ಮುಳಿಯಾರು: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರ ದ್ರವ್ಯಕಲಶ ಮಹೋತ್ಸವದ ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಯಕ್ಷಬಳಗ ಮುಳಿಯಾರು ಇದರ ದ್ವಿತೀಯ ವಾರ್ಷಿಕೋತ್ಸವವನ್ನು ಶ್ರೀ ಕ್ಷೇತ್ರ ಸನ್ನಿಧಾನದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಯಕ್ಷಬಳಗ ಮುಳಿಯಾರಿನ ಯಕ್ಷಗಾನ ಗುರುಗಳಾದ ಅಡ್ಕ ಕೃಷ್ಣ ಭಟ್, ಈಶ್ವರ ಭಟ್ ಬಳ್ಳಮೂಲೆ ಮತ್ತು ವಿದುಷಿ, ಸಾಹಿತಿ, ಭರತನಾಟ್ಯ ಶಿಕ್ಷಕಿ ಅನುಪಮಾ ರಾಘವೇಂದ್ರ ಉಡುಪುಮೂಲೆ ಅವರನ್ನು ಕೋಟೂರು ಯಕ್ಷತೂಣೀರ ಸಂಪ್ರತಿಷ್ಠಾ®ಇವರ ವತಿಯಿಂದ ಸಮ್ಮಾನಿಸಲಾಯಿತು.
ಸೀತಾರಾಮ ಬಳ್ಳುಳ್ಳಾಯ ಅವರು ಶಾಲುಹೊದೆಸಿ, ಫಲ, ಸ್ಮರಣಿಕೆಗಳನ್ನಿತ್ತು ಗೌರವಿಸಿದರು.
ದ್ರವ್ಯಕಲಶೋತ್ಸವ ಸಮಿತಿ ಅಧ್ಯಕ್ಷರಾದ ವೇಣುಗೋಪಾಲ ತತ್ವಮಸಿ, ರಾಘವೇಂದ್ರ ಉಡುಪುಮೂಲೆ ಉಪಸ್ಥಿತರಿದ್ದರು. ಮುರಳಿ ಸ್ಕಂದ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಡಾ| ಶಿವಕುಮಾರ್ ಅಡ್ಕ ಸ್ವಾಗತಿಸಿದರು. ಸುಬ್ರಹ್ಮಣ್ಯ ಭಟ್ ಅಡ್ಕ ವಂದಿಸಿದರು. ಗೋವಿಂದ ಬಳ್ಳಮೂಲೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮುಳಿಯಾರು ಯಕ್ಷಬಳಗದಿಂದ “ಕೃಷ್ಣ ಲೀಲಾ ಕಂಸವಧೆ’ ಮತ್ತು ಕೋಟೂರುಯಕ್ಷತೂಣೀರ ಸಂಪ್ರತಿಷ್ಠಾನದಿಂದ “ಗದಾಯುದ್ಧ’ ಬಯಲಾಟವು ಜರಗಿತು.