಜುಮನ್‌ ಇಸ್ಲಾಂ ಸಂಸ್ಥೆಯ ಉಪಾಧ್ಯಕ್ಷ ಅಲ್‌ಹಜ್‌ ಅಜೀಜ ದಾಸನಕೊಪ್ಪ, ಕಾರ್ಯದರ್ಶಿ ನಜೀರ್‌ ಮನಿಯಾರ, ಸಹ ಕಾರ್ಯದರ್ಶಿ ರಫೀಖ ಅಹ್ಮದ್‌ ಶಿರಹಟ್ಟಿ, ಮೊಹಮದ್‌ ಗೌಸ್‌ ಮಕಾನದಾರ, ಉಸ್ಮಾನಸಾಬ ಬಿಜಾಪುರ, ಶಫೀ ಕಳ್ಳಿಮನಿ, ಹನೀಫ ಮುನವಳ್ಳಿ, ಮುಕ್ತಿಯಾರ್‌ ಪಠಣ, ರಫೀಕ ಬಿಸ್ತಿ, ಎಂ. ಎಂ. ಬೇಪಾರಿ, ಮಹ್ಮದಸಾಬ ಹಂಚಿನಮನಿ, ಹೋಟೆಲ್‌ ಬಾದಷಾ ದರ್ಗಾದ ಶಮಶುದ್ದೀನ್‌ ಮುಜಾವರ, ಇಮಿ¤àಯಾಜ ಮುಲ್ಲಾ, ರಾಜು ಅಂಬೋರೆ, ಕಾಜೀಮ್‌ ಅಲಿ ಖತೀಬ್‌ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next