Advertisement

ಹನೂರು ಪಟ್ಟಣಕ್ಕೂ ಕಾಲಿಟ್ಟ ಕೋವಿಡ್ 19 ಸೋಂಕು: ಮಹಿಳೆಗೆ ಸೋಂಕು ದೃಢ

01:28 PM Jul 11, 2020 | keerthan |

ಹನೂರು(ಚಾಮರಾಜನಗರ): ಪಟ್ಟಣಕ್ಕೂ ಕೋವಿಡ್-19 ಮಹಾಮಾರಿ ಆತಂಕ ಪ್ರಾರಂಭವಾಗಿದ್ದು ಸೊಪ್ಪಿನಕೇರಿ ಬಡಾವಣೆಯಲ್ಲಿ ಪ್ರಥಮ ಪ್ರಕರಣ ದಾಖಲಾಗಿದೆ.

Advertisement

ಸೊಪ್ಪಿನಕೇರಿ ಬಡಾವಣೆಯ ಮಹಿಳೆಯೋರ್ವರಿಗೆ ಸೋಂಕು ದೃಢಪಟ್ಟ ಹಿನ್ನೆಲೆ ಶನಿವಾರ ಬೆಳಗ್ಗೆಯೇ ಆರೋಗ್ಯ ಇಲಾಖಾ ಅಧಿಕಾರಿಗಳು ಸೋಂಕಿತರನ್ನು ಆಸ್ಪತ್ರಗೆ ರವಾನಿಸಿದ್ದಾರೆ. ಸೋಂಕಿತ ಮಹಿಳೆಯು ಮಂಡ್ಯದಿಂದ ಹನೂರು ಪಟ್ಟಣಕ್ಕೆ ವಿವಾಹವಾಗಿದ್ದರು. ಕೆಲ ದಿನಗಳ ಹಿಂದೆ ಸೋಂಕಿತ ಮಹಿಳೆ ತವರು ಮನೆ ಮಂಡ್ಯಕ್ಕೆ ತೆರಳಿ ಗಂಡನ ಮನೆಗೆ ವಾಪಸ್ಸಾಗಿದ್ದರು. ಬಳಿಕ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಗಂಟಲು ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಆದರೆ ಮಹಿಳೆಯ ವರದಿ ಪಾಸಿಟಿವ್ ಬಂದ ಹಿನ್ನೆಲೆ ಆರೋಗ್ಯ ಇಲಾಖಾ ಅಧಿಕಾರಿಗಳು ಮತ್ತು ಕಂದಾಯ ಇಲಾಖಾ ಅಧಿಕಾರಿಗಳು ಆಕೆಯನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ.

ಸೋಂಕಿತ ಮಹಿಳೆಯಿದ್ದ ಬೀದಿ ಕಂಟೈನ್ಮೆಂಟ್ ಜೋನ್: ಪಟ್ಟಣದ ಸೊಪ್ಪಿನಕೇರಿ ಬೀದಿಯಲ್ಲಿ ಸೋಂಕಿತ ಮಹಿಳೆ ವಾಸವಿದ್ದ ಬೀದಿಯನ್ನು ಕಂಟೈನ್ಮೆಂಟ್ ಜೋನ್ ಎಂದು ಗುರುತಿಸಲಾಗಿದೆ. ಆ ಬೀದಿಯ ಸುತ್ತಮುತ್ತಲ ಪ್ರದೇಶವನ್ನು ಬಫರ್ ಝೋನ್ ಎಂದು ಗುರುತಿಸಲಾಗಿದೆ. ಇನ್ನು ಈ ಬೀದಿಗಳಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ದ್ರಾವಕ ಸಿಂಪಡಣೆ ಮಾಡಿ ಬ್ಲೀಚಿಂಗ್ ಪೌಡರ್ ಸಿಂಪಡಣೆ ಮಾಡಲಾಗಿದೆ.

ಬೂದುಬಾಳಿನಲ್ಲೂ ಕಂಟೈನ್ಮೆಂಟ್ ಜೋನ್: ತಾಲೂಕಿನ ಬೂದುಬಾಳು ಗ್ರಾಮದಲ್ಲಿ ಒಂದು ಕೋವಿಡ್ ಪ್ರಕರಣ ದೃಢಪಟ್ಟಿರುವ ಹಿನ್ನೆಲೆ ಸೋಂಕಿತ ವ್ಯಾಪಾರ ಮಾಡುತ್ತಿದ್ದ ಅಂಗಡಿಯ ಬೀದಿಯನ್ನು ಕಂಟೈನ್ಮೆಂಟ್ ಜೋನ್ ಎಂದು ಗುರುತಿಸಲಾಗಿದೆ. ಸೋಂಕಿತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿದ ಕೂಡಲೇ ಕಂದಾಯ ಇಲಾಖಾ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಆರ್ವಜನಿಕರಿಗೆ ಅಗತ್ಯ ತಿಳುವಳಿಕೆ ನೀಡಿ ಬೀದಿಗಳಿಗೆ ದ್ರಾವಕ ಸಿಂಪಡಣೆ ಮಾಡಿ ಬ್ಲೀಚಿಂಗ್ ಪೌಡರ್ ಸಿಂಪಡಣೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next