Advertisement
ಈ ಮೂಲಕ ಮಹಿಳೆಯರು ಅಥವಾ ತೊಂದರೆಯಲ್ಲಿರುವ ಸಾರ್ವಜನಿಕರು ನೇರವಾಗಿ ಕಮಿಷನರ್ ಕಚೇರಿಯಲ್ಲಿರುವ ಕಮಾಂಡೋ ಕೇಂದ್ರವನ್ನು ಸಂಪರ್ಕಿಸಬಹುದು. ತತ್‌ಕ್ಷಣವೇ ಕೇಂದ್ರದ ಅಧಿಕಾರಿಗಳು ಸ್ಪಂದಿಸಲಿದ್ದು, ಸ್ಥಳಕ್ಕೆ ನೂತನ ಪಿಂಕ್ ಹೊಯ್ಸಳ ವಾಹನ ಕಳುಹಿಸಲಿದ್ದಾರೆ.
Related Articles
Advertisement
ಮಹಿಳೆಯರ ರಕ್ಷಣೆಗೆ ನಿಂತ ಮಹಿಳಾ ಸಿಬ್ಬಂದಿಬೆಂಗಳೂರು: ರಾಜಧಾನಿಯಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ 51 ಹೊಸ ಪಿಂಕ್ ಹೊಯ್ಸಳ ವಾಹನಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ವಿಧಾನಸೌಧದ ಮುಂಭಾಗದಲ್ಲಿ ಹೊಸ ಪಿಂಕ್ ಹೊಯ್ಸಳ ವಾಹನ ಹಾಗೂ ಸುರಕ್ಷಾ ಆಪ್‌ಗೆ ಚಾಲನೆ ನೀಡಿದ ಅವರು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಪಿಂಕ್ ಹೊಯ್ಸಳ ವಾಹವನ್ನು ಲೋಕಾರ್ಪಣೆ ಮಾಡಿದ್ದೇವೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ, ಸರಗಳ್ಳತನ ಹಾಗೂ ಗೂಂಡಾಗಳ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಪೊಲಿಸ್ ಇಲಾಖೆ ಚುರುಕಾಗಿದ್ದಾರೆ ಎಂದು ಹೇಳಿದರು. ನಗರದಲ್ಲಿ ಈಗಾಗಲೇ 221 ಹೊಯ್ಸಳ ವಾಹನಗಳು ಗಸ್ತು ತಿರುಗುತ್ತಿವೆ. ಈಗ 51 ಪಿಂಕ್ ಹೊಯ್ಸಳ ಸೇರ್ಪಡೆಯಾಗಲಿವೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವ ಹಾಗೂ ವಾಸಿಸುವ ಪ್ರದೇಶಗಳಲ್ಲಿ ಪಿಂಕ್ ಹೊಯ್ಸಳ ಗಸ್ತು ತಿರುಗಲಿದೆ. ಪಿಂಕ್ ಹೊಯ್ಸಳದಲ್ಲಿ ಮಹಿಳಾ ಸಿಬ್ಬಂದಿಯೇ ಹೆಚ್ಚಿನ ಸಂಖ್ಯೆಯಲ್ಲಿ ಇರುವಂತೆ ನೋಡಿಕೊಳ್ಳಲು ಪೋಲಿಸ್ ಇಲಾಖೆ ನಿರ್ಧರಿಸಿದೆ. ಯಡಿಯೂರಪ್ಪ ಯೋಗ್ಯತೆ ಇಲ್ಲದ ವ್ಯಕ್ತಿ: ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತದಾರರಿಗೆ ಹಣ ಹಂಚಿಕೆ ಮಾಡಿದೆ ಎಂದು ಆರೋಪಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಯಡಿಯೂರಪ್ಪನವರು ಯೋಗ್ಯತೆ ಇಲ್ಲದ ವ್ಯಕ್ತಿ. ತಾವು ಮಾಡಿದ್ದನ್ನು ಅವರು ನಮ್ಮ ಮೇಲೆ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 15 ನಿಮಿಷದಲ್ಲಿ ಸ್ಥಳಕ್ಕೆ
