Advertisement

ಜನತಾ ಬಜಾರ್‌ ಆಡಳಿತ ಮಂಡಳಿ ವಿರುದ್ಧ ಸ್ತ್ರೀಶಕ್ತಿ ಒಕ್ಕೂಟ ಅಸಮಾಧಾನ 

03:47 PM Nov 30, 2017 | |

ಮಡಿಕೇರಿ: ಅಂಗನವಾಡಿಗಳಿಗೆ ಆಹಾರ ಸರಬರಾಜಾಗುತ್ತಿರುವ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಭಾರ ಉಪನಿರ್ದೇಶಕರ ವಿರುದ್ಧ ವಿನಾಕಾರಣ ಜನತಾ ಬಜಾರ್‌ ಆಡಳಿತ ಮಂಡಳಿ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಹಾಗೂ ಎಸ್‌ಎಸ್‌ಪಿಸಿಯ ಪದಾಧಿಕಾರಿಗಳು ಇದನ್ನು ಖಂಡಿಸುವುದಾಗಿ ತಿಳಿಸಿದ್ದಾರೆ.

Advertisement

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರೆಹನಾ ಫಿರೋಜ್‌‚, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಾಮಾಣಿಕರಾಗಿದ್ದು, ಜನತಾ ಬಜಾರ್‌ನಿಂದ ಆಹಾರ ಖರೀದಿಸಲಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕಾಗಿ ಕಮಿಷನ್‌ ಪಡೆಯುತ್ತಿದ್ದಾರೆ ಎಂದು ಆರೋಪ ಮಾಡುತ್ತಿರುವುದು ಮಹಿಳಾ ಅಧಿಕಾರಿಗೆ ಮಾಡುತ್ತಿರುವ ಅವಮಾನವೆಂದು ಅಸಮಾಧಾನ ವ್ಯಕ್ತಪಡಿಸಿದರು.

    ವೈಯಕ್ತಿಕ ಲಾಭಕ್ಕಾಗಿ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ದಬ್ಟಾಳಿಕೆ ನಡೆಸಿ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಆರೋಪಿಸಿದರು. ಎಸ್‌ಎಸ್‌ಪಿಸಿ ಘಟಕಗಳಿಗೆ ಆಹಾರವನ್ನು ಖರೀದಿಸುವ ಸ್ವಾತಂತ್ರ್ಯ ನೀಡಲಾಗಿದ್ದು, ಜನತಾ ಬಜಾ‚ರ್‌ನಿಂದಲೆ ಖರೀದಿಸಬೇಕೆನ್ನುವ ನಿಯಮವಿಲ್ಲ. ಹಾಗೊಂದು ವೇಳೆ ಖರೀದಿಸಲೇಬೇಕೆಂದು ಇದ್ದಲ್ಲಿ ಮನವಿ ಮಾಡಿಕೊಳ್ಳಬೇಕೇ ಹೊರತು ದಬ್ಟಾಳಿಕೆ ನಡೆಸಬಾರದೆಂದರು. 

 ಮಹಿಳೆಯರ ಸಬಲೀಕರಣಕ್ಕಾಗಿ ಎಂಎಸ್‌ಪಿಸಿ ಘಟಕವನ್ನು ಸ್ಥಾಪಿಸಿ ಸರಕಾರ ಪ್ರೋತ್ಸಾಹವನ್ನು ನೀಡುತ್ತಿದೆ. ಕೊಡಗಿನಲ್ಲಿ 1,152 ಸ್ತ್ರೀಶಕ್ತಿ ಗುಂಪುಗಳಿದ್ದು, ಸುಮಾರು 19 ಸಾವಿರ ಮಹಿಳಾ ಸದಸ್ಯರಿದ್ದಾರೆ. 2 ಕೋಟಿ ರೂ.ಗಳಷ್ಟು ಉಳಿತಾಯವಿದ್ದು, ಆಂತರಿಕ ಸಾಲವನ್ನು ಪಡೆದು ಮಹಿಳಾ ಸಮೂಹ ಆರ್ಥಿಕವಾಗಿ ಸಬಲವಾಗುತ್ತಿದೆ. ಆದ್ದರಿಂದ ಮಹಿಳೆಯರನ್ನು ಪ್ರೋತ್ಸಾಹಿಸಬೇಕೆ ಹೊರತು ಅವರ ಮೇಲೆ ದಬ್ಟಾಳಿಕೆ ನಡೆಸಬಾರದೆಂದು ರೆಹನಾ ಫಿರೋಜ್‌ ಒತ್ತಾಯಿಸಿದರು. ಜನತಾ ಬಜಾರ್‌ ಆಡಳಿತ ಮಂಡಳಿಯಿಂದ ಇದೇ ರೀತಿಯ ವರ್ತನೆ ಮುಂದುವರಿದಲ್ಲಿ ಒಕ್ಕೂಟದ ವತಿಯಿಂದ ತೀವ್ರ ರೀತಿಯ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಎಂಎಸ್‌ಪಿಸಿಯ ಜಿಲ್ಲಾಧ್ಯಕ್ಷರಾದ ಮಣಿ ಲೋಕೇಶ್‌ ಹಾಗೂ ಕಾರ್ಯದರ್ಶಿ ಮೋಹನಾಕ್ಷಿ ಮಾತನಾಡಿ, ಜನತಾ ಬಜಾರ್‌ ಈ ಹಿಂದೆ ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡಿದ್ದಕ್ಕಾಗಿ ಹಾಸನ ಮತ್ತು ಮೈಸೂರು ಭಾಗದಿಂದ ಸಾಮಗ್ರಿಗಳನ್ನು ಖರೀದಿಸಬೇಕಾಯಿತೆಂದು ಸ್ಪಷ್ಟಪಡಿಸಿದರು. ಪ್ರತಿ ತಿಂಗಳು 12 ಲಕ್ಷ ರೂ. ಆಹಾರ ಸಾಮಗ್ರಿಗಳನ್ನು ಖರೀದಿಸಲಾಗುತ್ತಿದೆ. ಆದರೆ, ಯಾವುದೇ ಟೆಂಡರ್‌ ಪ್ರಕ್ರಿಯೆ ನಡೆಸುತ್ತಿಲ್ಲ. ಮುಂದಿನ ದಿನಗಳಲ್ಲಿ ಟೆಂಡರ್‌ ಕರೆಯುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

Advertisement

 ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಎ.ಬಿ.ಕವಿತಾ, ಖಜಾಂಚಿ ಎಂ.ಎಸ್‌. ರೆಜಿನಿ ಹಾಗೂ ಎಂಎಸ್‌ಪಿಸಿಯ ಖಜಾಂಚಿ ಶಾಂತಾ ಸುರೇಶ್‌ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next