Advertisement

ಹೆಣ್ಣು ಮಕ್ಕಳ ಜನನಾಂಗ ಊನ ಪದ್ಧತಿಗೆ ಸುಪ್ರೀಂ ಕೋರ್ಟ್‌ ಕಿಡಿ

06:00 AM Jul 31, 2018 | Team Udayavani |

ಹೊಸದಿಲ್ಲಿ: ದಾವೂದಿ ಬೋಹ್ರಾ ಮುಸ್ಲಿಂ ಸಮುದಾಯದಲ್ಲಿನ ಹೆಣ್ಣು ಮಕ್ಕಳ ಜನನಾಂಗ ಊನಗೊಳಿಸುವಿಕೆ ಪದ್ಧತಿ ವಿರುದ್ಧ ಕಿಡಿಕಾರಿರುವ ಸುಪ್ರೀಂಕೋರ್ಟ್‌, ಹೆಣ್ಣು ಮಕ್ಕಳು ಮದುವೆಗಾಗಿ ಮತ್ತು ಗಂಡನಿಗಾಗಿಯೇ ಬದುಕಬೇಕೇ ಎಂದು ಪ್ರಶ್ನಿಸಿದೆ. ಹೆಣ್ಣು ಮಕ್ಕಳು ಗಂಡನಿಗಾಗಿಯೇ ಎಲ್ಲವನ್ನು ನಿಗ್ರಹಿಸಿಕೊಂಡಿರಬೇಕು ಎಂಬುದು ಸಂವಿಧಾನದತ್ತವಾಗಿದೆ ಎಂದು ಹೇಳಲೂ ಸಾಧ್ಯವಿಲ್ಲ, ಹಾಗೆಯೇ ಇಂಥ ಪದ್ಧತಿಗಳು ಆಕೆಯ ಖಾಸಗಿ ಹಕ್ಕಿನ ಉಲ್ಲಂಘನೆಯೂ ಹೌದು ಎಂದು ಮುಖ್ಯ ನ್ಯಾಯ ಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ. 

Advertisement

ಈ ಪದ್ಧತಿ ವಿರೋಧಿಸಿ ಸಲ್ಲಿಕೆಯಾಗಿರುವ ಅರ್ಜಿಗೆ ಕೇಂದ್ರವೂ ಬೆಂಬಲಿಸಿದ್ದು, ಧರ್ಮದ ಆಧಾರದಲ್ಲಿ ದೇಹದ ಯಾವುದೇ ಅಂಗದ ಊನ ಒಪ್ಪಲು ಸಾಧ್ಯವಿಲ್ಲ ಎಂದಿದೆ. ಈ ದಾವೂದಿ ಬೋಹ್ರಾ ಎನ್ನುವುದು ಶಿಯಾ ಪಂಗಡದಲ್ಲಿ ಉಪ ಸಮುದಾಯ. ಇದು ಖಾಟ್ನಾ ಅಥವಾ ಖಫ್j ಎಂಬ ಸಂಪ್ರದಾಯ ಹೊಂದಿದೆ. ಹೆಣ್ಣು ಮಗಳೊಬ್ಬಳು ವಿವಾಹದ ವರೆಗೆ ಶುದ್ಧಳಾಗಿ ಇರಬೇಕು ಎಂಬ ಕಾರಣಕ್ಕೆ ಅದನ್ನು ಆಚರಿಸಿಕೊಂಡು ಬರಲಾಗುತ್ತಿದೆ.  ಸಮುದಾಯದ ಪರ ಹಾಜರಿದ್ದ ವಕೀಲ ಅಭಿಷೇಕ್‌ ಸಿಂಘ್ವಿ, ಈ ವಿಚಾರವನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸುವಂತೆ ಕೋರಿದರು.  ಧಾರ್ಮಿಕ ಸಂಪ್ರದಾಯವಾಗಿರುವುದರಿಂದ ಕೋರ್ಟ್‌ ಮಧ್ಯಪ್ರವೇಶ ಮಾಡಬಾರದು ಎಂದು ವಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next