Advertisement

ಧಾರ್ಮಿಕ ಕ್ಷೇತ್ರಗಳಿಗೆ ಸ್ತ್ರೀ ಪ್ರವೇಶ: ನಾಡಿದ್ದು ವಾದ ವಿಚಾರ ನಿರ್ಧಾರ

09:52 AM Feb 05, 2020 | sudhir |

ಹೊಸದಿಲ್ಲಿ: ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿ ಯಾವ ರೀತಿಯ ಕಾನೂನಾತ್ಮಕ ಅಂಶಗಳನ್ನು ಪ್ರಸ್ತಾವಿಸಬಹುದು ಎಂಬ ಬಗ್ಗೆ ಗುರುವಾರದ ಒಳಗೆ ನಿರ್ಣಯಿಸುವುದಾಗಿ ಸುಪ್ರೀಂಕೋರ್ಟ್‌ ಸೋಮವಾರ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬೆx ನೇತೃತ್ವದ 9 ಸದಸ್ಯರ ಪೀಠ ಮುಂದಿನ ವಾರದಿಂದ ವಿಚಾರಣೆ ಕೈಗೆತ್ತಿ ಕೊ ಳ್ಳು ವ ಬಗ್ಗೆ ಮತ್ತು ನಿಗದಿತ ಕಾಲ ಮಿತಿಯ ಬಗ್ಗೆ ತಿಳಿಸುವುದಾಗಿ ಹೇಳಿದೆ. ನಾಲ್ವರು ಹಿರಿಯ ನ್ಯಾಯವಾದಿಗಳು ಯಾವೆಲ್ಲ ಅಂಶಗಳ ಬಗ್ಗೆ ವಾದ ಮಂಡಿಸಬೇಕು ಎಂಬ ಬಗ್ಗೆ ಒಮ್ಮತಕ್ಕೆ ಬರಲು ವಿಫ‌ಲವಾದ ಕಾರಣ ಗುರುವಾರ ಅದನ್ನು ನಿರ್ಧರಿಸುವುದಾಗಿ ಸಿಜೆಐ ಹೇಳಿದ್ದಾರೆ. ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಧಾರ್ಮಿಕ ಅಂಶಗಳನ್ನು ಪರಿಶೀಲಿಸುವುದಿಲ್ಲ. ಕೇವಲ ಕಾನೂನಾತ್ಮಕ ಅಂಶಗಳನ್ನು ಮಾತ್ರ ವಿಶ್ಲೇಷಿಸುತ್ತೇವೆ ಎಂದು ನ್ಯಾಯಪೀಠ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next