Advertisement

ಪಾರ್ವತಾಂಬ ಜಾತ್ರೆಗೆ ಬಂಡಿ ಜತೆ ಬಂದ ಭಕರು

12:41 PM Nov 24, 2021 | Team Udayavani |

ಗುಂಡ್ಲುಪೇಟೆ: ತಾಲೂಕಿನ ಹಸಗೂಲಿ ಗ್ರಾಮದಲ್ಲಿ ಪಾರ್ವತಾಂಬ ಜಾತ್ರಾ ಮಹೋ ತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಹಸಗೂಲಿ ಗ್ರಾಮದಿಂದ ಸೋಮವಾರ ಮಧ್ಯಾಹ್ನ ಪಾರ್ವತಾಂಬ ದೇವಿಯ ವಿಗ್ರಹವನ್ನು ಕಸಗಲಪುರ ಕಾಡಿನಲ್ಲಿ ನೆಲೆಸಿರುವ ಮೂಲ ಸ್ಥಳಕ್ಕೆ ಕೊಂಡೊಯ್ಯಲಾಯಿತು.

Advertisement

ಸಾವಿರಾರು ಭಕ್ತರು, ಗ್ರಾಮಸ್ಥರು ಸೊಮವಾರ ದೇವರನ್ನು ಗ್ರಾಮದಿಂದ ಬೀಳ್ಕೊಟ್ಟರು. ಮರುದಿನ ಮಂಗಳವಾರ ಬೆಳಗ್ಗೆ ಆಲತ್ತೂರು, ಶೆಟ್ಟಹಳ್ಳಿ ಮೂಲಕ ದೇವರನ್ನು ಹೊತ್ತು ತಂದು ನಂತರ ಪಾರ್ವತಾಂಬ ಮಾರಮ್ಮ ತಾಯಿ ಯನ್ನು ಸಿಂಗರಿಸಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ರಥೋತ್ಸವವನ್ನು ಭಕ್ತರು ಉತ್ಸಾಹದಿಂದ ಎಳೆದು ಧನ್ಯತಾಭಾವ ಮೆರೆದರು.

ಎತ್ತಿನಗಾಡಿಗಳಲ್ಲಿ ಆಗಮಿಸಿದ ಭಕ್ತರು: ಪಾರ್ವತಾಂಬ ಜಾತ್ರೆಗೆ ಸೋಮವಾರ ರಾತ್ರಿಯೇ ಜಾನುವಾರುಗಳು ಹಾಗೂ ನೂರಾರು ಎತ್ತಿನಗಾಡಿಯಲ್ಲಿ ಆಗಮಿಸಿದ್ದವು. ಮಂಗಳವಾರ ಸಹ ಸಾವಿರಾರು ಜಾನುವಾರು ಹಾಗು ಎತ್ತಿನಗಾಡಿಯಲ್ಲಿ ಜನರು ಬಂದಿದ್ದರು. ತಾಲೂಕು ಹಾಗು ಅಕ್ಕಪಕ್ಕದ ತಾಲೂಕಿನಿಂದ ಭಕ್ತಾದಿಗಳು ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿದರು.

ಜಾತ್ರಾ ಮಹೋತ್ಸವಕ್ಕೆ ಎತ್ತಿನ ಗಾಡಿಯಲ್ಲಿ ಮನೆ-ಮಂದಿ ಕುಳಿತು ಜಾತ್ರೆಗೆ ಆಗಮಿಸಿ ದ್ದರು. ಸೋಮವಾರ ರಾತ್ರಿಯೇ ನೂರಾರು ಎತ್ತಿನ ಗಾಡಿಗಳು ಜಾತ್ರಾ ಮಾಳದಲ್ಲಿ ಜಮಾಯಿಸಿದ್ದವು. ಜಾತ್ರೆಗೆ ಜಾನುವಾರುಗಳನ್ನು ಕರೆತಂದು ದೇವಿಯ ಪೂಜೆ ಮಾಡಿಸಿದರೆ ಕಾಯಿಲೆ ಬರಲ್ಲ ಎಂಬ ನಂಬಿಕೆ ಇದೆ.

