Advertisement
ಇಂದಿನ ದಿನಗಳಲ್ಲಿ ಹಲವಾರು ಜನರು ಸಾಮಾನ್ಯವಾಗಿ ಅನುಭವಿಸುತ್ತಿರುವ ಸಮಸ್ಯೆಗಳಲ್ಲಿ ಸ್ಥೂಲ ಕಾಯವೂ ಒಂದಾಗಿದೆ. ದೇಹವು ನಮ್ಮ ನಿಯಂತ್ರಣ ತಪ್ಪಿ ಬೆಳೆದು ಮಧುಮೇಹ , ಅಧಿಕ ರಕ್ತದೊತ್ತಡವನ್ನು ಒಳಗೊಂಡಂತೆ ವಿವಿಧ ರೀತಿಯ ಸಮಸ್ಯೆಗಳಿಗೆ ಇದು ದಾರಿ ಮಾಡಿಕೊಡುತ್ತದೆ. ಇಂತಹ ಸ್ಥೂಲ ಕಾಯದ ಸಮಸ್ಯೆಯನ್ನು ನಿವಾರಿಸುವಲ್ಲಿ ಮೆಂತ್ಯ ಚೂರ್ಣವು ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ.
Related Articles
Advertisement
ಮೆಂತ್ಯ ಚೂರ್ಣ ಮಾಡುವ ವಿಧಾನ
ಮೊದಲಿಗೆ 100 ಗ್ರಾಂ ಮೆಂತ್ಯ, 50 ಗ್ರಾಂ ಓಂ ಕಾಳು, ಮತ್ತು 25 ಗ್ರಾಂ. ಕಹಿ ಜೀರಿಗೆಯನ್ನು ಚೆನ್ನಾಗಿ ಸ್ವಚ್ಚಮಾಡಿಕೊಂಡು ಸಣ್ಣ ಬೆಂಕಿಯಲ್ಲಿ ಹುರಿದುಕೊಳ್ಳಿ ( ಬೆಂಕಿ ಸಣ್ಣದಿದ್ದಷ್ಟೂ ಒಳ್ಳೆಯದು). ಬಳಿಕ ಇವುಗಳನ್ನು ಪುಡಿ ಮಾಡಿಕೊಂಡು ಚೂರ್ಣ ಮಾಡಿಕೊಳ್ಳಿ. ನಂತರ ಪ್ರತಿ ನಿತ್ಯ ರಾತ್ರಿ ಮಲಗುವ ಮುನ್ನ ಅರ್ಧ ಚಮಚ ಚೂರ್ಣವನ್ನು 50 ಎಂ. ಎಲ್ ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ಸೇವಿಸಿ.
ಮೆಂತ್ಯ ಚೂರ್ಣ ದ ಇತರ ಉಪಯೋಗಗಳು
ಈ ಮೆಂತ್ಯ ಚೂರ್ಣ ಕೇವಲ ಸ್ಥೂಲಕಾಯ ನಿವಾರಣೆಗಾಗಿ ಮಾತ್ರವಲ್ಲದೆ, ಮಧುಮೇಹ ನಿಯಂತ್ರಣ, ಜೀರ್ಣಕ್ರಿಯೆಯನ್ನು ಹೆಚ್ಚಿಸುವಿಕೆ, ಮಲಬದ್ಧತೆಯ ನಿವಾರಣೆಯಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡುವುದರೊಂದಿಗೆ , ರಕ್ತ ಪರಿಚಲನೆ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ ಮತ್ತು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಅಧಿಕಗೊಳಿಸುವುದರೊಂದಿಗೆ ಚರ್ಮ ಮತ್ತು ಕಣ್ಣುಗಳ ಆರೋಗ್ಯವನ್ನು ಕಾಪಾಡುತ್ತದೆ.