Advertisement

ರಸಗೊಬ್ಬರ ದುಬಾರಿ; ತೀವ್ರ ಕೊರತೆ! ಬೆಳೆಗೆ ಸಿದ್ಧವಾಗಿರುವ ರೈತರಿಗೆ ಚಿಂತೆ

12:44 AM Apr 16, 2022 | Team Udayavani |

ಹೊಸದಿಲ್ಲಿ: ದೇಶದಲ್ಲಿ ಪ್ರಸಕ್ತ ವರ್ಷದ ಮುಂಗಾರು ಸಾಮಾನ್ಯವಾಗಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿರುವುದರಿಂದ ರೈತಾಪಿ ವರ್ಗ ಖುಷಿಯಲ್ಲಿದ್ದರೂ, ಅವರಿಗೆ ರಸಗೊಬ್ಬರದ ಕೊರತೆ ಕಾಡುವ ಆತಂಕ ಎದುರಾಗಿದೆ. ಜತೆಗೆ ಯುದ್ಧದಿಂದಾಗಿ ಅವುಗಳ ಬೆಲೆಯೂ ಹೆಚ್ಚಾಗುವ ಸಾಧ್ಯತೆಯಿದೆ. ಕಳೆದ ತಿಂಗಳ ಅಂತ್ಯಕ್ಕೆ ಆಹಾರ ಹಣದುಬ್ಬರ ಪ್ರಮಾಣ 17 ತಿಂಗಳ ಗರಿಷ್ಠ ಶೇ.6.95ರ ವರೆಗೆ ಏರಿಕೆ ಯಾಗಿರುವಂತೆಯೇ ಹೊಸ ಸಮಸ್ಯೆ ಎದುರಾಗಿದೆ.

Advertisement

ಕೃಷಿಗೆ ಮುಖ್ಯವಾಗಿ ಫಾಸ್ಫೇಟ್ ಮತ್ತು ಪೊಟ್ಯಾಶ್‌ ಕೊರತೆಯಿದೆ. ಬೆಲೆ ಯೇರಿಕೆ ಆಗಿರುವುದರಿಂದ ಇವನ್ನು ಆಮದು ಮಾಡಿ ಕೊಳ್ಳಲು ಕಂಪೆನಿಗಳು ಹಿಂಜರಿಯುತ್ತಿವೆ. ರೈತರು ಜೂನ್‌ ನಿಂದ ಮುಂಗಾರು ಬೆಳೆ ಬಿತ್ತನೆ ಆರಂಭಿಸುತ್ತಾರೆ.

ಎ.1ರ ಅಂಕಿಸಂಖ್ಯೆ ಗಮನಿಸಿದರೆ 2.5 ದಶಲಕ್ಷ ಟನ್‌ ಡೈ ಅಮೋನಿಯಮ್‌ ಫಾಸ್ಫೇಟ್ (ಡಿಎಪಿ), 0.5 ಮಿಲಿಯನ್‌ ಟನ್‌ ಪೊಟ್ಯಾಶ್‌ (ಎಂಒಪಿ), ಸಾರಜನಕ, ಫಾಸ್ಫರಸ್‌, ಪೊಟ್ಯಾಶ್‌, ಸಲ#ರ್‌ (ಎನ್‌ಪಿಕೆಎಸ್‌) ಮಿಶ್ರವಾಗಿರುವ 1 ಮಿ. ಟನ್‌ಗಳಷ್ಟು ಗೊಬ್ಬರ ಲಭ್ಯವಿದೆ. ಆದರೆ ಇದು ದೇಶದ ಮಟ್ಟಿಗೆ ನೋಡಿದರೆ ಬಹಳ ಕಡಿಮೆ.

ಇದನ್ನೂ ಓದಿ:ಪ್ರತಿ ಇಲಾಖೆಯಲ್ಲೂ 40 ಪರ್ಸೆಂಟ್‌ ಹಾವಳಿ: ತನಿಖೆ ನಡೆಸಿದರೆ ಇನ್ನಿಬ್ಬರ ವಿಕೆಟ್‌ ಬೀಳಲಿದೆ