ಹೀಗಾಗಿ ಜಾತ್ರೆಗೆ ಜಾನುವಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಪ್ರಮುಖ ಕಾರಣವಾಗಿದೆ. ಹರಕೆ ಹೊತ್ತವರು ಜಾತ್ರಾ ಮಾಳದಲ್ಲಿ ಬಾಯಿ ಬೀಗ ಹಾಕಿಸಿಕೊಂಡು ಭಕ್ತಿ ಮೆರೆ ದರು. ಜಾತ್ರೆಗೆ ಆಗಮಿಸಿದ್ದ ಸಹಸ್ರಾರು ಮಂದಿಗೆ ಅನ್ನ ಸಂತರ್ಪಣೆ ನಡೆಸಲಾಯಿತು.

Advertisement

ಬಸ್‌ ವ್ಯವಸ್ಥೆ: ಹಸಗೂಲಿ ಪಾರ್ವತಾಂಬ ಜಾತ್ರೆಗೆ ಸಾವಿರಾರು ಏಕಕಾಲಕ್ಕೆ ಆಗಮಿಸಿದ ನಿರೀಕ್ಷೆಯಿದ್ದ ಕಾರಣ ಕೆಎಸ್‌ಆರ್‌ಟಿಸಿ ವತಿ ಯಿಂದ ಗುಂಡ್ಲುಪೇಟೆ-ಹಸಗೂಲಿಗೆ ಬಸ್‌ ವ್ಯವಸ್ಥೆ ಮಾಡಲಾಗಿತ್ತು. ಈ ಮಧ್ಯೆ ಗರಗನಹಳ್ಳಿ ಗೇಟ್‌ನಿಂದ ಖಾಸಗಿ ವಾಹನಗಳಾದ ಆಟೋ, ಗೂಡ್ಸ್‌ ಆಟೋ, ಟೆಂಪೋದಲ್ಲಿ ಕುರಿಗಳಂತೆ ತುಂಬಿಕೊಂಡು ತೆರಳುತ್ತಿದ್ದರು. ಪಾರ್ವತಾಂಬ ಜಾತ್ರೆಗೆ ಕಾಂಗ್ರೆಸ್‌ ಮು ಖಂಡ ಎಚ್‌.ಎಂ.ಗಣೇಶ್‌ಪ್ರಸಾದ್‌, ಚಾಮು ಲ್‌ ಅಧ್ಯಕ್ಷ ಎಚ್‌.ಎಸ್‌.ನಂಜುಂಡ ಪ್ರಸಾದ್‌ ಹಾಗೂ ಎಎಸ್ಪಿ ಕೆ.ಎಸ್‌.ಸುಂದರ ರಾಜು, ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಭೇಟಿ ನೀಡಿ ದ್ದರು. ಬೇಗೂರು ಸರ್ಕಲ್‌ ಇನ್ಸ್‌ಪೆಕ್ಟರ್‌ ಎಂ. ಲಕ್ಷ್ಮೀಕಾಂತ್‌ ಮಾರ್ಗದರ್ಶನದಲ್ಲಿ ಗುಂಡ್ಲು ಪೇಟೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಎಸ್‌.ಮಹ ದೇವಸ್ವಾಮಿ, ಬೇಗೂರು ಸಬ್‌ ಇನ್ಸ್‌ ಪೆಕ್ಟರ್‌ ರಿಹಾನ ಬೇಗಂ ಬಂದೋಬಸ್ತ್ ಏರ್ಪಡಿಸಿದ್ದರು.

 ಸೇವಂತಿ ಹೂ ಅರ್ಪಣೆ

ಪಾರ್ವತಾಂಬ ಜಾತ್ರಾ ಮಹೋತ್ಸವದ ಮತ್ತೂಂದು ವಿಶೇಷ ಎಂದರೆ ಹರಕೆ ಹೊತ್ತ ಭಕ್ತರು ಸೇವಂತಿ ಹೂವು ನೀಡುತ್ತಾರೆ. ತಮ್ಮ ಶಕ್ತಾನುಸಾರ ದೇವಿಗೆ ಹೂವನ್ನು ಅರ್ಪಿಸಿ ಭಕ್ತಿ ಮೆರೆಯುವರು. ಹಾಗಾಗಿ ರಥೋತ್ಸವವು ಸಂಪೂರ್ಣ ಸೇವಂತಿ ಹೂ ಮಯವಾಗಿತ್ತು. ಸೇವಂತಿಗೆ ಹೂವಿನ ತೇರಿನಂತೆ ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next