Advertisement
ಗುರುವಾರ ಜಿಎಂಐಟಿ ಅತಿಥಿ ಗೃಹದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು,ರಾಜ್ಯ ಸರ್ಕಾರದ ಮಾರ್ಕೆಟಿಂಗ್ ಫೆಡರೇಷನ್‌ಸಹಯೋಗದೊಂದಿಗೆ ರಾಸಾಯನಿಕ ಗೊಬ್ಬರಕಾರ್ಖಾನೆ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದೆ.ರಾಜ್ಯ ಮಾರ್ಕೆಟಿಂಗ್ ಫೆಡರೇಷನ್‌ನವರು ಕಳೆದ ವಾರ ಉದ್ದೇಶಿತ ಸ್ಥಳಕ್ಕೆ ಭೇಟಿ ನೀಡಿ ಕೇಂದ್ರ ತಂಡಕ್ಕೆವರದಿ ನೀಡಿದ್ದರು ಎಂದರು.
Related Articles
Advertisement
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ,ಸಕಾರಾತ್ಮಕ ವರದಿ ತಯಾರಿಸಿ ಸಚಿವಾಲಯಕ್ಕೆಆದಷ್ಟು ಬೇಗ ಸಲ್ಲಿಸಿ. ಇನ್ನುಳಿದಂತೆ ಅಗತ್ಯ ಕ್ರಮಗಳಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸುತ್ತಾರೆ ಎಂದರು. ಅದಕ್ಕೆ ಧ್ವನಿಗೂಡಿಸಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾಡಳಿತದ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಎಲ್ಲಾ ಪೂರ್ವಸಿದ್ದತಾ ಕ್ರಮಗಳು ಮುಗಿದಮೇಲೆ ಎಷ್ಟು ಕಾಲಾವಕಾಶದಲ್ಲಿ ಕಾರ್ಖಾನೆ ತಲೆ ಎತ್ತಲಿದೆ ಎನ್ನುವ ಸಂಸದರ ಪ್ರಶ್ನೆಗೆ, ಕಾರ್ಖಾನೆ ಸ್ಥಾಪನೆ ಮಾಡುವ ಕೆಲಸ ಆರಂಭವಾಗಿ 36 ತಿಂಗಳುಗಳಲ್ಲಿ ಕೆಲಸ ಪೂರ್ಣಗೊಂಡು ಕಾರ್ಖಾನೆತನ್ನ ಕೆಲಸ ಆರಂಭ ಮಾಡಲಿದೆ ಎಂದು ವಿಕಾಸ್‌ಗೌರ್ ಮಾಹಿತಿ ನೀಡಿದರು. ಮಾರ್ಕೆಟಿಂಗ್ ಫೆಡರೇಷನ್ ಕಾರ್ಯಪಾಲಕಅಭಿಯಂತರ ಮಂಜುನಾಥ್, ಮಾರ್ಕೆಟಿಂಗ್ ಫೆಡರೇಷನ್ ನಿರ್ದೇಶಕ ಮಾಧುರಿ ಗಿರೀಶ್‌ಇತರರು ಸಭೆಯಲ್ಲಿ ಹಾಜರಿದ್ದರು.
ಮಾಜಿ ಸಚಿವ ದಿ| ಅನಂತಕುಮಾರ್ ಅವರು ಅತ್ಯಂತ ಕಾಳಜಿ ವಹಿಸಿ ದಾವಣಗೆರೆ ಜಿಲ್ಲೆಗೆ ರಾಸಾಯನಿಕ ಗೊಬ್ಬರ ಕಾರ್ಖಾನೆಗೆ ತಾತ್ವಿಕ ಅನುಮೋದನೆ ನೀಡಿದ್ದರು. ಈಗಿನ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಸದಾನಂದ ಗೌಡರು ಕೆಲಸಕ್ಕೆ ವೇಗನೀಡಿದ್ದಾರೆ. ರಾಸಾಯನಿಕ ಗೊಬ್ಬರ ಕಾರ್ಖಾನೆ ಸ್ಥಾಪನೆಯೊಂದಿಗೆ ದಾವಣಗೆರೆ ಜಿಲ್ಲೆಯ ಹರಿಹರದ ಗತವೈಭವ ಮರುಕಳಿಸಲಿದೆ. –ಜಿ.ಎಂ. ಸಿದ್ದೇಶ್ವರ, ಸಂಸದರು