Advertisement
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅ. 8 ರಂದು ಬೈಕ್ ರ್ಯಾಲಿ, ರಾಜ್ಯ ಮಟ್ಟದ ಜಾನಪದ ಕಲೆಗಳ ಸ್ಪರ್ಧೆ, ಚಲನಚಿತೋÅತ್ಸವ ಉದ್ಘಾಟನೆ, ರಾಷ್ಟ್ರ ಮಟ್ಟದ ಆಹ್ವಾನಿತ ಪುರುಷರ ಮತ್ತು ಮಹಿಳೆಯರ ಹೊನಲುಬೆಳಕಿನ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ. ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಇಂಡಿಯನ್ ಬ್ಯಾಂಕ್ ಚೆನ್ನೈ, ಇಂಡಿಯನ್ ರೈಲ್ವೆ ದೆಹಲಿ, ಇಂಡಿಯನ್ ಓವರ್‌ಸಿಸ್ ಬ್ಯಾಂಕ್ ತಮಿಳುನಾಡು, ಒಎನ್‌ಜಿಸಿ ಗುವಾಹಟಿ, ಹರಿಯಾಣ ರಾಜ್ಯ ತಂಡ, ಬಿಪಿಸಿಎಲ್ ಕೊಚ್ಚಿನ್, ಕೆಎಸ್‌ಇಟಿ ತಂಡ ಕೇರಳ ಮತ್ತು ಕರ್ನಾಟಕ ತಂಡ ಬೆಂಗಳೂರು ಹಾಗೂ ಮಹಿಳೆಯರ ತಂಡಗಳಾದ ಇಂಡಿಯನ್ ರೈಲ್ವೆ ದೆಹಲಿ, ತಮಿಳುನಾಡು ತಂಡ, ಕೆಎಸ್‌ಇಟಿ ಕೇರಳ, ಕರ್ನಾಟಕ ತಂಡ ಬೆಂಗಳೂರು, ಕೇರಳ ಪೊಲೀಸ್ ತಂಡ, ಎಸ್ ಆರ್‌ಎಂ ಯೂನಿವರ್ಸಿಟಿ ತಂಡ ತಮಿಳುನಾಡು ತಂಡಗಳು ಭಾಗವಹಿಸಲಿವೆ. ರಾಷ್ಟ್ರ ಮಟ್ಟದ ಆಹಾರಮೇಳ, ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಮತ್ತು ಯೂತ್ ಫೆಸ್ಟಿವಲ್ ಉದ್ಘಾಟನೆ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಮುರುಘಾ ಮಠದಿಂದ ನೀಡಲಾಗುವ ಪ್ರಸಕ್ತ ಸಾಲಿನ ಮುರುಘಾಶ್ರೀ ಪುರಸ್ಕಾರಕ್ಕೆ ನಾಡಿನ ಐವರು ಗಣ್ಯರನ್ನು ಆಯ್ಕೆ ಮಾಡಲಾಗಿದೆ. ಶರಣ ಸಂಸ್ಕೃತಿ ಉತ್ಸವದಲ್ಲಿ ಅ.13ರಂದು ಸಂಜೆ 6:30ಕ್ಕೆ ಮುರುಘಾ ಮಠದ ಅನುಭವ ಮಂಟದಪಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ ಪುರಸ್ಕೃತರ ಕಿರು ಪರಿಯಯ ಇಂತಿದೆ.
Related Articles
Advertisement
ರವೀಂದ್ರ ಭಟ್ ಐನಕೈಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಐನಕೈ ಗ್ರಾಮದ ರವೀಂದ್ರ ಭಟ್, ಸಂಯುಕ್ತ ಕರ್ನಾಟಕ,
ಉದಯವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿ ಪ್ರಸ್ತುತ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕರಾಗಿ ಕಾರ್ಯ
ನಿರ್ವಹಿಸುತ್ತಿದ್ದಾರೆ. ಇವರೇ ಬರಮಾಡಿಕೊಂಡ ಬರ, ಹೆಜ್ಜೆನು, ಬದುಕು ಮರದ ಮೇಲೆ, ಮೂರನೇ ಕಿವಿ,
