Advertisement

ರೈತರ ಪ್ರತಿಭಟನೆಗೆ ತಾತ್ಕಾಲಿಕ ಬ್ರೇಕ್‌

02:27 PM Feb 12, 2021 | Team Udayavani |

ಬೆಳಗಾವಿ: ಹಲಗಾ-ಮಚ್ಛೆ ಬೈಪಾಸ್‌ ರಸ್ತೆಗೆ ಸಂಬಂಧಿ ಸಿದಂತೆ ಸ್ಥಳಕ್ಕೆ ಶನಿವಾರ ಫೆ. 13ರಂದು ತೆರಳಿ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವವರೆಗೆ ಯಾವುದೇ ಕಾಮಗಾರಿ ನಡೆಸದಂತೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ನೀಡಿರುವ ಸೂಚನೆ ಹಿನ್ನೆಲೆಯಲ್ಲಿ ರೈತರು ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಗುರುವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಹಾಗೂ ರೈತರೊಂದಿಗೆ ನಡೆದ ಸಭೆಯಲ್ಲಿ ಸ್ಥಳಕ್ಕೆ ಬಂದು ಖುದ್ದಾಗಿ ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾ ಧಿಕಾರಿ ನೀಡಿದ ಭರವಸೆ ಮೇರೆಗೆ ರೈತರು ಪ್ರತಿಭಟನೆ ಹಿಂಪಡೆದರು.

ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಪರಿಹಾರ ನೀಡುವ ಬಗ್ಗೆ ಸರ್ಕಾರಕ್ಕೆ ತಿಳಿಸಲಾಗುವುದು. ಸರ್ಕಾರದ ಆದೇಶದಂತೆ ರಸ್ತೆ ನಿರ್ಮಾಣಕ್ಕೆ ಎಲ್ಲ ರೈತರು ಜಮೀನು ನೀಡಿ ಸಹಕರಿಸಬೇಕು. ಪರಿಹಾರ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೊಡಿಸಲಾಗುವುದು ಎಂದು ಜಿಲ್ಲಾ ಧಿಕಾರಿಗಳು ಹೇಳಿದರು.

ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ರೈತ ಮುಖಂಡರು, ನಮಗೆ ಯಾವುದೇ ಪರಿಹಾರ ಅಗತ್ಯವಿಲ್ಲ. ನಮ್ಮ ಫಲವತ್ತಾದ ಭೂಮಿ ಬಿಟ್ಟು ಕೊಟ್ಟರೆ ಸಾಕು. ಎಕರೆಗೆ ಕೋಟಿ ರೂ. ಕೊಟ್ಟರೂ ಜಮೀನು ಬಿಟ್ಟು  ಕೊಡುವುದಿಲ್ಲ. ಕೂಡಲೇ ಈ ಕಾಮಗಾರಿ ಸ್ಥಗಿತಗೊಳಿಸಿ ನಮ್ಮ ಜಮೀನು ನಮಗೆ ಬಿಟ್ಟು ಕೊಡಬೇಕು ಎಂದು ಆಗ್ರಹಿಸಿದರು.

ಪ್ರಾ ಧಿಕಾರ ಹಾಗೂ ರೈತರ ಮಧ್ಯೆ ಸಂಧಾನ ನಡೆಸಲು ಅ ಧಿಕಾರಿಗಳು ಎಷ್ಟೇ ಪ್ರಯತ್ನಿಸಿದರೂ ರೈತರು ಇದಕ್ಕೆ ಒಪ್ಪಲಿಲ್ಲ. ಉಪವಿಭಾಗಾಧಿ ಕಾರಿ ತೇಲಿ, ಹೆದ್ದಾರಿ ಪ್ರಾಧಿ ಕಾರದ ಪೋತದಾರ, ಗ್ರಾಮೀಣ ಎಸಿಪಿ, ಇನ್ಸಪೆಕ್ಟರ್‌, ರೈತ ಮುಖಂಡರಾದ ಚೂನಪ್ಪ ಪೂಜಾರಿ, ಗಣೇಶ ಹಿರೇಗಾರ, ರವಿ ಸಿದ್ದಮ್ಮನವರ, ಸತ್ಯಪ್ಪ ಮಲ್ಲಾಪುರಿ, ಜಯಶ್ರೀ ಗುರನ್ನವರ, ರಾಜು ಮರವೆ, ಭೂಮೇಶ ಮಿರ್ಜೆ, ಹನುಮಂತ ಬಾಳೇಕುಂದ್ರಿ ಸೇರಿದಂತೆ ಇತರರು ಇದ್ದರು.

