ಕೊಪ್ಪಳ: ಶಾಲೆಯ ಠೇವಣಿ ಹಣ ವಾಪಸ್ ನೀಡಲು ಲಂಚ ಪಡೆಯುತ್ತಿದ್ದ ಕೊಪ್ಪಳ ಬಿಇಓ ಹಾಗೂ ಎಸ್ಡಿಸಿ ಅವರ ಮೇಲೆ ಬಿಇಒ ಕಚೇರಿಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಒಬ್ಬರನ್ನ ಬಂಧಿಸಿದ್ದಾರೆ.
ಕೊಪ್ಪಳ ಬಿಇಓ ಉಮಾದೇವಿ ಸೊನ್ನದ್, ಎಸ್ಡಿಎ ಅರುಂದತಿ ಬಲೆಗೆ ಬಿದ್ದವರು.
ಭಾಗ್ಯನಗರ ಎಸ್.ಎಸ್.ಕೆ ಶಾಲೆಯು ಬಂದ್ ಆದ ಕಾರಣ ಠೇವಣಿಯ 10 ಸಾವಿರ ರೂ ವಾಪಸ್ ನೀಡುವಂತೆ ಶಾಲೆ ಮುಖ್ಯಸ್ಥ ಬಾಲು ಕಬಾಡಿ ಅವರು ಅರ್ಜಿ ಸಲ್ಲಿಸಿದ್ದರು. ಆದರೆ ಮನವಿಗೆ ಸ್ಪಂದಿಸದ ಬಿಇಓ ಅವರು ಸುಮಾರು ದಿನಗಳ ಕಾಲ ಅಲೆದಾಡಿಸಿದ್ದರು. ಕೊನೆಗೆ 10 ಸಾವಿರ ರೂಪಾಯಿಯಲ್ಲಿ 5 ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಬಿಇಒ ಬೇಡಿಕೆಯ ಕುರಿತು ದೂರುದಾರ ಬಾಲು ಕಬಾಡಿಯವರು ಎಸಿಬಿಗೆ ದೂರು ನೀಡಿ, ಗುರುವಾರ ಸಂಜೆ 5 ಸಾವಿರ ಹಣವನ್ನು ಬಿಇಒ ಕಚೇರಿಯಲ್ಲಿ ನೀಡುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇದನ್ನೂ ಓದಿ :ಕರ್ನಾಟಕ, ಮಹಾರಾಷ್ಟ್ರ, ಕೇರಳ, ಪಂಜಾಬ್ ನಲ್ಲಿ ಕೋವಿಡ್ ಪ್ರಕರಣಗಳ ಏರಿಕೆ..!
ಬಳ್ಳಾರಿ ಎಸ್ಪಿ ಗುರುನಾಥ ಮತ್ತೂರ ಮಾರ್ಗದರ್ಶನದಲ್ಲಿ ಡಿಎಸ್ಪಿ ಶಿವಕುಮಾರ್, ಎಸ್ ಐ ಎಸ್ ಎಸ್ ಬೀಳಗಿ, ಎಸೈ ಬಾಳನಗೌಡ ತಂಡದಿಂದ ದಾಳಿ ನಡೆಸಿದ್ದಾರೆ. ಎಸ್ಡಿಎ ಅರುಂಧತಿ ಅವರನ್ನು ಬಂಧಿಸಿದ್ದು, ಬಿಇಓ ಶ್ರೀಮತಿ ಉಮಾದೇವಿ ಸೊನ್ನದ ತಲೆ ಮರಿಸಿಕೊಂಡಿದ್ದಾರೆ.