ವಾಡಿ: ಭಾರತ ಸ್ವಾತಂತ್ರ ಚಳವಳಿ ಗೆಲ್ಲಲು ನೇತಾಜಿ ಸುಭಾಶ್ಚಂದ್ರ ಬೋಸ್ ಸ್ತ್ರೀಶಕ್ತಿಯನ್ನು ಸಜ್ಜುಗೊಳಿಸುವ ಮೂಲಕ ಕ್ರಾಂತಿಗೆ ಕರೆನಿಡಿದ್ದರು ಎಂದು ಎ.ಐ.ಡಿ.ವೈ.ಒ ರಾಜ್ಯಾಧ್ಯಕ್ಷೆ ಎಂ. ಉಮಾದೇವಿ ಹೇಳಿದರು.
ಪಟ್ಟಣದ ಉರುಸ್ ಮಹಲ್‌ನಲ್ಲಿ ಎಐಡಿಎಸ್‌ಒ, ಎಐಡಿವೈಒ ಹಾಗೂ ಆವಿಷ್ಕಾರ ಸಂಘಟನೆಗಳು ಏರ್ಪಡಿಸಿದ್ದ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ 121ನೇ ಜಯಂತಿ ನಿಮಿತ್ತದ ಸಾಂಸ್ಕೃತಿಕ ಜನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಚಳವಳಿಯಲ್ಲಿ ಮಹಿಳೆಯರನ್ನು ಹುರಿದುಂಬಿಸಲು ಮಹಿಳೆಯರಿಗಾಗಿ ಝಾನ್ಸಿ ರಾಣಿ ರೆಜಿಮೆಂಟ್ ಸ್ಥಾಪಿಸಿದ್ದು ಹೋರಾಟಕ್ಕೆ ದೊಡ್ಡ ಶಕ್ತಿ ತಂದು ಕೊಟ್ಟಿತ್ತು ಎಂದರು.
ಇವತ್ತು ನಮ್ಮ ದೇಶದಲ್ಲಿ ಧರ್ಮ ಮತ್ತು ಜಾತಿ ಗಡಿಗಳನ್ನು ಮೀರಿ ಎಲ್ಲ ಜನರನ್ನು ಕಾಡುವ ಆರ್ಥಿಕ ಸಮಸ್ಯೆಗಳ ಬಗ್ಗೆ ಒತ್ತಿ ಹೇಳಬೇಕಾದ ಅವಶ್ಯಕತೆ ಇದೆ. ಬಡತನ, ಹಸಿವು, ನಿರುದ್ಯೋಗ, ಅನಕ್ಷರತೆ, ಅನಾರೋಗ್ಯ, ದುಬಾರಿ ತೆರಿಗೆ ಮತ್ತು ಸಾಲಬಾಧೆಯಂತ ಜ್ವಲಂತ ಸಮಸ್ಯೆಗಳು ಬಗೆಹರಿಯಬೇಕೆಂದರೆ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕೆಂಬ ನೇತಾಜಿಯವರ ಚಿಂತನೆ ಸಾಕಾರಗೊಳಿಸಬೇಕಾಗಿದೆ ಎಂದು ಹೇಳಿದರು.
ನಮ್ಮನ್ನು ನವಯುಗದ ಗುಲಾಮರನ್ನಾಗಿಟ್ಟುಕೊಳ್ಳಲು ದೇಶದ ಬಂಡವಾಳಶಾಹಿಗಳು, ಆಳ್ವಿಕರು ನಡೆಸುತ್ತಿರುವ ಕುತಂತ್ರಗಳನ್ನು ಮೀರಿ, ಅನ್ಯಾಯಗಳ ವಿರುದ್ಧ ನಿರಂತರ ಹೋರಾಟ ಬೆಳೆಸುತ್ತ, ನೇತಾಜಿ, ಭಗತ್‌ಸಿಂಗ್, ಖುದಿರಾಮ ಭೋಸ್ ಮುಂತಾದ ಲಕ್ಷಾಂತರ ಕ್ರಾಂತಿಕಾರಿಗಳು ಕಂಡ ಶೋಷಣಾರಹಿತ ಸಮಾಜದ ಕನಸನ್ನು ನನಸು ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಎಐಡಿಎಸ್‌ಒ ಕಾರ್ಯದರ್ಶಿ ಮಲ್ಲಿನಾಥ ಹುಂಡೆಕಲ್ ಮಾತನಾಡಿದರು.
ಪಟ್ಟಣದ ಹಿರಿಯ ವೈದ್ಯ ಡಾ| ಎಸ್.ವಿ. ಇಂಗಳೇಶ್ವ ಮುಖ್ಯಅತಿಥಿಯಾಗಿದ್ದರು. ಎ.ಡಿ.ವೈ.ಒ ಕಾರ್ಯದರ್ಶಿ ಶರಣು ವಿ.ಕೆ. ಅಧ್ಯಕ್ಷತೆ ವಹಿಸಿದ್ದರು. ಎ.ಐ.ಡಿ.ಎಸ್.ಒ ಸ್ಥಳೀಯ ಕಾರ್ಯದರ್ಶಿ ಮಲ್ಲಿನಾಥ ಹುಂಡೆಕಲ್ ಮಾತನಾಡಿದರು. ಎ.ಐ.ಡಿ.ವೈ.ಒ ಸ್ಥಳೀಯ ಕಾರ್ಯದರ್ಶಿ ಶರಣು ವಿ.ಕೆ. ಅಧ್ಯಕ್ಷತೆ ವಹಿಸಿದ್ದರು.
ಎಸ್‌ಯುಸಿಐ ಸ್ಥಳೀಯ ಸಮಿತಿ ಕಾರ್ಯದರ್ಶಿ ಆರ್. ಕೆ. ವೀರಭದ್ರಪ್ಪ, ಎಐಡಿಎಸ್‌ಒ ಅಧ್ಯಕ್ಷ ಶರಣು ಹೇರೂರ, ಗುಂಡಣ್ಣ ಎಂ.ಕೆ., ರಾಘವೇಂದ್ರ ಅಲ್ಲಿಪುರ, ವೀರಭದ್ರಪ್ಪ ಕೇಶ್ವರ, ಶಿವಕುಮಾರ ಆಂದೋಲಾ, ಮಲ್ಲಣ್ಣ ದಂಡಬಾ, ಶರಣು ದೋಶಟ್ಟಿ. ಶ್ರೀ ಶರಣ ಹೊಸಮನಿ, ಗೌತಮ ಪರತೂರಕರ, ಆರ್.ಜಿ. ವೆಂಕಟೇಶ, ರಾಜು ಒಡೆಯರ, ದೌಲಪ್ಪ ದೊರೆ, ಶ್ರೀಶೈಲ ಕೆಂಚಗುಂಡಿ ಪಾಲ್ಗೊಂಡಿದ್ದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶರತ್ ಚಂದ್ರ ಚಟರ್ಜಿಯವರ ಕಥೆಯಾಧಾರಿತ ಮಹೇಶ ನಾಟಕ, ನೇತಾಜಿ ಜೀವನ ಹೋರಾಟ ರೂಪಕ, ಕೋಲಾಟ ಪ್ರದರ್ಶನವಾಯಿತು.