Advertisement
ನಗರದ ಶ್ರೀ ದ್ಯಾಮವ್ವದೇವಿ ದೇವಸ್ಥಾನದಲ್ಲಿ ರವಿವಾರ ಶ್ರೀಗ್ರಾಮದೇವತೆ ಶ್ರೀ ದ್ಯಾಮವ್ವದೇವಿ ಸೇವಾ ಸಮಿತಿ ನೇತೃತ್ವದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
Related Articles
Advertisement
ದೇವಸ್ಥಾನ ಸೇವಾ ಸಮಿತಿ ಕಾರ್ಯದರ್ಶಿ ಗಂಗಾಧರ ಹೂಗಾರ ಮಾತನಾಡಿ, ಜಾತ್ರೆ ಸಂದರ್ಭದಲ್ಲಿ ಶ್ರೀದೇವಿಯನ್ನು ಎಂ.ಜಿ. ರಸ್ತೆಯಲ್ಲಿರುವ ದ್ಯಾಮವ್ವನ ಪಾದಗಟ್ಟಿ ಹಿಂಭಾಗ ಹೊಸದಾಗಿ ನಿರ್ಮಿಸಲಿರುವ ಚೌತಮನಿ ಕಟ್ಟೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು. ಇದಕ್ಕೂ ಮೊದಲು ಶ್ರೀದ್ಯಾಮವ್ವದೇವಿಯನ್ನು ಮಂಗಳವಾರ ರಾತ್ರಿ ದೇವಸ್ಥಾನದಿಂದ ರಥದಲ್ಲಿ ಕೂಡ್ರಿಸಿಕೊಂಡು ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆಯೊಂದಿಗೆ ಚೌತಮನಿ ಕಟ್ಟೆಗೆ ಕರೆತರಲಾಗುವುದು. ಅಲ್ಲಿಯೇ ಬುಧವಾರ ಹಾಗೂ ಗುರುವಾರ ಜಾತ್ರೆಯ ವಿಧಿ ವಿಧಾನ ಹಾಗೂ ವಿಶೇಷ ಪೂಜೆ ಅಲಂಕಾರಗಳನ್ನು ಮಾಡಲಾಗುವುದು. ಶುಕ್ರವಾರ ಜಾತ್ರೆ ಸಂಪನ್ನಗೊಳ್ಳಲಿದೆ ಎಂದು ತಿಳಿಸಿದರು.
ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಬಸವರಾಜ ಎನ್. ಹೂಗಾರ ಹಾಗೂ ಕಾರ್ಯದರ್ಶಿ ಅಶೋಕ ಮುದಗಲ್ ಮಾತನಾಡಿ, ಜಾತ್ರೆ ಆಚರಣೆ ಹಿನ್ನೆಲೆಯಲ್ಲಿ ಶ್ರೀದೇವಿ ಸೇವಾ ಸಮಿತಿ ಈಗಾಗಲೇ ಕೈಕೊಂಡಿದೆ. ಜಾತ್ರೆಗಾಗಿ ದೇವಸ್ಥಾನ ನವೀಕರಣ, ಶ್ರೀದೇವಿಗೆ ಬಣ್ಣ ಹಚ್ಚುವುದು ಇತರೆ ಕಾರ್ಯಗಳು ಆರಂಭಗೊಂಡಿವೆ. ಭಕ್ತರು ಹಾಗೂ ಸಾರ್ವಜನಿಕರು ತನು-ಮನ-ಧನ ಸಹಾಯದೊಂದಿಗೆ ಜಾತ್ರೆಗೆ ಸಹಕಾರ ನೀಡಬೇಕು ಎಂದು ಕೋರಿದರು.
ಸೇವಾ ಸಮಿತಿ ಉಪಾಧ್ಯಕ್ಷ ಬೆಟ್ಟಪ್ಪ ಕುಳೇನೂರ, ಅರ್ಚಕ ಹನುಮಂತನಾಯ್ಕ ಬದಾಮಿ, ಭಕ್ತರಾದ ವಿರುಪಾಕ್ಷಪ್ಪ ಹತ್ತಿಮತ್ತೂರ, ಜಗದೀಶ ಚನ್ನಬಸಪ್ಪ ಕನವಳ್ಳಿ, ಉಮೇಶ ಮಹಾರಾಜಪೇಟ, ಜಿಪಂ ಮಾಜಿ ಅಧ್ಯಕ್ಷ ಪರಮೇಶಪ್ಪ ಮೇಗಳಮನಿ, ಅನಿಲ ಮಹಾರಾಜಪೇಟ, ವಿವಿಧ ಸಂಘಟನೆ ಹಾಗೂ ಸಮಾಜ ಮುಖಂಡರಾದ ಕೃಷ್ಣಮೂರ್ತಿ ಕಳಂಜಿ, ಶೇಷಣ್ಣ ಹರಿಕಾರ, ಗೌಡಪ್ಪನವರ, ಕೆ.ಎ. ಕಬ್ಬಿಣಕಂತಿಮಠ, ದೊಡ್ಡದ್ಯಾಮಣ್ಣ ಬಡಿಗೇರ, ಪರಮೇಶ್ವರ ಪಾಟೀಲ, ಡಾ| ಪ್ರದೀಪ ದೊಡ್ಡಗೌಡ್ರ, ಕಿರಣ ಕೊಳ್ಳಿ, ಶಿವಯೋಗಿ ಹೂಲಿಕಂತಿಮಠ, ಬಸಪ್ಪ ಮುಗದೂರ, ಮಡಿವಾಳಯ್ಯ ಚೌಕಿಮಠ, ರಮೇಶ ನವಲೆ, ವಿಜಯಕುಮಾರ ಕೂಡ್ಲಪ್ಪನವರ, ಗಿರೀಶ ಗುಮಕಾರ, ನಟರಾಜ ದೇವಗಿರಿ, ಮಧೂರಕರ, ನಾಗರಾಜ ಜೋರಾಪುರ, ಅಶೋಕಸಿಂಗ್ ರಜಪೂತ, ಪ್ರಕಾಶ ಉಜ್ಜನಿಕೊಪ್ಪ, ಭರತ, ರುದ್ರಪ್ಪ ಜಾಬಿನ್, ಗಣೇಶ ಸಾನು, ಸತೀಶ ಮಡಿವಾಳರ, ರಮೇಶ ಆನವಟ್ಟಿ ಇದ್ದರು. ಸಮಿತಿ ಸದಸ್ಯ ಪೃಥ್ವಿರಾಜ ಬೆಟಗೇರಿ ಸ್ವಾಗತಿಸಿದರು. ಪರಮೇಶ್ವರ ಪಾಟೀಲ ವಂದಿಸಿದರು.