ಸುರಕ್ಷಾ ಆ್ಯಪ್ “ಪಿಂಕ್ ಹೊಯ್ಸಳ’ದೊಂದಿಗೆ ಲಿಂಕ್ ಆಗಿದೆ. ಹೋಯ್ಸಳ ವಾಹನಗಳು ಸೋಮವಾರದಿಂದ ರಸ್ತೆಗಿಳಿದಿವೆ. ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಉದ್ದೇಶದಿಂದಲೇ 51 ಪಿಂಕ್ ಹೊಯ್ಸಳ ವಾಹನಗಳು ನಗರಾದ್ಯಂತ ಗಸ್ತು ತಿರುಗಲಿವೆ. ಒಟ್ಟಾರೆ 272 ಹೊಯ್ಸಳ ವಾಹನಗಳು ಸಂಚರಿಸಲಿವೆ. ಈ ವಾಹನದಲ್ಲಿ ಮೊಬೈಲ್ ಡೆಟಾ ಟರ್ಮಿನಲ್(ಮಾರ್ಗ ತೋರಿಸುವ ವ್ಯವಸ್ಥೆ), ವೈರ್‌ಲೆಸ್, ಅಗ್ನಿನಂದಕ, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಸಾxéಂಡರ್ಡ್ ಆಪರೇಟರ್ ಪ್ರೋಸಿಜರ್ ಸೇರಿದಂತೆ ಇತರೆ ಉಪಯೋಗಳು ಈ ವಾಹನದಲ್ಲಿ ಅಳವಡಿಸಲಾಗಿದೆ. ಜತೆಗೆ ಈ ವಾಹನದಲ್ಲಿ ಪುರುಷ ಚಾಲಕ(ಕಾನ್‌ಸ್ಟೆಬಲ್), ಮಹಿಳಾ ಹೆಡ್ ಕಾನ್‌ಸ್ಟೆಬಲ್ ಅಥವಾ ಕಾನ್‌ಸ್ಟೆಬಲ್ ಹಾಗೂ ಒಬ್ಬ ಮಹಿಳಾ ಎಎಸ್‌ಐ ಇರಲಿದ್ದಾರೆ. ಲಂಡನ್ ಮಾದರಿ
ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಬಂದು ಕೇವಲ 15 ನಿಮಿಷದಲ್ಲೇ ಸ್ಥಳಕ್ಕೆ ತೆರಳಿ ಸಂತ್ರಸ್ತೆರಿಗೆ ನೆರವು ನೀಡುವ ಲಂಡನ್ ಮಾದರಿಯ ಪೊಲೀಸ್ ವ್ಯವಸ್ಥೆಯನ್ನು ರಾಜ್ಯದಲ್ಲಿ ತರಲು ಪೊಲೀಸ್ ಆಯುಕ್ತರು ಮುಂದಾಗಿದ್ದಾರೆ. ವಿದೇಶಿದ ಮಾದರಿಯಲ್ಲೇ ಸುರಕ್ಷಾ ಆ್ಯಪ್ ಸಿದ್ಧಪಡಿಸಿದ್ದು, ಪಿಂಕ್ ಹೊಯ್ಸಳ ವಾಹನ ವ್ಯವಸ್ಥೆಯನ್ನೂ ಜಾರಿಗೆ ತಂದಿದ್ದಾರೆ. ಲಂಡನ್‌ನಲ್ಲಿ ಘಟನೆ ನಡೆದ 8-10 ನಿಮಿಷದಲ್ಲಿ ಪೊಲೀಸರು ಸ್ಥಳ ತಲುಪುತ್ತಾರೆ. ಆದರೆ, ಬೆಂಗಳೂರಿನಲ್ಲಿ ಸಂಟಾರ ದಟ್ಟಣೆ ಇರುವುದರಿಂದ ಕನಿಷ್ಠ 20-25 ನಿಮಿಷ ಬೇಕಾಗುತ್ತದೆ. ಇದನ್ನು 10-15 ನಿಮಿಷಕ್ಕೆ ಇಳಿಸಲಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ. 100ಕ್ಕೆ ಡಯಲ್ ಮಾಡಿದರೂ ಸಾಕು
ಆಯ್ದ ಸ್ಥಳಗಳಲ್ಲಿ 3-4 ಪಿಂಕ್ ವಾಹನಗಳು 4 ತಾಸು ನಿಂತಿರುತ್ತವೆ. ದೂರುಗಳು ಬಂದರೆ ತಕ್ಷಣ ಸ್ಥಳಕ್ಕೆ ಹೋಗಿ, ತೊಂದರೆಯಲ್ಲಿ ಸಿಲುಕಿದವರಿಗೆ ನೆರವು ನೀಡಿ, ಮತ್ತೆ ಅದೇ ಸ್ಥಳಕ್ಕೆ ಬಂದು ನಿಲ್ಲುತ್ತದೆ. ಕಮಾಂಡೋ ಸೆಂಟರ್ ಮಾತ್ರವಲ್ಲದೇ, ಪೊಲೀಸ್ ಕಂಟ್ರೋಲ್ ರೂಂ 100ಕ್ಕೆ ಡಯಲ್ ಮಾಡಿದರು ಪಿಂಕ್ ಹೊಯ್ಸಳ ವಾಹನಗಳು ಸ್ಪಂದಿಸಲಿವೆ. ಈ ಹಿನ್ನೆಲೆಯಲ್ಲಿ ಕಮಾಂಡೋ ಸೆಂಟರ್ ಮತ್ತು ಪೊಲೀಸ್ ಕಂಟ್ರೋಲ್ ರೂಂ 100 ಲೈನ್‌ಗಳನ್ನು ಮತ್ತಷ್ಟು ದ್ವಿಗುಣಗೊಳಿಸಲಾಗುತ್ತದೆ. ಇದಕ್ಕಾಗಿ ಸುಮಾರು 20 ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.