Advertisement
ಭಾರತೀಯ ಖಗೋಲ ಶಾಸ್ತ್ರವು ಪ್ರಪಂಚದಲ್ಲೇ ಅತೀ ಪುರಾತನ ಮತ್ತು ವೈಶಿಷ್ಟ್ಯ ಪೂರ್ಣವೆನಿಸಿದ್ದು “ವಿಶ್ವ ಮಾರ್ಗದರ್ಶಿ’ ಎಂದು ಉಲ್ಲೇಖಿಸಲ್ಪಟ್ಟಿದೆ. ಖಗೋಲ ಶಾಸ್ತ್ರದಲ್ಲಿ ವಿಶ್ವಚಕ್ಷುವಾದ ಸೂರ್ಯನ ಪಥವನ್ನು ಕ್ರಾಂತಿ ವೃತ್ತ ಎಂದು ಸ್ಪಷ್ಟಗೊಳಿಸಿ ಈ ಕ್ರಾಂತಿ ವೃತ್ತವನ್ನು ಹನ್ನೆರಡು ಸಮಭಾಗಗಳಾಗಿ ವಿಭಜಿಸಿ ದ್ವಾದಶ ರಾಶಿ ನಾಮದಿಂದ ಕರೆಯುತ್ತಾರೆ. ಒಂದೊಂದು ರಾಶಿಗೂ 30 ಡಿಗ್ರಿಯ ಪ್ರಮಾಣ ವನ್ನೂ ನಿಗದಿಗೊಳಿಸಿ 12 ರಾಶಿಗಳಿಗೆ ಒಟ್ಟು 360 ಡಿಗ್ರಿ ಪ್ರಮಾಣವನ್ನು ನಿರೂಪಿಸಲಾಗಿದೆ.
Related Articles
Advertisement
ಇನ್ನು ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆಯಲ್ಪಡುತ್ತದೆ. ಈ ಕಾಲದಲ್ಲಿ ತೀರಿಕೊಂಡರೆ ಮೋಕ್ಷ ಪ್ರಾಪ್ತಿ, ಸ್ವರ್ಗ ಪ್ರಾಪ್ತಿ ಎಂಬ ನಂಬಿಕೆಇದೆ.
ಉತ್ತರ ಕರ್ನಾಟಕದ ಕೆಲವೆಡೆ ಗೋವು ಮತ್ತು ರಾಸುಗಳನ್ನು ವಿಶೇಷ ವಸ್ತ್ರಾಭರಣಗಳಿಂದ ಶೃಂಗರಿಸಿ ಮೃಷ್ಟಾನ್ನಗಳನ್ನು ನೀಡಿ ಪೂಜಿಸಲಾ ಗುತ್ತದೆ. ರಾಸುಗಳ ಒಂದೊಂದು ಕೊಂಬನ್ನು ಒಂದೊಂದು ಆಯನಗಳೆಂದು ಪರಿಗಣಿಸಿ ಪೂಜಿ ಸುವ ಪದ್ಧತಿಯೂ ಇದೆ. ಕೆಂಡದ ರಾಶಿಯ ಮೇಲೆ ಜಾನುವಾರುಗಳನ್ನು ಹಾಯಿಸುವ ಪದ್ಧತಿ ಯೂ ಇದೆ. ಕೆಲವೆಡೆ ಗೂಳಿ ಕಾಳಗವೂ ಇದೆ.
ಹಲವೆಡೆ ಸುಗ್ಗಿಯ ಹಬ್ಬ. ಆಂಧ್ರಪ್ರದೇಶದಲ್ಲಿ ಶ್ರೀರಾಮನು ರಾವಣನನ್ನು ಕೊಂದು ಸೀತೆಯನ್ನು ಸ್ವೀಕರಿಸಿ ಕರೆತಂದ ದಿನವೆಂದು ಮನೆಯ ಮುಂದೆ ಬೆಂಕಿಯನ್ನು ಹಾಕಿ “ರಾವಣದಹನ’ವನ್ನು ಆಚರಿಸುತ್ತಾರೆ. ತಮಿಳುನಾಡಿನಲ್ಲಿ “ಪೊಂಗಲ್’ ಎಂದೇ ಪ್ರಸಿದ್ಧಿ. ಉತ್ತರ ಭಾರತದಲ್ಲಿ ಗಾಳಿಪಟ ಉತ್ಸವಗಳಿರುತ್ತವೆ. ಪ್ರಯಾಗದಲ್ಲಿ ಈ ವೇಳೆಗೆ ಸುಪ್ರಸಿದ್ಧ ಕುಂಭಮೇಳ ಸಂಪನ್ನಗೊಳ್ಳುತ್ತದೆ.
ತುಳುನಾಡಿನ ದೈವಾರಾಧನೆ ಪದ್ಧತಿಯಲ್ಲೂ ಅಗೆಲು ಸೇವೆ, ಆಯನ ಬಲಿ, ದರ್ಶನ ಸೇವೆಗಳು ನಡೆಯುತ್ತವೆ. ಮನೆ-ಮನೆಗಳಿಗೆ ಹೋಗಿ ಎಳ್ಳು- ಬೆಲ್ಲ ನೀಡುವ ಸಂಪ್ರದಾಯವಿದೆ. ಹಬ್ಬ ಸುಖ, ಸಮೃದ್ಧಿಯ ಜತೆ ನಮ್ಮ ನಕಾರಾತ್ಮಕ ಭಾವ ದೂರವಾಗಿ ಧನಾತ್ಮಕ ಭಾವ ಉದ್ದೀಪನಗೊಳ್ಳಲಿ ಎಂಬುದೇ ಈ ಎಳ್ಳು- ಬೆಲ್ಲ ವಿನಿಮಯದ ಸಂದೇಶ. ಶ್ರೀ ಸೂರ್ಯನಾರಾಯಣ ಸಮಸ್ತ ಜೀವಿಗಳ ಬದುಕಿಗೆ ಆಧಾರ. ಶ್ರೀ ಸೂರ್ಯ ದೇವ ರನ್ನು ಭಕ್ತಿ ಶ್ರದ್ಧೆಯಿಂದ ಪೂಜಿ ಸಿ, ಅವನ ಆನುಗ್ರಹಕ್ಕೆ ಎಲ್ಲರೂ ಪಾತ್ರರಾಗೋಣ.
-ಮೋಹನದಾಸ, ಸುರತ್ಕಲ್