ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದ ಎದುರುಗಡೆಯೇ ಸ್ಟೇಜ್ ಹಾಕಿ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಸಲಾಗಿದೆ. ಹೆಬ್ಬಾಳ ಕ್ಷೇತ್ರದ ಬಿಜೆಪಿ ಮುಖಂಡರಾದ ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ಹಾಗೂ ಪರಿಷತ್ ಸದಸ್ಯ ವೈ ಎ ನಾರಾಯಣಸ್ವಾಮಿಯಿಂದ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಭಿನಂದನಾ ಕಾರ್ಯಕ್ರಮದಲ್ಲಿ ಸಾಕಷ್ಟು ಕಾರ್ಯಕರ್ತರು ಭಾಗಿಯಾಗಿದ್ದು, ಸಿಎಂ ಬೊಮ್ಮಾಯಿಗೆ ಶಾಲು ಹೊದಿಸಿ, ಕನ್ನಡ ಪುಸ್ತಕ ನೀಡಿ ಅಭಿನಂದಿಸಿದರು.
ಆದರೆ ಅಭಿನಂದನಾ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರವನ್ನು ಮರೆಯಲಾಗಿತ್ತು. ವೇದಿಕೆಯಲ್ಲೂ, ಬಿಜೆಪಿ ಕಾರ್ಯಕರ್ತರಿಂದಲೂ ಸಾಮಾಜಿಕ ಅಂತರ ಕಾಣಲಿಲ್ಲ.
ನಂತರ ಮಾತನಾಡಿದ ಸಿಎಂ ಬೊಮ್ಮಾಯಿ, ಬೆಂಗಳೂರು ನಗರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ನಗರ. ಮೊನ್ನೆ ಪ್ರಧಾನಿ ಗಳನ್ನು ಭೇಟಿ ಮಾಡಿದಾಗ ಬೆಂಗಳೂರು ನಗರದ ಬಗ್ಗೆ ಚರ್ಚೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡ ಬೆಂಗಳೂರು ನಗರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಉದ್ಯಮಿ ಸೆಂಟರ್, ಕಲ್ಚರ್, ಪ್ರವಾಸೋದ್ಯಮ ಎಲ್ಲವೂ ಬೆಂಗಳೂರಿಗೆ ಬರಬೇಕು ಎಂದರು.
ಇದನ್ನೂ ಓದಿ:ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಆನಂದ್ ಸಿಂಗ್ ಗೆ ಟಾಂಗ್ ನೀಡಿದ ಗೋವಿಂದ ಕಾರಜೋಳ
ಹೆಬ್ಬಾಳ ಕ್ಷೇತ್ರಕ್ಕೆ ಬರುವ ಇದೇ ರಸ್ತೆಯಲ್ಲಿ ಐದು ಜನ ಮುಖ್ಯಮಂತ್ರಿಗಳಾಗಿದ್ದಾರೆ. ಇಷ್ಟು ಪ್ರತಿಷ್ಠಿತ ಕ್ಷೇತ್ರ ಆಗಿರುವ ಇದು ಬೇರೆ ಕ್ಷೇತ್ರ ಗಳಿಗೂ ಮಾದರಿಯಾಗಬೇಕು ಹೆಬ್ಬಾಳ ಕ್ಷೇತ್ರದ ಸಮಗ್ರ ಅಭಿವೃದ್ಧಿ ಗೆ ನಾನು ಸಹಕಾರ ಕೊಡುತ್ತೇನೆ ಎಂದರು.
ಬಿಬಿಎಂಪಿ ಚುನಾವಣೆ ಬರುತ್ತಿದೆ. ಹೆಬ್ಬಾಳ ಕ್ಷೇತ್ರದ ಎಲ್ಲಾ ವಾರ್ಡ್ ಗಳಲ್ಲೂ ಬಿಜೆಪಿ ಗೆಲ್ಲಬೇಕು. ಈ ರೀತಿ ಎಲ್ಲರು ಒಟ್ಟಾಗಿ ಸಂಘಟನೆ ಮಾಡಬೇಕು. ನಾನು ನಿಮಗೆ ಸಂಪೂರ್ಣ ವಾದ ಬೆಂಬಲ ಕೊಡುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.