ಕಾಳಗದ ಪರಿಣಾಮ
ಭಾರತದಲ್ಲಿ ಯೂರಿಯ ಪೂರೈಕೆ ಸ್ಥಿರವಾಗಿರುತ್ತದೆ. ಆದರೆ ಯೂರಿಯವನ್ನು ಹೊರತುಪಡಿಸಿದ ಅನ್ಯ ಗೊಬ್ಬರಗಳ ಬೆಲೆ ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮ ಹೆಚ್ಚುತ್ತಲೇ ಇದೆ. ಆಮದನ್ನು ಪರಿಗಣಿಸಿದರೆ ಡಿಎಪಿ 1 ಟನ್‌ಗೆ 95,000 ರೂ., ಎಂಒಪಿ 1 ಟನ್‌ಗೆ 53,200-57,000 ರೂ., ಎನ್‌ಪಿಕೆ 1 ಟನ್‌ಗೆ 59,280 ರೂ. ಬೆಲೆ ಇದೆ. ಜಿಎಸ್‌ಟಿ ಮತ್ತಿತರ ಖರ್ಚುಗಳನ್ನೆಲ್ಲ ಸೇರಿಸಿದರೆ 1 ಟನ್‌ ಡಿಎಪಿ ಆಮದಿಗೆ 1.1 ಲಕ್ಷ ರೂ. ಆಗುತ್ತದೆ. ಒಟ್ಟಾರೆ 1 ಟನ್‌ ಆಮದು ಮಾಡಿಕೊಳ್ಳುವಾಗ ವ್ಯಾಪಾರಿಗೆ ಸರಿಸುಮಾರು 50,000 ರೂ. ನಷ್ಟವಾಗುತ್ತದೆ.

Advertisement

ಅಲ್ಲದೆ, ಸರಕಾರ ಸಹಾಯಧನ (ಸಬ್ಸಿಡಿ)ವನ್ನು ಹೆಚ್ಚಿಸುತ್ತಾ, ಹೆಚ್ಚಿನ ಬೆಲೆಯನ್ನು ನಮೂದಿಸಲು ಅವಕಾಶ ನೀಡುತ್ತಾ ಈ ಎಲ್ಲ ಪ್ರಶ್ನೆಗಳು ಉದ್ಭವಿಸಿವೆ. ಹೀಗಾಗಿ ಕಳೆದ ಎರಡು ತಿಂಗಳಿನಿಂದ ಹೊಸ ಆಮದು ಒಪ್ಪಂದಗಳೇ ಆಗಿಲ್ಲ. ಇದು ರೈತರ ಪಾಲಿಗೆ ಸಂಕಷ್ಟ ತರುವ ಸಾಧ್ಯತೆಯಿದೆ.

ಸದ್ಯ ರೈತರು ರಬಿ ಅವಧಿಯ ಬೆಳೆಗಳಿಗೆ ಸೂಕ್ತ ರೀತಿಯಲ್ಲಿ ಮಾರುಕಟ್ಟೆ ಕಂಡುಕೊಳ್ಳುವಲ್ಲಿ ವ್ಯಸ್ತರಾಗಿದ್ದಾರೆ.

ಮುಂಗಾರು ಶುರುವಾಗುವುದಕ್ಕಿಂತ ಮೊದಲು ಅವರಿಗೆ ರಸಗೊಬ್ಬರಗಳನ್ನು ಸಂಗ್ರಹಿಸಿ ಇರಿಸಬೇಕಾಗಿದೆ.

ಹೀಗಾಗಿ, ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಸಗೊಬ್ಬರ ಕ್ಷೇತ್ರದ ಪರಿಣಿತರು ಅಭಿಪ್ರಾಯಪಡುತ್ತಾರೆ.

ದೇಶದಲ್ಲಿ ಸಂಗ್ರಹ ಎಷ್ಟಿದೆ?
2.5 ಮಿಲಿಯ ಟನ್‌- ಡಿಎಪಿ
0.5 ಮಿಲಿಯ ಟನ್‌- ಪೊಟ್ಯಾಷ್‌
1 ಮಿಲಿಯ ಟನ್‌- ನೈಟ್ರೋಜನ್‌, ಪಾಸೊ#ರಸ್‌, ಪೊಟ್ಯಾಷ್‌ ಮತ್ತು ಸಲ್ಫರ್ (ಎನ್‌ಪಿಕೆಎಸ್‌)

ದೇಶದಲ್ಲಿ ರಸಗೊಬ್ಬರ ಬಳಕೆ
(ಎಪ್ರಿಲ್‌-ಸೆಪ್ಟೆಂಬರ್‌ ಅವಧಿ)
9 ಮಿಲಿಯ ಟನ್‌- ಡಿಎಪಿ
10 ಮಿಲಿಯ ಟನ್‌-ಎನ್‌ಪಿಕೆಎಸ್‌
4.5- 5 ಮಿಲಿಯ ಟನ್‌- ಪೊಟ್ಯಾಷ್‌
ಶೇ.55- ಅಕ್ಟೋಬರ್‌- ಮಾರ್ಚ್‌ ಅವಧಿಯಲ್ಲಿ

 

 

 

Advertisement

Udayavani is now on Telegram. Click here to join our channel and stay updated with the latest news.

Next