Advertisement

ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ :

ಬೆಳಗಾವಿ: ಇಲ್ಲಿಯ ಹಲಗಾ-ಮಚ್ಛೆ ಬೈಪಾಸ್‌ ರಸ್ತೆ ನಿರ್ಮಾಣ ವಿರೋ ಧಿಸಿ ನಡೆಸುತ್ತಿರುವ ಹೋರಾಟ ಮೂರನೇ ದಿನಕ್ಕೆ ಗುರುವಾರ ಕಾಲಿಟ್ಟಿದ್ದು, ರೈತರು ತಲೆ ಮೇಲೆ ಕಲ್ಲು ಇಟ್ಟುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ಬೆ„ಪಾಸ್‌ ರಸ್ತೆ ನಿಮಾಣವಾಗುತ್ತಿರುವ ಮಚ್ಛೆಯಲ್ಲಿ ಬಿಸಿಲು-ಚಳಿಯನ್ನು ಲೆಕ್ಕಿಸದೇ ರೈತರು ಹೋರಾಟ ಮುಂದುವರಿಸಿದ್ದಾರೆ. ದಿನಂಪ್ರತಿ ಒಂದಿಲ್ಲೊಂದು ಪ್ರತಿಭಟನೆ ನಡೆಸಿ ಸರ್ಕಾರವನ್ನು ಎಚ್ಚರಿಸುತ್ತಿದ್ದಾರೆ. ಕಳೆದ ಎರಡು ವರ್ಷದಿಂದ ನಡೆದಿರುವ ಹೋರಾಟಕ್ಕೂ ಮಣಿಯದ ಪ್ರಾಧಿಕಾರ ಕಾಮಗಾರಿ ಆರಂಭಿಸಲು ಮುಂದಾಗುತ್ತಿದ್ದಂತೆ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ :ಕಳ್ಳರ ಅಟ್ಟಹಾಸಕ್ಕೆ ನಲುಗಿದ ಕುಂದಾನಗರಿ

ಬೆ„ಪಾಸ್‌ ರಸ್ತೆ ಕಾಮಗಾರಿಗೆ ಜಿಲ್ಲಾಡಳಿತ ಅವಕಾಶ ನೀಡಬಾರದು. ರಾಷ್ಟ್ರೀಯ ಹೆದ್ದಾರಿ ಪ್ರಾ ಧಿಕಾರದವರು ಸ್ಥಳಕ್ಕೆ ಬಂದು ರೈತರ ಮೇಲೆ ದಬ್ಟಾಳಿಕೆ ನಡೆಸುತ್ತಿದ್ದಾರೆ. ಫಲವತ್ತಾದ ಭೂಮಿ ಕಬಳಸಿಕೊಂಡು ಪ್ರಾಧಿಕಾರ ಬೈಪಾಸ್‌ ರಸ್ತೆ ನಿರ್ಮಿಸುವ ಮೂಲಕ ರೈತರನ್ನು ಒಕ್ಕಲೆಬ್ಬಿಸುತ್ತಿದೆ. ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

ಶೇ. 75ರಷ್ಟು ರೈತರು ಹಣ ಪಡೆದಿದ್ದಾರೆ ಎಂಬುದಾಗಿ ಪ್ರಾ ಧಿಕಾರ ಸುಳ್ಳು ಮಾಹಿತಿ ನೀಡುತ್ತಿದೆ. ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ಕೋರ್ಟ್‌ ಯಾವುದೇ ತಡೆಯಾಜ್ಞೆ ತೆರವುಗೊಳಿಸಿಲ್ಲ. ರೈತರ ದಿಕ್ಕು ತಪ್ಪಿಸುವ ಕೆಲಸ ಪ್ರಾಧಿಕಾರ ಮಾಡಬಾರದು ಎಂದು ಒತ್ತಾಯಿಸಿದರು.

ರೈತ ಮುಖಂಡರಾದ ರಾಜು ಮರವೆ, ಪ್ರಕಾಶ ನಾಯಕ, ಹನುಮಂತ ಬಾಳೇಕುಂದ್ರಿ, ಭೆ„ರು ಕಂಗ್ರಾಳಕರ, ಉಮೇಶ ಬಿರ್ಜೆ, ತಾನಾಜಿ ಹಲಗೇಕರ, ಅನಿಲ್‌ ಅನಗೋಳಕರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next