Advertisement

ಸ್ತ್ರೀ ಸಬಲೀಕರಣ ನಮ್ಮ ಕರ್ತವ್ಯ

10:50 AM Feb 26, 2018 | Team Udayavani |

ಹೊಸದಿಲ್ಲಿ: ಮಹಿಳೆಯರು ಎಲ್ಲ ವಲಯದಲ್ಲೂ ತೊಡಗಿಸಿ ಕೊಳ್ಳುವಂತೆ ಮಾಡುವುದು ಭಾರತದ ಮೂಲಭೂತ ಕರ್ತವ್ಯ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್‌ ಕೀ ಬಾತ್‌ನಲ್ಲಿ ಹೇಳಿದ್ದಾರೆ. ಅಲ್ಲದೆ ನವಭಾರತದಲ್ಲಿ ಮಹಿಳೆಯರು ಅಭಿವೃದ್ಧಿಯಲ್ಲಿ ಸಶಕ್ತ ಮತ್ತು ಸಬಲ ಮತ್ತು ಸಮಾನ ಪಾಲುದಾರಿಕೆಯನ್ನು ಹೊಂದಿರಬೇಕು ಎಂದು ಅವರು ಹೇಳಿದರು.

Advertisement

ಮಹಿಳೆಯರ ಬಗ್ಗೆ ವಿವೇಕಾನಂದರ ಮಾತುಗಳನ್ನೂ ಪ್ರಧಾನಿ ಮೋದಿ, ಮಾರ್ಚ್‌ 8ರ ಅಂತಾರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ನೆನಪಿಸಿಕೊಂಡರು. ಪರಿಪೂರ್ಣ ಸ್ತ್ರೀತ್ವವೇ ಪರಿಪೂರ್ಣ ಸ್ವಾತಂತ್ರ್ಯ ಎಂದು ವಿವೇಕಾನಂದ ಹೇಳಿದ್ದಾರೆ. ವ್ಯಕ್ತಿಯೊಬ್ಬನನ್ನು ಈ ಮಹಿಳೆಯ ಪುತ್ರ ಎಂದು ಗುರುತಿಸುವ ಸಂಪ್ರದಾಯ ನಮ್ಮದು. ಹೀಗಾಗಿಯೇ ಯಶೋದಾ ನಂದನ, ಕೌಶಲ್ಯ ನಂದನ, ಗಾಂಧಾರಿ ಪುತ್ರ ಎಂದೆಲ್ಲ ಕರೆಯಲಾಗುತ್ತದೆ ಎಂದು ಮೋದಿ ಹೇಳಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ನಿರ್ಲಿಪ್ತವಾದದ್ದು. ಇವುಗಳಿಗೆ ಸ್ವತಂತ್ರ ಬುದ್ಧಿಮತ್ತೆ ಇಲ್ಲ. ಆದರೆ ಅವುಗಳಿಂದ ಯಾವ ಕೆಲಸ ಮಾಡಿಸಬೇಕು ಎಂಬುದನ್ನು ನಾವು ನಿರ್ಧರಿಸಬೇಕು. ಹೀಗಾಗಿ ತಂತ್ರಜ್ಞಾನವನ್ನು ನಾವು ನಮ್ಮ ಉದ್ದೇಶಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದೇ ವೇಳೆ, ಗೋಬರ್‌ ಧನ್‌ ಯೋಜನೆಗಾಗಿ ಆನ್‌ಲೈನ್‌ ಟ್ರೇಡಿಂಗ್‌ ಪ್ಲಾಟ್‌ಫಾರಂ ಸ್ಥಾಪನೆ ಮಾಡಲಿದ್ದು, ಕೃಷಿ ತ್ಯಾಜ್ಯ ಮಾರಾಟಕ್ಕೆ ರೈತರಿಗೆ ನೆರವು ನೀಡಲಾಗುತ್ತದೆ. ಗೋಬರ್‌ ಧನ ಯೋಜನೆಯಿಂದ ಜೈವಿಕ ತ್ಯಾಜ್ಯವನ್ನು ಅಡುಗೆ ಅನಿಲವಾಗಿ ಪರಿವರ್ತಿಸುವ ಕೆಲಸವೂ ನಡೆಯುತ್ತದೆ ಎಂದೂ ಪ್ರಧಾನಿ ಮೋದಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next