ಸಂಪನ್ನರು, ಅಕ್ಷಯ ನೇತ್ರ, ಸಹಸ್ರಪದಿ ಮತ್ತಿತರೆ ಕೃತಿಗಳನ್ನು ರಚಿಸಿದ್ದಾರೆ. ಕಾರ್ಯನಿರತ ಪತ್ರಕರ್ತರ ಪ್ರಶಸ್ತಿ, ಮಹಾತ್ಮ ಗಾಂಧಿ ಪ್ರಶಸ್ತಿ, ಚರಕ ಪ್ರಶಸ್ತಿ, ಎಚ್.ಎಸ್.ಕೆ. ಪ್ರಶಸ್ತಿ,ಕೆಂಪೇಗೌಡ ಪ್ರಶಸ್ತಿ, ಪತ್ರಿಕೋದ್ಯಮ ಪ್ರಶಸ್ತಿಗಳು ಲಭಿಸಿವೆ. ಡಾ| ಅಮ್ಜಾದ್ ಹುಸೇನ್ ವಿದ್ಯೆ ಮಾತ್ರವೇ ನಮ್ಮನ್ನು ಕಾಪಾಡಬಲ್ಲದು ಎಂದು ನಂಬಿದವರು ಡಾ| ಅಮ್ಜಾದ್ ಹುಸೇನ್. ಶಿಕ್ಷಕ ತರಬೇತಿ ಪಡೆದು ಶಾಲಾ ಶಿಕ್ಷಕರಾಗಿ ಸೇವೆ ಆರಂಭಿಸಿದರು. ಶಿಕ್ಷಕ ವೃತ್ತಿಯ ಜೊತೆಗೆ ಸಾಹಿತ್ಯದ ಗೀಳನ್ನು ಹೊಂದಿ ವಿಶೇಷವಾಗಿ ಮಕ್ಕಳ ಸಾಹಿತ್ಯ ರಚನೆಗೆ ಒತ್ತು ನೀಡುತ್ತಾ ಈವರೆಗೆ 51 ಕವನ ಸಂಕಲನಗಳು, 37ಕ್ಕು ಹೆಚ್ಚು ಗದ್ಯ ಕೃತಿಗಳನ್ನು ಹೊರತಂದಿದ್ದಾರೆ. ಸಾವಿರಾರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ನೀಡುತ್ತ, “ಮದರಸಾ’ವನ್ನು ತೆರೆದು ಸಮಾಜದ ಬಡ, ಅನಾಥ ಮಕ್ಕಳಿಗೆ ಶಿಕ್ಷಣ ದಾಸೋಹ ನೀಡಿದ್ದಾರೆ. ಗುಲ್ಬರ್ಗಾ ಹಾಗು ಜೆರುಸಲೇಮ್ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಪದವಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಯುಗಧರ್ಮ ರಾಮಣ್ಣ ಸಾವಿರಾರು ತ್ರಿಪದಿ, ವಚನ, ಲಾವಣಿಗಳನ್ನು ಹಾಡುವ ಆಶುಕವಿ ಯುಗಧರ್ಮ ರಾಮಣ್ಣ, ಗ್ರಾಮ್ಯ ಸಿರಿಯನ್ನೇ ನೆಲೆಯಾಗಿಸಿಕೊಂಡ ದೇಸಿ ಪದಶಕ್ತಿಯ ಶಬ್ದಗಾರುಡಿಗ. ದಾವಣಗೆರೆ ಜಿಲ್ಲೆಯ ಸಿದ್ಧನಮಠ ಗ್ರಾಮದ ಕೃಷಿಕ ಕೆಂಚಪ್ಪ ಮತ್ತು ಹುಚ್ಚಮ್ಮ ದಂಪತಿ ಪುತ್ರರಾಗಿದ್ದಾರೆ. ಯುಗಧರ್ಮ ತತ್ವಪದಗಳು, ಯುಗಧರ್ಮ ತ್ರಿಪದಿ, ಕನ್ನಡಮ್ಮನ ತೇರು, ವಚನ ಧರ್ಮ ಮತ್ತು ತೋಚಿದ್ಗೀಚು ಎಂಬ 5 ಕೃತಿಗಳನ್ನು ರಚನೆ ಮಾಡಿದ್ದಾರೆ. ನಾಡಿನೆಲ್ಲೆಡೆ ಸುತ್ತುತ್ತಾ ಸುಮಾರು 13,500ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಹೊಸದುರ್ಗ ತಾಲೂಕಿನ ಬ್ರಹ್ಮವಿದ್ಯಾನಗರದಲ್ಲಿ “ದಡ್ರಪದ ವಿಶ್ವವಿದ್ಯಾಲಯ’ವನ್ನು ಕಟ್ಟಿದ್ದಾರೆ. ಎಸ್. ನಾಗರತ್ನಂ
ತಮಿಳುನಾಡಿನ ಮಧುರೈನ ನಾಗರತ್ನಂ ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ನಾಡಿನಾದ್ಯಂತ ಪ್ರಚಾರ ಮಾಡಲು ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. 1990ರಲ್ಲಿ ವೀರಶೈವ ಜಂಗಮ ಎಂದು ಹೆಸರಿದ್ದ ಸಮುದಾಯವನ್ನು ವೀರಶೈವ ಮಹಾಸಭಾ ಎಂದು ನಾಮಕರಣ ಮಾಡಿಸಿ ಲಿಂಗಾಯತದ ಅನೇಕ ಒಳಪಂಗಡಗಳನ್ನು ಒಂದೆಡೆ ಸೇರಿಸಿ ದೊಡ್ಡ ಸಮುದಾಯ ಎಂಬುದನ್ನು ಸಾಬೀತುಪಡಿಸಿದರು. ತಮಿಳುನಾಡಿನಲ್ಲಿ 22ಕ್ಕೂ ಹೆಚ್ಚು ಲಿಂಗಾಯತ ಸಮುದಾಯದ ಘಟಕಗಳನ್ನು ಸ್ಥಾಪಿಸಿ ನೋಂದಣಿ ಮಾಡಿಸಿ 30 ಲಕ್ಷಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ ಎಂದು ತೋರಿಸಿಕೊಟ್ಟಿದ್ದಾರೆ.