Advertisement
ಆ.4ರಿಂದ 15ರವರೆಗೆ 12 ದಿನಗಳ ಕಾಲ ನಡೆದ 208ನೇ ಫಲಪುಷ್ಪ ಪ್ರದರ್ಶನದಲ್ಲಿ ಪ್ರವೇಶ ಶುಲ್ಕದಿಂದ ಒಟ್ಟು 2.36 ಕೋಟಿ ರೂ. ಸಂಗ್ರಹವಾಗಿದೆ. ಫಲಪುಷ್ಪ ಪ್ರದರ್ಶನದ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ಹಣ ಸಂಗ್ರವಾಗಿದೆ. ಕಳೆದ ಬಾರಿ 2.14 ಕೋಟಿ ರೂ. ಸಂಗ್ರವಾಗಿತ್ತು. ಭಾರತೀಯ ರಕ್ಷಣಾ ವ್ಯವಸ್ಥೆ ಹಾಗೂ ಕನ್ನಡ ಚಿತ್ರರಂಗಕ್ಕೆ 85 ವರ್ಷ ತುಂಬಿದ ನೆನಪಿನ ಪರಿಕಲ್ಪನೆಯಲ್ಲಿ ಮೂಡಿ ಬಂದ ಚಂದನವನಕ್ಕೆ ಈ ಬಾರಿ ಜನಸಾಗರವೇ ಹರಿದು ಬಂದಿದ್ದು 4,99,457 ಮಂದಿ ವೀಕ್ಷಿಸಿದ್ದಾರೆ.
ವಿದ್ಯಾರ್ಥಿಗಳ ಪ್ರಮಾಣ ಹೆಚ್ಚಳ ರಜಾ ದಿನ ಹೊರತುಪಡಿಸಿ ಉಳಿದ ದಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಿದ್ದರಿಂದ ಈ ಬಾರಿ ಫಲಪುಷ್ಪ ಪ್ರದರ್ಶನಕ್ಕೆ ಹೆಚ್ಚಿನ ಮಕ್ಕಳು ಭೇಟಿ ನೀಡಿದ್ದಾರೆ. ಸುಮಾರು 250ಕ್ಕೂ ಅಧಿಕ ಶಾಲೆಗಳ, 1,29,250 ಮಕ್ಕಳು ಫಲಪುಷ್ಪ ಪ್ರದರ್ಶನ ಕಣ್ತುಂಬಿಕೊಂಡಿದ್ದಾರೆ. ಕಳೆದ ಬಾರಿ 26,658 ಮಕ್ಕಳು ಭೇಟಿ ನೀಡಿದ್ದರು.
Related Articles
Advertisement
ಎರಡು ದಿನ ಮುಂದುವರಿಕೆ: ಆ.15ಕ್ಕೆ ಫಲಪುಷ್ಪ ಪ್ರದರ್ಶನ ಕೊನೆಗೊಂಡರೂ ಜನ ಲಾಲ್‌ಬಾಗ್‌ಗೆ ಭೇಟಿ ನೀಡುವುದು ಕಡಿಮೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಫಲಪುಷ್ಪ ಪ್ರದರ್ಶನದ ಪ್ರತಿಕೃತಿಗಳನ್ನು ಇನ್ನೆರಡು ದಿನ ಕಾಲ ಹಾಗೇ ಇರಿಸಲು ತೋಟಗಾರಿಕೆ ಇಲಾಖೆ ತೀರ್ಮಾನಿಸಿದೆ.
2 ಟನ್ ತ್ಯಾಜ್ಯ ಸಂಗ್ರಹ: ಹೂವುಗಳ ತ್ಯಾಜ್ಯವನ್ನೆಲ್ಲ ಸಂಗ್ರಹಿಸಿ ಲಾಲ್‌ಬಾಗ್‌ನಲ್ಲಿರುವ ಜಿಂಕೆ ನರ್ಸರಿ ಗೊಬ್ಬರ ತಯಾರಿಕೆ ಘಟಕಕ್ಕೆ ಸುರಿಯಾಲಾಗುವುದು. ಅಲ್ಲಿ ಗೊಬ್ಬರ ತಯಾರಿಸಿ ಉದ್ಯಾನವನಕ್ಕೆ ಬಳಸಿಕೊಳ್ಳಲಾಗುವುದು. ಆ.4ರಿಂದ 14ರವರೆಗೆ ನಡೆದ ಪ್ರದರ್ಶನದಲ್ಲಿ ಸುಮಾರು 2 ಟನ್‌ಗಿಂತಲೂ ಹೆಚ್ಚು ತ್ಯಾಜ್ಯ ಸಂಗ್ರಹವಾಗಿದೆ. ಆದರೆ ಬುಧವಾರ ಒಂದೇ ದಿನ 2 ಟನ್ ತ್ಯಾಜ್ಯ ಸಂಗ್ರಹವಾಗಿದೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಜಗದೀಶ್ ಮಾಹಿತಿ ನೀಡಿದರು.
6 ವರ್ಷಗಳಲ್ಲಿ ಭೇಟಿ ನೀಡಿದವರುವರ್ಷ ವಯಸ್ಕರು ಮಕ್ಕಳು ಒಟ್ಟು
2013 3,23,009 18,010 3,41,019
2014 3,83,064 27,345 4,10,409
2013 3,90,193 26,004 4,16,197
2016 3,00,639 21,278 3,21,917
2017 3,63,998 26,658 3,90,656
2018 3,70,207 1,29,250 4,99,457 ಸಂಗ್ರಹಗೊಂಡ ಶುಲ್ಕ
ವರ್ಷ ಮೊತ್ತ (ಕೋಟಿ ರೂ.ಗಳಲ್ಲಿ)
2013 1.57
2014 1.79
2015 1.87
2016 1.78
2017 2.14
2018 2.36